For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ 7,600 ಕೋಟಿ ರುಪಾಯಿ ತುರ್ತು ಸಹಾಯ

|

ಕೊರೊನಾವೈರಸ್ ವಿರುದ್ಧ ಹೋರಾಡಲು ವಿಶ್ವ ಬ್ಯಾಂಕ್ ತುರ್ತು ಸಹಾಯವಾಗಿ ಭಾರತಕ್ಕೆ 1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 7,613 ಕೋಟಿ) ನೀಡಲು ಮುಂದಾಗಿದೆ.

ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ವಿಶ್ವಬ್ಯಾಂಕ್ 25 ರಾಷ್ಟ್ರಗಳಿಗೆ 1.9 ಬಿಲಿಯನ್ ಡಾಲರ್ (14,466 ಕೋಟಿ) ನೀಡುವುದಾಗಿ ಗುರುವಾರ ಘೋಷಿಸಿದೆ. ಇದರಲ್ಲಿ 1 ಬಿಲಿಯನ್ ಡಾಲರ್‌ ಅನ್ನು ಭಾರತಕ್ಕೆ ನೀಡಲು ನಿರ್ಧರಿಸಿದೆ. ಮುಂದಿನ 15 ತಿಂಗಳುಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಎದುರಿಸಲು ಒಟ್ಟಾರೆ 160 ಬಿಲಿಯನ್ ಡಾಲರ್‌ವರೆಗೆ ತುರ್ತು ಸಹಾಯವನ್ನು ನೀಡುವ ಯೋಜನೆಯನ್ನು ಹೊಂದಿದೆ.

ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ 7,600 ಕೋಟಿ ರುಪಾಯಿ ತುರ್ತು ಸಹಾಯ

 

''ಅಭಿವೃದ್ಧಿಶೀಲ ರಾಷ್ಟ್ರಗಳು ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯಿಸಲು ಆರ್ಥಿಕ ಮತ್ತು ಸಾಮಾಜಿಕ ಚೇತರಿಕೆಗೆ ಕಡಿಮೆ ಸಮಯವನ್ನು ತೆಗೆದುಕೊಳ್ಳುವಂತೆ ಬಲಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ'' ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.

"ಅತ್ಯಂತ ಬಡ ಮತ್ತು ಅತ್ಯಂತ ದುರ್ಬಲ ದೇಶಗಳಿಗೆ ಈ ವೇಳೆ ಹೆಚ್ಚು ಕಠಿಣವಾಗಬಹುದು . ವಿಶ್ವದಾದ್ಯಂತ ನಮ್ಮ ತಂಡಗಳು ಬಿಕ್ಕಟ್ಟನ್ನು ಪರಿಹರಿಸಲು ದೇಶ-ಮಟ್ಟದ ಮತ್ತು ಪ್ರಾದೇಶಿಕ ಪರಿಹಾರಗಳತ್ತ ಗಮನ ಹರಿಸುತ್ತವೆ." ಎಂದು ವಿಶ್ವ ಬ್ಯಾಂಕ್ ಹೇಳಿದೆ.

English summary

Corona Impact World Bank Approves 1 Billion Dollar Fund For India

To combat the coronavirus pandemic, the World Bank on Thursday approved $1 billion emergency financing for India.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more