For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಯಾವ ಹಂತದಲ್ಲಿದೆ ಕೊರೊನಾ? ಕೇಂದ್ರದಿಂದಲೇ ಅಧಿಕೃತ ಮಾಹಿತಿ

|

ಭಾರತದಲ್ಲಿ ಕೊರೊನಾ ಯಾವ ಹಂತದಲ್ಲಿದೆ ಎಂಬುದು ನಿಮ್ಮದು, ನಮ್ಮದು ಹೀಗೆ ಎಲ್ಲರ ಪ್ರಶ್ನೆಯೂ ಆಗಿತ್ತು. ಅದಕ್ಕೆ ಈಗ ಕೇಂದ್ರ ಆರೋಗ್ಯ ಸಚಿವಾಲಯದಿಂದಲೇ ಉತ್ತರ ಬಂದಿದೆ. ದೇಶದ ಕೆಲ ಭಾಗದಲ್ಲಿ ಸ್ಥಳೀಯವಾಗಿಯೇ ಸಮುದಾಯಗಳಿಂದ ಕೊರೊನಾ ವ್ಯಾಪಿಸುತ್ತಿದೆ. ನಿರ್ದಿಷ್ಟ ಪ್ರದೇಶದಲ್ಲಿ ಕಾಯಿಲೆ ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ದೇಶವೀಗ ಕೊರೊನಾದ ಹಂತ 2 ಹಾಗೂ 3ರ ಮಧ್ಯೆ ಇದೆ ಎಂದು ತಿಳಿಸಲಾಗಿದೆ.

COVID- 19 ಟಾಸ್ಕ್ ಫೋರ್ಸ್ ನ ಸದಸ್ಯರೂ ಹಾಗೂ ಏಮ್ಸ್ ನಿರ್ದೇಶಕರಾದ ಡಾ. ರಣ್ ದೀಪ್ ಗುಲೇರಿಯಾ ಸೋಮವಾರ ಈ ಬಗ್ಗೆ ಮಾತನಾಡಿ, ಸ್ಥಳೀಯವಾಗಿ ಸಮುದಾಯಗಳಿಂದ ಕೊರೊನಾ ಹಬ್ಬುತ್ತಿರುವುದು ಕಂಡುಬಂದಿದೆ. ಆದ್ದರಿಂದ ಭಾರತವು ಹಂತ 2 (ಸ್ಥಳೀಯವಾಗಿ ಹಬ್ಬುವುದು) ಮತ್ತು ಹಂತ 3ರ ಮಧ್ಯೆ ಇದೆ ಎಂದಿದ್ದಾರೆ.

ಭಾರತದ ಬಹುತೇಕ ಭಾಗ ಈಗ COVID- 19 ಎರಡನೇ ಹಂತದಲ್ಲೇ ಇದೆ ಎಂದು ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ.

ಸರ್ಕಾರದಿಂದ ತೀವ್ರ ಕಾರ್ಯಾಚರಣೆ

ಸರ್ಕಾರದಿಂದ ತೀವ್ರ ಕಾರ್ಯಾಚರಣೆ

ಏಮ್ಸ್ ನಿರ್ದೇಶಕರ ಅಭಿಪ್ರಾಯದ ಬಗ್ಗೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ಅವರು ಹೇಳಿದ್ದಕ್ಕೂ ಮತ್ತು ನಾವು ನಿಮಗೆ ವಿವರಿಸುತ್ತಿರುವುದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಕೊರೊನಾ ಪ್ರಕರಣ ಯಾವ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಹಾಗೂ ಎಷ್ಟು ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಗಮನಿಸಿ, ಯಾವ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿ ಆಗುತ್ತವೋ ಅಂಥಲ್ಲಿ ಸರ್ಕಾರ ತೀವ್ರತರವಾದ ಕಾರ್ಯಾಚರಣೆಗೆ ಇಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

