For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಪರಿಣಾಮ: ಹೀರೋ ಮೋಟೋಕಾರ್ಪ್ ಕಾರ್ಖಾನೆಗಳು ಸ್ಥಗಿತ

|

ಭಾರತದ ಅತಿದೊಡ್ಡ ದ್ವಿಚಕ್ರ ವಾಹನಗಳ ತಯಾರಕ ಹೀರೋ ಮೋಟೋಕಾರ್ಪ್ ಮಂಗಳವಾರ ತನ್ನ ಕಾರ್ಖಾನೆಗಳನ್ನು ಏಪ್ರಿಲ್ 22ರಿಂದ ಮೇ 1ರ ನಡುವೆ ನಾಲ್ಕು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

 

ವಾಹನಗಳ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಮೊದಲ ವಾಹನ ತಯಾರಕ ಹೀರೋ ಆಗಿದೆ. ಹರಿಯಾಣ, ಉತ್ತರಾಖಂಡ, ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ಹೀರೋ ತನ್ನ ಪ್ರಮುಖ ಕಾರ್ಖಾನೆಗಳನ್ನು ಹೊಂದಿದೆ.

ಲಾಕ್‌ಡೌನ್ ಪರಿಣಾಮ: ಹೀರೋ ಮೋಟೋಕಾರ್ಪ್ ಕಾರ್ಖಾನೆಗಳು ಸ್ಥಗಿತ

"ತನ್ನ ಜನರ ಸುರಕ್ಷತೆ ಮತ್ತು ತನ್ನ ಬದ್ಧತೆಗೆ ಅನುಗುಣವಾಗಿ, ಹೀರೋ ಮೋಟೋಕಾರ್ಪ್ ತನ್ನ ಜಾಗತಿಕ ಭಾಗಗಳ ಕೇಂದ್ರ (ಜಿಪಿಸಿ) ಸೇರಿದಂತೆ ದೇಶದಾದ್ಯಂತದ ಎಲ್ಲಾ ಉತ್ಪಾದನಾ ಸೌಲಭ್ಯಗಳಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ "ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಖಾನೆಗಳ ಸ್ಥಗಿತಗೊಳಿಸುವಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅದು ವಾರ್ಷಿಕ ನಿರ್ವಹಣಾ ಕಾರ್ಯಗಳಿಗೆ ಸಮಯವನ್ನು ಬಳಸಿಕೊಳ್ಳುತ್ತದೆ ಎಂದು ಅದು ಹೇಳಿದೆ. ಜೊತೆಗೆ ಯಾವುದೇ ಉತ್ಪಾದನಾ ನಷ್ಟವನ್ನು ಉಳಿದ ತ್ರೈಮಾಸಿಕದಲ್ಲಿ ಹೆಚ್ಚಿನ ಉತ್ಪಾದಕತೆಯಿಂದ ಸರಿದೂಗಿಸಲಾಗುತ್ತದೆ.

ಇನ್ನು ಕಾರ್ಖಾನೆಗಳು ಸ್ಥಗಿತಗೊಂಡಿರುವ ದಿನಗಳಲ್ಲಿ ಉತ್ಪಾದನಾ ಘಟಕಗಳಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲು ಕಂಪನಿಯು ಯೋಜಿಸಿದೆ.

English summary

Covid-19 Lockdown Impact: Hero To Shut Factories For 4 Days

India's largest two-wheeler manufacturer Hero MotoCorp on Tuesday said it would shut its factories in a staggered manner for four days between April 22 and May 1
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X