For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವೇತನ ಕಡಿತಕ್ಕೆ ಮುಂದಾದ ಟಾಟಾ ಸಮೂಹ

|

ಕೊರೊನಾವೈರಸ್ ಲಾಕ್‌ಡೌನ್ ಬಿಸಿ ತಟ್ಟಿರದೇ ಉಳಿದಿರುವ ಉದ್ಯಮವೇ ಉಳಿದಿಲ್ಲ. ದೇಶದ ಎಲ್ಲಾ ವಲಯಕ್ಕೂ ಕೊರೊನಾಘಾತವಾಗಿದ್ದು, ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹಕ್ಕೂ ಕೊರೊನಾವೈರಸ್ ಬಿಸಿ ಮುಟ್ಟಿಸಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಟಾಟಾ ಕಂಪನಿಯು ತನ್ನ ಉದ್ಯೋಗಿಗಳ ವೇತನ ಕಡಿತಕ್ಕೆ ಮುಂದಾಗಿದೆ.

ಟಾಟಾ ಸನ್ಸ್‌ ಅಧ್ಯಕ್ಷರು ಮತ್ತು ಎಲ್ಲಾ ಆಪರೇಟಿಂಗ್ ಕಂಪನಿಗಳ ಸಿಇಓಗಳು ಸಂಘಟನೆಯು ವೆಚ್ಚ ಕಡಿತ ಮಾಡುವ ಕ್ರಮ ಕೈಗೊಂಡಿರುವುದರಿಂದ ನೌಕರರಿಗೆ 20 ಪರ್ಸೆಂಟ್‌ರಷ್ಟು ಸಂಬಳ ಕಡಿತ ಮಾಡಲಾಗುತ್ತಿದೆ.

ಮೊದಲು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ವೇತನ ಕಡಿತ
 

ಮೊದಲು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ವೇತನ ಕಡಿತ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಿಇಒ ಮತ್ತು ಎಂಡಿ ರಾಜೇಶ್ ಗೋಪಿನಾಥನ್ ಅವರ ಸ್ಯಾಲರಿ ಪ್ಯಾಕೇಜ್ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2019-20ರಲ್ಲಿ 16 ಪರ್ಸೆಂಟ್ ಕಡಿತವಾಗಿದೆ. ಈ ಮೂಲಕ ಅವರ ಸ್ಯಾಲರಿ 13.3 ಕೋಟಿಗೆ ತಲುಪಿದೆ ಎಂದು ಕಂಪನಿಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿತ್ತು. ಈ ಮೂಲಕ ರಾಜೇಶ್ ಅವರ ವೇತನ ಕಡಿತ ಘೋಷಣೆಯ ಬಳಿಕ ಟಾಟಾ ಸಮೂಹದ ಇತರೆ ಸಂಸ್ಥೆಗಳು ಕೂಡ ಅದೇ ಹಾದಿಯನ್ನು ಹಿಡಿದಿವೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಸಂಸ್ಥೆಯ ಉಳಿಯುವಿಕೆಗೆ ವೆಚ್ಛ ಕಡಿಮೆ ಮಾಡಿಕೊಳ್ಳಬೇಕಿದೆ. ಆದುದರಿಂದ ನೌಕರರ ವೇತನವನ್ನೂ ಶೇಕಡಾವಾರು ಕಡಿತ ಮಾಡಬೇಕಾಗುತ್ತದೆ ಎಂದು ಇಂಡಿಯನ್ ಹೊಟೆಲ್ಸ್ ಹೇಳಿದೆ.

 ಟಾಟಾ ಸಮೂಹದ ಯಾವೆಲ್ಲಾ ಸಂಸ್ಥೆಗಳಲ್ಲಿ ವೇತನ ಕಡಿತ?

ಟಾಟಾ ಸಮೂಹದ ಯಾವೆಲ್ಲಾ ಸಂಸ್ಥೆಗಳಲ್ಲಿ ವೇತನ ಕಡಿತ?

ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟ್ರೆಂಟ್, ಟಾಟಾ ಇಂಟರ್‌ನ್ಯಾಷ್‌ನಲ್, ಟಾಟಾ ಕ್ಯಾಪಿಟಲ್ ಮತ್ತು ವೋಲ್ಟಾಸ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ‌ ನಿರ್ದೇಶಕರು ತಮ್ಮ ಸಂಸ್ಥೆಗಳ ನೌಕರರ ವೇತನ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಡಿತವು ಮುಖ್ಯವಾಗಿ ಪ್ರಸಕ್ತ ವರ್ಷದ ಬೋನಸ್‌ಗಳಲ್ಲಿರುತ್ತದೆ ಎಂದು ಸಮೂಹದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಟಾಟಾ ಸಮೂಹದ ಇತಿಹಾಸದಲ್ಲಿ ಈ ರೀತಿಯಾಗಿ ಹಿಂದೆಂದೂ ಸಂದರ್ಭ ಎದುರಾಗಿರಲಿಲ್ಲ. ಪ್ರಸಕ್ತ ಸಂದಿಗ್ಧ ಸಂದರ್ಭವೂ ಉದ್ಯಮ ರಕ್ಷಣೆಗೆ ಕೆಲವು ಕಠಿಣ ಕ್ರಮಗಳನ್ನು ಬಯಸುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಕ್ರಮಗಳೆಲ್ಲವನ್ನೂ ನಾವು ಮಾಡುತ್ತೇವೆ. ಟಾಟಾ ಸಮೂಹವು ಸದಾ ನೌಕರರ ಹಿತ ಕಾದಿದೆ. ಈ ಕೆಟ್ಟ ಕಾಲದಲ್ಲೂ ನೌಕರರನ್ನು‌ ರಕ್ಷಿಸಲಿದೆ. ಅದಕ್ಕೆ ಬೇಕಾದ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಸಮೂಹದ ಸಿಇಓ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಟಾಟಾ ಕಂಪನಿಗಳ ಸಿಇಒ ವೇತನ ಎಷ್ಟು? ಕಡಿತ ಎಷ್ಟು?
 

