For Quick Alerts
ALLOW NOTIFICATIONS  
For Daily Alerts

ಕೊರೊನಾ ಭಯ: ಸೆಕೆಂಡ್ ಹೋಮ್‌ಗೆ ಹೆಚ್ಚಿದ ಡಿಮ್ಯಾಂಡ್, ಸುರಕ್ಷತೆಗೆ ಜನರ ಒತ್ತು

|

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜಗತ್ತಿನಲ್ಲಿ ಜನರ ಬದುಕಿನ ರೀತಿಯನ್ನೇ ಬದಲಿಸಿಬಿಟ್ಟಿದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮನೆಯಿಂದಲೇ ಕೆಲಸ ಹೀಗೆ ನಾನಾ ರೀತಿಯಲ್ಲಿ ದೈನಂದಿನ ಜೀವನ ಶೈಲಿಯನ್ನೇ ಬದಲಾಯಿಸಿದೆ.

 

ಪ್ರತಿಯೊಬ್ಬರು ಕೊರೊನಾದಿಂದ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಪ್ರಯತ್ತಿಸುತ್ತಿದ್ದಾರೆ. ಇದಕ್ಕಾಗಿಯೇ ಅನೇಕರು ಕೊರೊನಾ ಕಥೆ ಮುಗಿಯುವವರೆಗೂ ವರ್ಕ್ ಫ್ರಮ್‌ ಇರಲಿ ಎಂಬ ಆಶಯವನ್ನು ಸಹ ಹೊಂದಿದ್ದಾರೆ.

ಜೂನ್ ಆರಂಭದಲ್ಲಿ ಅನ್‌ಲಾಕ್‌ ಪ್ರಾರಂಭವಾದಾಗಿನಿಂದ ಹಂತ ಹಂತವಾಗಿ ವಿವಿಧ ವಲಯಗಳು ಚೇತರಿಕೆ ಕಾಣುತ್ತಿವೆ. ರಿಯಲ್ ಎಸ್ಟೇಟ್ ಕೂಡ ನಿಧಾನವಾಗಿ ವೇಗವನ್ನು ಪಡೆಯುತ್ತಿದೆ. ಇದರ ನಡುವೆ ಜನರು ಎರಡನೇ ಮನೆಯನ್ನು ಹೊಂದಲು ಆಸಕ್ತಿಯನ್ನು ತೋರುತ್ತಿದ್ದಾರೆ.

ಸಾಂಕ್ರಾಮಿಕದಿಂದ ದೂರವಿರುವ ಪ್ರಯತ್ನ

ಸಾಂಕ್ರಾಮಿಕದಿಂದ ದೂರವಿರುವ ಪ್ರಯತ್ನ

ಪ್ರಯಾಣದ ನಿಷೇಧ ಮತ್ತು ಸಾಂಕ್ರಾಮಿಕ ರೋಗವು ನಗರಗಳ ಮೇಲೆ ಆಳವಾದ ಪ್ರಭಾವ ಬೀರುವ ಕಾರಣದಿಂದಾಗಿ, ಎರಡನೇ ವಸತಿ ಮಾರುಕಟ್ಟೆಯು ಸಹ ಉತ್ತಮ ಬೇಡಿಕೆಯನ್ನು ಸೃಷ್ಟಿಸಿದೆ. ನಗರ ಜೀವನ, ಬಾಡಿಗೆ ಹೆಚ್ಚಳ ಅಥವಾ ನಿವೃತ್ತಿಯ ಜೀವನದ ಆಲೋಚನೆಗಳು ಎರಡನೇ ಮನೆ ಖರೀದಿಸಲು ಇಲ್ಲಿಯವರೆಗೆ ಪ್ರಮುಖ ಕಾರಣಗಳಾಗಿದ್ದರೂ, ಇದೀಗ ಕೋವಿಡ್-19 ಏಕಾಏಕಿ ನಗರದ ಹಾಟ್‌ಸ್ಪಾಟ್‌ಗಳಿಂದ ದೂರವಿರುವಂತೆ ಉತ್ತೇಜಿಸುತ್ತಿದೆ. ಇದರಿಂದಾಗಿ ಜನರಿಗೆ ಸುರಕ್ಷಿತವಾದ ಸ್ಥಳದ ಅಗತ್ಯತೆ ನಿರ್ಮಾಣವಾಗಿದೆ.

