For Quick Alerts
ALLOW NOTIFICATIONS  
For Daily Alerts

ಕೊರೊನಾ ಎರಡನೇ ಅಲೆ ಪರಿಣಾಮ: ಇಂಡಿಗೋ ಹಿರಿಯ ಉದ್ಯೋಗಿಗಳಿಗೆ ವೇತನರಹಿತ ರಜೆ

|

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಇಂಡಿಗೋ ತನ್ನ ಹಿರಿಯ ಉದ್ಯೋಗಿಗಳಿಗೆ ಸೆಪ್ಟೆಂಬರ್‌ವರೆಗೆ ತಿಂಗಳಿಗೆ ನಾಲ್ಕು ದಿನಗಳವರೆಗೆ ವೇತನವಿಲ್ಲದೆ ಕಡ್ಡಾಯ ರಜೆ (ಎಲ್‌ಡಬ್ಲ್ಯೂಪಿ) ಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದೆ.

 

ಫಿಟ್ನೆಸ್ ಪಾಠ ಕಲಿಸಿದ ಕೊರೊನಾ: ಬೈಸಿಕಲ್ ಬೇಡಿಕೆ ಶೇ. 20ರಷ್ಟು ಏರಿಕೆ

ಕೊರೊನಾ ಕಾರಣದಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿರುವುದರಿಂದ ವಿಮಾನಯಾನ ಸಂಸ್ಥೆಗಳು ಮತ್ತೆ ನಷ್ಟದ ಹಾದಿ ತುಳಿದಿವೆ.

"ಎರಡನೇ ಅಲೆಯು ನಮ್ಮೆಲ್ಲರಿಗೂ ಕಷ್ಟಕರವಾಗಿದೆ ಮತ್ತು ಪ್ರಯಾಣಿಕರ ಹೊರೆ ಕಡಿಮೆಯಾಗಲು ಸಹ ಕಾರಣವಾಗಿದೆ. ಇದರ ಪರಿಣಾಮವಾಗಿ ನಮ್ಮ ವಾಣಿಜ್ಯ ವೇಳಾಪಟ್ಟಿಯನ್ನು ಮೊಟಕುಗೊಳಿಸಬೇಕಾಯಿತು" ಎಂದು ಇಂಡಿಗೊದ ಫ್ಲೈಟ್ ಆಪರೇಶನ್ಸ್ ಹಿರಿಯ ಉಪಾಧ್ಯಕ್ಷ ಅಶೀಮ್ ಮಿತ್ರ ಪೈಲೆಟ್‌ಗಳಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕೊರೊನಾ ಎಫೆಕ್ಟ್‌: ಇಂಡಿಗೋ ಹಿರಿಯ ಉದ್ಯೋಗಿಗಳಿಗೆ ವೇತನರಹಿತ ರಜೆ

ವಿಮಾನ ಕಾರ್ಯಾಚರಣೆಯು ಕಡಿಮೆಯಾಗಿರುವುದರಿಂದ ಎಲ್ಲಾ ಉದ್ಯೋಗಿಗಳಿಗೆ ಎಲ್‌ಡಬ್ಲ್ಯೂಪಿ ಕಾರ್ಯಕ್ರಮವನ್ನು ಅನುಸರಿಸಬೇಕಾಗುತ್ತದೆ. ಇದರ ಅಡಿಯಲ್ಲಿ ಹಿರಿಯ ಉದ್ಯೋಗಿಗಳು ಕಡ್ಡಾಯ ವೇತನರಹಿತ ರಜೆಗೆ ತೆರಳಬೇಕು. ಆದರೆ ಈ ಎಲ್‌ಡಬ್ಲ್ಯೂಪಿ ಕಾರ್ಯಕ್ರಮದಡಿಯಲ್ಲಿ ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ಉದ್ಯೋಗಿಗಳನ್ನು ಒಳಗೊಂಡಿಲ್ಲ.

ಏಕೆಂದರೆ ವಿಮಾನಯಾನದ ಬಹುಪಾಲು ಉದ್ಯೋಗಿಗಳು ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ನಲ್ಲಿದ್ದಾರೆ, ಅವುಗಳು ಕೆಳಮಟ್ಟದ ಬ್ಯಾಂಡ್‌ಗಳಾಗಿವೆ. ಹೀಗಾಗಿ 2021ರ ಜೂನ್ 1 ರಿಂದ ಮುಂದಿನ 3 ತಿಂಗಳವರೆಗೆ 3 ದಿನಗಳ ಎಲ್‌ಡಬ್ಲ್ಯೂಪಿ ಯನ್ನು ಕೈಗೊಳ್ಳಲಾಗುತ್ತದೆ ಎಂದು ಮಿತ್ರ ತಿಳಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ ದೇಶೀಯ ವಿಮಾನ ಪ್ರಯಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಫೆಬ್ರವರಿ 28 ರಂದು ಸುಮಾರು 3 ಲಕ್ಷ ದೇಶೀಯ ವಾಯು ಪ್ರಯಾಣಿಕರು ಭಾರತದಲ್ಲಿ ಪ್ರಯಾಣಿಸಿದರು. ಮೇ 30 ರಂದು, ದೇಶದಲ್ಲಿ ಸುಮಾರು 70,000 ಪ್ರಯಾಣಿಕರೊಂದಿಗೆ ದೇಶೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು.

English summary

Covid 2nd Wave Impact: Indigo To Make Employees Go On Leave Without Pay For Few Days

IndiGo said senior employees will have to go on compulsory leave without pay (LWP) for up to four days per month till September due to the second wave of the COVID-19 pandemic
Story first published: Wednesday, June 2, 2021, 12:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X