ಟಾಟಾ ಕಂಪನಿಗಳ ಸಿಇಒ ವೇತನ ಎಷ್ಟು? ಕಡಿತ ಎಷ್ಟು?

ಈ ಮೇಲೆ ತಿಳಿಸಿದಂತೆ ಟಾಟಾ ಸಮೂಹದ ಕಂಪನಿಗಳ ಎಂಡಿ ಮತ್ತು ಸಿಇಒ ವೇತನವನ್ನು ಕಡಿತಗೊಳಿಸಲಾಗಿದೆ. ಅವುಗಳಲ್ಲಿ ಟಾಟಾ ಸನ್ಸ್ ಸಿಇಒ ಎನ್‌ ಚಂದ್ರಶೇಖರನ್ ವೇತನ 2019-20ರಲ್ಲಿ ಒಟ್ಟಾರೆ 65.52 ಕೋಟಿಯಷ್ಟಿದ್ದು, 2018-19ನೇ ಸಾಲಿನ ಹಣಕಾಸಿನ ವರ್ಷಕ್ಕೆ ಹೋಲಿಸಿದರೆ 19 ಪರ್ಸೆಂಟ್ ಕಡಿತಗೊಳಿಸಲಾಗಿದೆ.

ಟಾಟಾ ಮೋಟಾರ್ಸ್ ಸಿಇಒ ವೇತನ 2 ಪರ್ಸೆಂಟ್ ತಗ್ಗಿದ್ದು, ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಸ್ಯಾಲರಿ 17 ಪರ್ಸೆಂಟ್ ಕಡಿತಗೊಂಡು 13.38 ಕೋಟಿ ರುಪಾಯಿಗೆ ತಲುಪಿದೆ. ಇನ್ನು ಟಾಟಾ ಸ್ಟೀಲ್ ಸಿಇಒ ಟಿವಿ ನರೇಂದ್ರನ್ ವೇತನ 19 ಪರ್ಸೆಂಟ್ ಇಳಿಕೆಯಾಗಿ 11.23 ಕೋಟಿಗೆ ತಗ್ಗಿದೆ.

ಉಳಿದಂತೆ ಟೈಟಾನ್ ಸಿಇಒ ಬಾಸ್ಕರ್ ಭಟ್ ವೇತನ 15 ಪರ್ಸೆಂಟ್ ಕಡಿತಗೊಂಡಿದ್ದು, 6.93 ಕೋಟಿಗೆ ತಲುಪಿದೆ. ಇಂಡಿಯನ್ ಹೋಟೆಲ್ಸ್ ಹಾಗೂ ವೋಲ್ಟಾಸ್ ಸಿಇಒ ವೇತನ ಯಾವುದೇ ಬದಲಾವಣೆ ಕಂಡುಬಂದಿರುವುದು ವರದಿಯಾಗಿಲ್ಲ.

ಆದರೆ ಈಗ ವೇತನ ಕಡಿತ ಮಾಡಿರುವ ಬಗ್ಗೆ ಟಾಟಾ ಸನ್ಸ್ ಮತ್ತು ಹೆಚ್ಚಿನ ಗುಂಪು ಕಂಪನಿಗಳು ಈ ವಿಷಯದ ಬಗ್ಗೆ ತಮ್ಮ ಇಮೇಲ್‌ಗೆ ಪ್ರತಿಕ್ರಿಯಿಸಲಿಲ್ಲ. ಟಾಟಾ ಸ್ಟೀಲ್ ವಕ್ತಾರರು, ಸಂಭಾವನೆ ಕಡಿತ ಎನ್ನುವುದು ಟಾಟಾ ಸ್ಟೀಲ್ ಮಂಡಳಿಯ ಸಂಭಾವನೆ ಸಮಿತಿ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಮುಂದೆ ಸಾಗುವ ಮಾರ್ಗವನ್ನು ಮೊದಲೇ ತಿಳಿಸುವುದು ಸೂಕ್ತವಲ್ಲ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

English summary

Corona Impact Tata's Top Deck 20 Percent Pay Cut

For the first time in the Tata Group’s history, the chairman of Tata Sons and CEOs of all operating companies will take an estimated 20% cut
Story first published: Monday, May 25, 2020, 14:02 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more