For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಪೂರ್ವ- ಪೆಸಿಫಿಕ್ ಏಷ್ಯಾದಲ್ಲಿ 1.10 ಕೋಟಿಗೂ ಹೆಚ್ಚು ಮಂದಿಗೆ ಬಡತನ

|

ಕೊರೊನಾ ಪರಿಣಾಮವಾಗಿ ಏಷ್ಯಾ ಪೆಸಿಫಿಕ್ ಹಾಗೂ ಪೂರ್ವ ಏಷ್ಯಾದಲ್ಲಿ 1.10 ಕೋಟಿಗೂ ಹೆಚ್ಚು ಮಂದಿ ಬಡತನದ ಕೂಪದೊಳಗೆ ಬೀಳಲಿದ್ದಾರೆ. ಕೊರೊನಾದಿಂದ ಜಾಗತಿಕವಾಗಿ 7,80,000 ಮಂದಿ ಸೋಂಕಿತರಾಗಿದ್ದು, 37 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ.

 

ಮಾರ್ಚ್ 30ನೇ ತಾರೀಕಿನಂದು ವರದಿ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್, 2020ನೇ ಇಸವಿಯಲ್ಲಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ನಿಂದ 3.5 ಕೋಟಿ ಮಂದಿ ಬಡತನದಿಂದ ಹೊರಬರುತ್ತಾರೆ. ಅದರಲ್ಲೂ ಚೀನಾವೊಂದರಲ್ಲೇ 2.5 ಕೋಟಿಗೂ ಹೆಚ್ಚು ಮಂದಿ ಬಡತನದಿಂದ ಆಚೆ ಬರುತ್ತಾರೆ ಎಂಬ ಅಂದಾಜು ಮಾಡಲಾಗಿತ್ತು.

ಕೊರೊನಾ ಪ್ರಭಾವದಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ಎಷ್ಟು ಸಮಯ ಬೇಕು?

"ಒಂದು ವೇಳೆ ಆರ್ಥಿಕ ಸ್ಥಿತಿ ಇನ್ನಷ್ಟು ಕುಸಿದರೆ, ಪರಿಸ್ಥಿತಿ ಕೆಳ ಮಟ್ಟಕ್ಕೆ ಇಳಿದರೆ ಆಗ 1.10 ಕೋಟಿ ಮಂದಿ ಬಡತನಕ್ಕೆ ಗುರಿಯಾಗಲಿದ್ದಾರೆ" ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ವಿಶ್ವ ಬ್ಯಾಂಕ್ ನ ಭೇಟಿ ಪೂರ್ವಭಾವಿಯಾಗಿ ವರದಿಯಲ್ಲಿ ತಿಳಿಸಲಾಗಿದೆ.

ಕೊರೊನಾದಿಂದ ಪೂರ್ವ- ಪೆಸಿಫಿಕ್ ಏಷ್ಯಾದಲ್ಲಿ 1.10 ಕೋಟಿ ಮಂದಿಗೆ ಬಡತನ

ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 2020ನೇ ಇಸವಿಯಲ್ಲಿ ಬೆಳವಣಿಗೆದರವು 2.1 ಪರ್ಸೆಂಟ್ ಗೆ ಅಥವಾ ನಕಾರಾತ್ಮಕ 0.5 ಪರ್ಸೆಂಟ್ ಗೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. 2019ನೇ ಇಸವಿಯಲ್ಲಿ 5.8 ಪರ್ಸೆಂಟ್ ಗೆ ಅಂದಾಜು ಮಾಡಲಾಗಿತ್ತು.

ಇನ್ನು ಚೀನಾದಲ್ಲಿ 2019ರಲ್ಲಿ 6.1 ಪರ್ಸೆಂಟ್ ಅಂದಾಜಿಸಲಾಗಿತ್ತು. ಆದರೆ ಈಗ 2.3 ಪರ್ಸೆಂಟ್ ಗೆ ಹಾಗೂ ತೀರಾ ಕೆಳ ಮಟ್ಟ ಅಂದರೆ 0.1 ಪರ್ಸೆಂಟ್ ತಲುಪಬಹುದು ಎಂಬ ಅಂದಾಜು ಮಾಡಲಾಗಿದೆ. ಕೊರೊನಾ ನಿಯಂತ್ರಣದಿಂದ ಚೇತರಿಸಿಕೊಳ್ಳಲು ಅವಕಾಶ ಇದೆ. ಆದರೆ ಆರ್ಥಿಕ ಮಾರುಕಟ್ಟೆ ಒತ್ತಡವಂತೂ ಇದ್ದೇ ಇದೆ ಎಂದು ವರದಿಗಳು ತಿಳಿಸಿವೆ.

ಕೊರೊನಾದ ಪ್ರಭಾವ ಬಡತನದ ಮೇಲೆ ತೀವ್ರವಾಗಿರಲಿದೆ. ಒಂದು ವೇಳೆ ಕೊರೊನಾ ಬಾರದಿದ್ದಲ್ಲಿ 2.4 ಕೋಟಿ ಮಂದಿ ಈ ಪ್ರದೇಶದಲ್ಲಿ 2020ನೇ ಇಸವಿಯಲ್ಲಿ ಬಡತನ ರೇಖೆಯಿಂದ ಹೊರಬರಬಹುದಿತ್ತು (ಬಡತನದ ರೇಖೆ ಅಂದರೆ $ 5.50/ದಿನಕ್ಕೆ). ಕೊರೊನಾ ಎಷ್ಟು ದೀರ್ಘಾವಧಿಗೆ ಇರುತ್ತದೋ ಅಷ್ಟು ಸಮಯಕ್ಕೆ ಪ್ರವಾಸೋದ್ಯಮ ಚಟುವಟಿಕೆಗೆ, ರಫ್ತು ಇತ್ಯಾದಿ ಆರ್ಥಿಕ ಚಟುವಟಿಕೆಗೆ ಸಮಸ್ಯೆ ಆಗುತ್ತದೆ ಎಂದು ಹೇಳಲಾಗಿದೆ.

English summary

Coronavirus: About 11 mn Could Be Driven Into Poverty In East Asia and Pacific

About 11 million people could be driven into poverty in East Asia and the Pacific as a result of the coronavirus pandemic, said World Bank.
Story first published: Tuesday, March 31, 2020, 13:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X