 ಕೊರೊನಾ ಹಂತ ಎರಡು ಮತ್ತು ಮೂರರ ಮಧ್ಯೆ ಇದ್ದೇವೆ

ಕೊರೊನಾ ಹಂತ ಎರಡು ಮತ್ತು ಮೂರರ ಮಧ್ಯೆ ಇದ್ದೇವೆ

ಸಮುದಾಯದ ಮಧ್ಯೆಯೇ ಕೊರೊನಾ ಹಬ್ಬುತ್ತಿದೆ ಅಂತಾದಲ್ಲಿ ಅದನ್ನು ಮಾಧ್ಯಮಗಳ ಮೂಲಕ ಜನರಿಗೆ ಮೊದಲು ನಾವೇ ತಿಳಿಸುತ್ತೇವೆ. ಆ ಕೂಡಲೇ ಎಲ್ಲರೂ ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ. ಏಮ್ಸ್ ನಿರ್ದೇಶಕರ ಮಾತುಗಳ ಪ್ರಕಾರವೇ ಹೇಳುವುದಾದರೆ, ಸ್ಥಳೀಯ ಸಮುದಾಯದಿಂದ ಕೊರೊನಾ ಹರಡುವ ಪ್ರಕರಣಗಳು, ಅದರಲ್ಲೂ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. "ನಾವೀಗ ಕೊರೊನಾ ಹಂತ ಎರಡು ಮತ್ತು ಮೂರರ ಮಧ್ಯೆ ಇದ್ದೇವೆ. ಅದು ಮೂರನೇ ಹಂತವನ್ನು ಪ್ರವೇಶಿಸದಂತೆ ಮಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು, ಅದನ್ನು ಮಾಡುತ್ತಿದ್ದೇವೆ. ನಿರ್ದಿಷ್ಟ ಯೋಜನೆ ಜತೆಗೆ ಕೆಲಸ ಮಾಡುತ್ತಿದ್ದೇವೆ. ಕೊರೊನಾ ಹಬ್ಬುವುದನ್ನು ತಡೆಯುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.

ಎರಡು- ಮೂರನೇ ಹಂತ ಅಂದರೇನು?

ಎರಡು- ಮೂರನೇ ಹಂತ ಅಂದರೇನು?

ಎರಡನೇ ಹಂತ ಅಂದರೆ, ಯಾವ ದೇಶದಲ್ಲಿ ಕಾಯಿಲೆ ಇರುತ್ತದೋ ಅಂಥಲ್ಲಿಗೆ ಹೋಗಿಬಂದರೆ ಅಥವಾ ಸೋಂಕಿತ ವ್ಯಕ್ತಿಗಳ ಜತೆಗೆ ಸಂಪರ್ಕಕ್ಕೆ ಬಂದರೆ ಕೊರೊನಾ ಹಬ್ಬುತ್ತದೆ. ಸಾಮುದಾಯಿಕ ಹಬ್ಬುವಿಕೆ ಅಥವಾ ಮೂರನೇ ಹಂತ ಅಂದರೆ, ಒಬ್ಬ ವ್ಯಕ್ತಿಗೆ ಕಾಯಿಲೆ ಬರುತ್ತದೆ. ಆದರೆ ಆತನಿಗೆ ಪರಿಚಯವಿರುವ ಯಾವುದೇ ವ್ಯಕ್ತಿಗೆ ಆ ಸೋಂಕು ಇರುವುದಿಲ್ಲ ಅಥವಾ ಕೊರೊನಾ ಸಮಸ್ಯೆ ಇರುವ ಯಾವುದೇ ದೇಶಕ್ಕೆ ಆತ ಪ್ರಯಾಣ ಮಾಡಿರುವುದಿಲ್ಲ. ಭಾನುವಾರದಿಂದ ಈಚೆಗೆ 693 ಹೊಸದಾಗಿ ಸೋಂಕಿತ ಪ್ರಕರಣಗಳು ಹಾಗೂ 30 ಸಾವಿನ ಬಗ್ಗೆ ವರದಿ ಆಗಿದೆ. ದೇಶದಲ್ಲಿ ಒಟ್ಟಾರೆ 4067 ಸೋಂಕಿತ ಪ್ರಕರಣ ಹಾಗೂ 109 ಮಂದಿ ಸಾವನ್ನಪ್ಪಿದ್ದಾರೆ. ಇದು ಸೋಮವಾರದ ತನಕ ಮಾಹಿತಿ. ಆದರೆ ಪಿಟಿಐ ಸುದ್ದಿ ಸಂಸ್ಥೆ ಮಾಹಿತಿ ಪ್ರಕಾರ, ದೇಶದಾದ್ಯಂತ 126 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 4111 ಮಂದಿ ಸೋಂಕಿತರಿದ್ದಾರೆ. ಇನ್ನು 315 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

English summary

Corona Pandemic In India Between Stage 2 And 3

Corona pandemic between stage 2 and 3 in India. Here is the complete details provided by union health ministry.
Story first published: Tuesday, April 7, 2020, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X