ಜಮೀನು ಖರೀದಿಸಿ ಮನೆ ಕಟ್ಟಲು ಜನರ ಆಸಕ್ತಿ

ಜಮೀನು ಖರೀದಿಸಿ ಮನೆ ಕಟ್ಟಲು ಜನರ ಆಸಕ್ತಿ

ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಹೊಸ ಆಲೋಚನೆಯನ್ನು ಹುಟ್ಟು ಹಾಕುತ್ತಿದೆ. ಈಗಿರುವ ಮನೆ ಹೊರತುಪಡಿಸಿ ಬೇರೆಡೆ ಸುರಕ್ಷಿತ ಸ್ಥಳದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಲು ಜನರು ಆಸಕ್ತಿ ಹೊಂದಿದ್ದಾರೆ.

''ನನ್ನ ತಾಯಿ ಊರಿನಲ್ಲಿ ಜಮೀನು ನೋಡುತ್ತಿದ್ದೇನೆ, ಈಗಿರುವ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ಹೆಚ್ಚಾದಲ್ಲಿ ನನ್ನ ಕುಟುಂಬದ ರಕ್ಷಣೆ ನನಗೆ ಮುಖ್ಯವಾಗಿದೆ. ಹೀಗಾಗಿ ಊರಿನಲ್ಲಿ ಪ್ರಕೃತಿಯ ನಡುವೆ ಬದುಕಿದರೆ ನಮ್ಮ ಕುಟುಂಬದ ಆರೋಗ್ಯ ಸುರಕ್ಷಿತವಾಗಿರುತ್ತದೆ ಎಂಬುದು ನನ್ನ ಆಲೋಚನೆಯಾಗಿದೆ'' ಎಂದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮೋಹನ್ ಎಂಬುವವರು ಹೇಳಿದ್ದಾರೆ.

ಎರಡನೇ ಶ್ರೇಣಿಯ ನಗರಗಳಿಗೆ ಹೆಚ್ಚಿನ ಒತ್ತು
 

ಎರಡನೇ ಶ್ರೇಣಿಯ ನಗರಗಳಿಗೆ ಹೆಚ್ಚಿನ ಒತ್ತು

ಮಹಾನಗರಗಳಲ್ಲಿನ ಜನರು ಸುರಕ್ಷತೆಯ ದೃಷ್ಟಿಯಿಂದ ಎರಡನೇ ಶ್ರೇಣಿಯ ನಗರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ವಾಸಿಸಲು , ಜಮೀನಿಗೆ ಹಣ ಹೂಡಿಕೆ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಏಕೆಂದರೆ ಇಂತಹ ನಗರಗಳಲ್ಲಿ, ಮಹಾನಗರಗಳಿಗೆ ಹೋಲಿಸಿದರೆ ರಿಯಲ್ ಎಸ್ಟೇಟ್ ವ್ಯವಹಾರವು ಅಷ್ಟು ದುಬಾರಿ ಎನಿಸದು ಎನ್ನುವ ಅಭಿಪ್ರಾಯವಿದೆ.

''ಶ್ರೇಣಿ- II ನಗರಗಳಿಗೆ ವಸತಿ ಬೇಡಿಕೆಯ ಹೆಚ್ಚಳವು ಕೈಗೆಟುಕುವ ಮತ್ತು ಉತ್ತಮ ಬೆಳವಣಿಗೆಯ ನಿರೀಕ್ಷೆಗಳಿಂದಾಗಿ ಕಂಡುಬರುತ್ತದೆ" ಆಲ್ಫಾ ಕಾರ್ಪ್ ಸಿಇಒ ಆಶಿಶ್ ಸರಿನ್ ಹೇಳಿದ್ದಾರೆ.

ಸಾಲಗಳ ಮೇಲಿನ ಕಡಿಮೆ ಬಡ್ಡಿ ದರ ಜನರನ್ನು ಪ್ರೇರೇಪಿಸುತ್ತಿದೆ

ಸಾಲಗಳ ಮೇಲಿನ ಕಡಿಮೆ ಬಡ್ಡಿ ದರ ಜನರನ್ನು ಪ್ರೇರೇಪಿಸುತ್ತಿದೆ

ಸದ್ಯ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಗೃಹ ಸಾಲದ ಮೇಲಿನ ಬಡ್ಡಿ ದರಗಳು ಕೂಡ ಇಳಿಕೆಯಾಗಿವೆ. ಹೀಗಾಗಿ ಜನರು ಸುಲಭವಾಗಿ ಗೃಹ ಸಾಲ ಪಡೆಯಬಹುದು ಎಂಬ ಆಶಯದೊಂದಿಗೆ, ಕಡಿಮೆ ಬಡ್ಡಿ ದರಗಳು ಜನರನ್ನು ಮನೆ ಕಟ್ಟಲು ಪ್ರೇರೇಪಿಸುತ್ತಿದೆ. ಎರಡನೇ ಮನೆಯನ್ನು ಆಯ್ಕೆ ಮಾಡಲು ಸೂಕ್ತ ಸಮಯ ಸಿಕ್ಕಂತಾಗಿದೆ.

