For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್ ನೌಕರರಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್

|

ಫೇಸ್ ಬುಕ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಕಾಲಾವಧಿ ವಿಸ್ತರಿಸಿದೆ. ಮುಂದಿನ ವರ್ಷದ, ಅಂದರೆ 2021ರ ಜುಲೈ ತನಕ ಮನೆಯಿಂದಲೇ ಕಾರ್ಯ ನಿರ್ವಹಿಸುವುದಕ್ಕೆ ಫೇಸ್ ಬುಕ್ ಅವಕಾಶ ನೀಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮನೆಯಲ್ಲಿ ಕಚೇರಿಗೆ ಬೇಕಾದಂಥ ವ್ಯವಸ್ಥೆ ಮಾಡಿಕೊಳ್ಳಲು ತಲಾ $ 1000 (ಭಾರತೀಯ ರುಪಾಯಿಗಳಲ್ಲಿ 74,000ಕ್ಕಿಂತ ಸ್ವಲ್ಪ ಹೆಚ್ಚು) ನೀಡಲಿದೆ ಎಂದು ಫೇಸ್ ಬುಕ್ ವಕ್ತಾರೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಗೂಗಲ್ ಕಂಪೆನಿ ಸಹ ಇಂಥದ್ದೇ ಘೋಷಣೆ ಮಾಡಿತ್ತು. ಮುಂದಿನ ವರ್ಷದ ಜೂನ್ ಕೊನೆ ತನಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಲಾಗುವುದು. ಅನಿವಾರ್ಯ ಅಲ್ಲದವರು ಕಚೇರಿಗೆ ಬರುವ ಅಗತ್ಯ ಇಲ್ಲ ಎಂದು ತಿಳಿಸಿತ್ತು. ಟ್ವಿಟ್ಟರ್ ತನ್ನ ಕೆಲವು ಸಿಬ್ಬಂದಿಗೆ ಅನಿರ್ದಿಷ್ಟಾವಧಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದೆ.

 

ಆರೋಗ್ಯ ತಜ್ಞರು ಹಾಗೂ ಸರ್ಕಾರದ ಮಾರ್ಗದರ್ಶನದ ಆಧಾರದಲ್ಲಿ ಹಾಗೂ ಕಂಪೆನಿಯೊಳಗಿನ ಆಂತರಿಕ ತೀರ್ಮಾನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 2021ರ ತನಕ ವರ್ಕ್ ಫ್ರಮ್ ಹೋಮ್ ಗೆ ಸಿಬ್ಬಂದಿಗೆ ಅವಕಾಶವನ್ನು ಮುಂದುವರಿಸಲಿದ್ದೇವೆ ಎಂದು ಫೇಸ್ ಬುಕ್ ವಕ್ತಾರೆ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೇಸ್‌ಬುಕ್ ನೌಕರರಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್

ಇದರ ಜತೆಗೆ ಮನೆಯಲ್ಲಿ ಬೇಕಾದ ಕಚೇರಿ ಅಗತ್ಯಗಳಿಗಾಗಿ ಹೆಚ್ಚುವರಿ $1000 ನೀಡುತ್ತಿದ್ದೇವೆ ಎಂದು ಕೂಡ ಮಾಹಿತಿ ನೀಡಿದ್ದಾರೆ.

English summary

Covid-19 Impact: ‍Facebook to let employees work from home until July 2021

Facebook inc will allow employees to work from home until july 2021 due to coronavirus outbreak
Company Search
COVID-19