For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!

|

ಕೋವಿಡ್-19 ಸಾಂಕ್ರಾಮಿಕದ ಎರಡನೇ ತರಂಗ ಅಲೆ ಜೋರಾಗಿದ್ದು, ಹಲವು ರಾಜ್ಯಗಳು ಈಗಾಗಲೇ ಕರ್ಫ್ಯೂ ವಿಧಿಸಿವೆ. ಸಾಂಕ್ರಾಮಿಕ ರೋಗದ ಹೆಚ್ಚಳದ ಜೊತೆಗೆ ನಿರ್ಬಂಧಗಳು ಹೆಚ್ಚಿರುವ ಕಾರಣ ಬೇಡಿಕೆ ಮತ್ತು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

 

''ಕೊರೊನಾವೈರಸ್‌ನಿಂದಾಗಿ ಗ್ರಾಹಕ ಮತ್ತು ಹೂಡಿಕೆದಾರರ ಮನೋಭಾವದ ವಿಷಯದಲ್ಲಿ ದೇಶವು ಹೆಚ್ಚಿನ ಅನಿಶ್ಚಿತತೆಗೆ ಸಿದ್ಧತೆ ನಡೆಸಬೇಕಿದೆ ಮತ್ತು ಅಗತ್ಯವಿರುವಾಗ ಸರ್ಕಾರವು ಹಣಕಾಸಿನ ಕ್ರಮಗಳೊಂದಿಗೆ ಸ್ಪಂದಿಸುತ್ತದೆ'' ಎಂದು ನೀತಿ ಆಯೋಗ್ ಉಪಾಧ್ಯಕ್ಷ ರಾಜೀವ್ ಕುಮಾರ್ ಇಂದು ಹೇಳಿದ್ದಾರೆ.

ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!

ಕೊರೊನಾ ಎರಡನೇ ಅಲೆಯು ಹಿಂದಿನ ಪರಿಸ್ಥಿತಿಗಿಂತ ಸಾಕಷ್ಟು ಕಷ್ಟಕರವಾಗಿದೆ ಎಂದು ಒಪ್ಪಿಕೊಂಡರೂ, 2022ರ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇಕಡಾ 11ರಷ್ಟು ಬೆಳೆಯುತ್ತದೆ ಎಂದು ರಾಜೀವ್‌ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಏರಿಕೆಗೊಂಡಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ. ಅನೇಕ ರಾಜ್ಯ ಸರ್ಕಾರಗಳು ಜನರ ಚಲನೆಗೆ ನಿರ್ಬಂಧಗಳನ್ನು ಹೇರಲಾಗಿದೆ.

ಕೇಂದ್ರ ಸರ್ಕಾರ ಲಾಕ್‌ಡೌನ್ ಕುರಿತು ಏನಾದರೂ ಯೋಚಿಸುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಕೋವಿಡ್ ತರಂಗದ ನೇರ ಮತ್ತು ಪರೋಕ್ಷ ಪರಿಣಾಮವನ್ನು ವಿಶ್ಲೇಷಿಸಿದ ನಂತರ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ ಎಂದು ಹೇಳಿದರು.

English summary

Covid-19 2nd Wave Could Impact Greater Economic Uncertainty

The country needs to prepare for "greater uncertainty" in terms of consumer as well as investor sentiments due to the second wave of coronavirus infections
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X