"ಎರಡನೇ ಮನೆ ಖರೀದಿದಾರರು ಇನ್ನು ಮುಂದೆ ಬಾಡಿಗೆ ಆದಾಯ ಮತ್ತು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಗಣಿಸುತ್ತಿದ್ದಾರೆ. ಹಸಿರು ಮತ್ತು ಸುರಕ್ಷಿತ ಪರಿಸರದಲ್ಲಿ ದೊಡ್ಡ ಮನೆಗಳನ್ನು ಪಡೆಯಲು ಅಂತಹ ಸ್ಥಳಗಳಲ್ಲಿ ಕಡಿಮೆ ಆಸ್ತಿ ಬೆಲೆಗಳನ್ನು ಹೆಚ್ಚಿಸುವುದರತ್ತ ಅವರ ಗಮನವಿದೆ'' ಎಂದು ಅನಾರಾಕ್ ಆಸ್ತಿ ಸಲಹೆಗಾರರ ​​ಉಪಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.

ವರ್ಕ್‌ ಫ್ರಮ್‌ ಹೋಮ್ ಮುಂದುವರೆಯುವ ಸಾಧ್ಯತೆ

ವರ್ಕ್‌ ಫ್ರಮ್‌ ಹೋಮ್ ಮುಂದುವರೆಯುವ ಸಾಧ್ಯತೆ

ಹೌದು, ಈ ಒಂದು ವಿಚಾರವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಕೊರೊನಾ ಸಾಂಕ್ರಾಮಿಕ ರೋಗವು ಒಂದು ವೇಳೆ ನಿಯಂತ್ರಣಕ್ಕೆ ಬರದೆ, ಲಸಿಕೆ ಬರುವುದು ವಿಳಂಬವಾದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಲು ಹೇಳಬಹುದು. ಹೀಗಾಗಿ ಜನರು ನಗರಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ.

ಯಾವ ನಗರದಲ್ಲಿ ಯಾವ್ಯಾವ ಪ್ರದೇಶಗಳತ್ತ ಜನರ ಆಸಕ್ತಿ ಹೆಚ್ಚಿದೆ

ಯಾವ ನಗರದಲ್ಲಿ ಯಾವ್ಯಾವ ಪ್ರದೇಶಗಳತ್ತ ಜನರ ಆಸಕ್ತಿ ಹೆಚ್ಚಿದೆ

ಬೆಂಗಳೂರಿನ ದಕ್ಷಿಣ ಮಾರುಕಟ್ಟೆಯಲ್ಲಿ, ಎರಡನೇ ಮನೆಗಳಿಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ನಂದಿ ಹಿಲ್ಸ್ ಮತ್ತು ಜಿಗಣಿ ಪ್ರದೇಶ, ಚೆನ್ನೈ ಮಹಾಬಲಿಪುರಂ ಮತ್ತು ಬೀಚ್ ಕಾಣಿಸುವಂತೆ ಇರುವ ಪ್ರದೇಶಗಳು ಸೇರಿವೆ. ಪಶ್ಚಿಮದಲ್ಲಿ ಅಲಿಬಾಗ್, ಕಾರ್ಜತ್, ಲೋನವಾಲಾ, ಲವಾಸಾ ಮತ್ತು ಗೋವಾಗಳು ಆದ್ಯತೆಯ ಸ್ಥಳಗಳಾಗಿದ್ದರೆ, ದೆಹಲಿಯಲ್ಲಿ, ಛತ್ತರ್‌ಪುರ, ಮೆಹ್ರೌಲಿ-ಗುರ್ಗಾಂವ್ ರಸ್ತೆಯ ತೋಟದ ಮನೆಗಳು ಆದ್ಯತೆಯ ಆಯ್ಕೆಗಳಾಗಿವೆ.

English summary

Covid-19 Fear : Work from home, ban on travel, safer place - why second home are in demand

Due to ban on travel and fear of the corona pandemic leaving a deeper impression on urban homeowners, second-home housing market is also seeing good traction.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X