For Quick Alerts
ALLOW NOTIFICATIONS  
For Daily Alerts

ಕೊರೊನಾ 2ನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿದ್ರೆ, ಭಾರತದ ಜಿಡಿಪಿ ಬೆಳವಣಿಗೆ ಕುಸಿಯಲಿದೆ!

|

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ತರಂಗವು ಜೂನ್ ಅಂತ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಿದರೆ ಭಾರತದ ಜಿಡಿಪಿ ಬೆಳವಣಿಗೆ ದರ ಏಕ ಅಂಕೆಗಿಳಿಯಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಹೇಳಿದೆ.

 

ಗೂಗಲ್ ಫೋಟೋಸ್ ಇನ್ಮುಂದೆ ಉಚಿತವಿಲ್ಲ: ಸ್ಟೋರೇಜ್‌ಗೆ ಹಣ ಪಾವತಿಸಬೇಕು!

ಜೂನ್ ಅಂತ್ಯದಲ್ಲಿ ಕೋವಿಡ್‌ ಸಂಖ್ಯೆ ಮತ್ತಷ್ಟು ಹೆಚ್ಚಿದರೆ 2021-22ರ (ಏಪ್ರಿಲ್-ಮಾರ್ಚ್) ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಸುಮಾರು 8.2 ಪ್ರತಿಶತದಷ್ಟು ಇಳಿಯಬಹುದು ಎನ್ನಲಾಗಿದೆ.

ಭಾರತದ ಜಿಡಿಪಿ ಬೆಳವಣಿಗೆ ಕುಸಿಯಲಿದೆ: ಕ್ರಿಸಿಲ್

ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ 2021-22ರಲ್ಲಿ (ಏಪ್ರಿಲ್-ಮಾರ್ಚ್) ಭಾರತದ ಜಿಡಿಪಿ ಶೇಕಡಾ 11 ರಷ್ಟು ಏರಿಕೆಯಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಅಂದಾಜಿಸಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಮೇ-ಅಂತ್ಯದ ವೇಳೆಗೆ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ತಲುಪಿದರೆ, ಜಿಡಿಪಿ ಬೆಳವಣಿಗೆಯು ಶೇಕಡಾ 9.8 ಕ್ಕೆ ಇಳಿಯುತ್ತದೆ ಎಂದು ಅದು ಹೇಳಿದೆ.

ಅಧಿಕೃತ ಅಂದಾಜಿನ ಪ್ರಕಾರ, ರಾಷ್ಟ್ರೀಯ ಲಾಕ್‌ಡೌನ್‌ನಿಂದಾಗಿ 2020-21ರಲ್ಲಿ ಆರ್ಥಿಕತೆಯು ಶೇಕಡಾ 7.6 ರಷ್ಟು ಕುಗ್ಗಿತು. ಇದೀಗ ದೇಶಾದ್ಯಂತ ಕೋವಿಡ್ ಎರಡನೇ ಅಲೆಯಿಂದಾಗಿ ಅನೇಕ ರಾಜ್ಯಗಳು ಲಾಕ್‌ಡೌನ್‌ಗೆ ಮುಂದಾಗಿದೆ. ಹೀಗಾಗಿ ಜಿಡಿಪಿ ಬೆಳವಣಿಗೆಯ ಅಂದಾಜುಗಳಲ್ಲಿ ಪರಿಷ್ಕರಣೆಗಳು ನಡೆಯುತ್ತಿದೆ.

English summary

Covid 2nd Wave Could Bring Down GDP Growth To 8.2 Percent

Rating agency Crisil on May 10 said that India's GDP growth rate could drop to single digits or around 8.2 percent in 2021-22
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X