ಡೆಬಿಟ್, ಕ್ರೆಡಿಟ್ ಕಾರ್ಡ್ ನೂತನ ನಿಯಮ: ಟೋಕನೈಜೇಶನ್ ಅಂತಿಮ ದಿನ 6 ತಿಂಗಳು ವಿಸ್ತರಣೆ
ಆನ್ಲೈನ್ ಶಾಂಪಿಂಗ್ ವ್ಯವಸ್ಥೆಯನ್ನು ಸುಲಭ ಹಾಗೂ ಸರಳ ಮಾಡುವ ವ್ಯವಸ್ಥೆಯಾದ ಟೋಕನೈಜೇಶನ್ನ ಅಂತಿಮ ದಿನಾಂಕವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರು ತಿಂಗಳುಗಳ ಕಾಲ ವಿಸ್ತರಣೆ ಮಾಡಿದೆ. ಈ ಮೂಲಕ ಆನ್ಲೈನ್ ಶಾಂಪಿಂಗ್ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ನ ಹೊಸ ನಿಯಮವಾದ ಟೋಕನೈಜೇಶನ್ ಮಾಡಿಸಿಕೊಳ್ಳುವ ಕೊನೆಯ ದಿನಾಂಕ ಜೂನ್ 30, 2022 ಆಗಿದೆ.
ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯನ್ನು ನೀಡಿದೆ. "ಹಲವಾರು ಮಂದಿಯ ಮನವಿಯ ಮೇರೆಗೆ ಹಾಗೂ ಸಲಹೆಯ ಮೇರೆಗೆ ಟೋಕನೈಜೇಶನ್ನ ಕೊನೆಯ ದಿನಾಂಕವನ್ನು ನಾವು ಆರು ತಿಂಗಳುಗಳ ಕಾಲ ವಿಸ್ತರಣೆ ಮಾಡುತ್ತೇವೆ. ಟೋಕನೈಜೇಶನ್ ಕೊನೆಯ ದಿನಾಂಕ ಜೂನ್ 30, 2022 ಆಗಿದೆ," ಎಂದು ತಿಳಿಸಿದೆ. ಈ ಹೊಸ ನಿಯಮವು ಜನವರಿ 1, 2022 ರಿಂದ ಜಾರಿಗೆ ಬರಲಿದೆ.
ಆನ್ಲೈನ್ ಶಾಪಿಂಗ್ಗೆ ಬೇಕಾಗಿಲ್ಲ ಕ್ರೆಡಿಟ್, ಡೆಬಿಟ್ ಕಾರ್ಡ್: ಏನಿದು ಟೋಕನೈಜೇಶನ್?
ನಿಮ್ಮ ನೆಚ್ಚಿನ ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳಾದ ಅಮೆಜಾನ್, ಮಿಂತ್ರಾ, ಫ್ಲಿಫ್ಕಾರ್ಟ್, ಬಿಗ್ ಬಾಸ್ಕೆಟ್ನಲ್ಲಿ ಸುಲಭವಾಗಿ ಶಾಪಿಂಗ್ ಮಾಡುವ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಆರ್ಬಿಐ ಹೊಸ ನಿಯಮವನ್ನು ಜಾರಿ ಮಾಡಿದೆ. ಈ ಹೊಸ ವಿಧಾನವು ನಿಮ್ಮ ಆನ್ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಸುಲಭ ಮಾಡುವುದು ಮಾತ್ರವಲ್ಲದೆ ನಿಮ್ಮ ಗುಪ್ತ ಮಾಹಿತಿಯನ್ನು ಕೂಡಾ ಸುರಕ್ಷಿತವಾಗಿರಿಸುತ್ತದೆ.

ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಇರುವಾಗ ಆರ್ಬಿಐ ಹಾಗೂ ಬ್ಯಾಂಕುಗಳು ಹೊಸ ಬದಲಾವಣೆಗಳನ್ನು ಪ್ರಕಟ ಮಾಡುತ್ತಿದೆ. ಈ ಬದಲಾವಣೆಗಳ ಪೈಕಿ ಈ ಟೋಕನೈಜೇಶನ್ ಕೂಡಾ ಒಂದಾಗಿದೆ. ಈಗಾಗಲೇ ವಿತ್ಡ್ರಾ ಶುಲ್ಕ ಹೆಚ್ಚಳ, ಜೊಮ್ಯಾಟೊ-ಸ್ವಿಗ್ಗಿಯ ಹೊಸ ನೀತಿ ಮೊದಲಾದವು ಹೊಸ ವರ್ಷದಲ್ಲಿ ಆರಂಭವಾಗಲಿದೆ. ಈ ನಡುವೆ ಆರ್ಬಿಐನ ಈ ವಿಧಾನವು ಆನ್ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಸರಳೀಕರಿಸುವ ಕಾರ್ಯವನ್ನು ಮಾಡಿದೆ.
ಕಾರ್ಡ್ ಸಂಖ್ಯೆ, ಕಾರ್ಡ್ ಕೊನೆಯ ದಿನಾಂಕ ಇಲ್ಲದೆಯೇ ಆನ್ಲೈನ್ ಶಾಪಿಂಗ್!
ಇನ್ನು ಮುಂದೆ ನೀವು ಡಿಜಿಟಲ್ ವೇದಿಕೆಯಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ವೇಳೆ ನಿಮ್ಮ 16 ಅಂಕಿಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನ ಕೊನೆಯ ದಿನಾಂಕ (expiration date) ಅನ್ನು ನೀಡಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶದ ಪ್ರಕಾರ ನೀವು ಈಗ ತ್ವರಿತವಾಗಿ, ಸಂಪರ್ಕರಹಿತ ಪಾವತಿಯನ್ನು ಟೋಕನೈಜೇಶನ್ (Tokenization) ಮೂಲಕ ಮಾಡಬಹುದು.
ಮೃತ ವ್ಯಕ್ತಿಯ ಖಾತೆಯಿಂದ ಹಣವನ್ನು ಹಿಂಪಡೆಯುವುದು ಹೇಗೆ?
ಟೋಕನೈಜೇಶನ್ ಎಂಬುವುದು ಹೊಸ ಪಾವತಿ ವಿಧಾನವಾಗಿದೆ. ಕಾರ್ಡ್ ಮಾಹಿತಿಯನ್ನು ಟೋಕನ್ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವೇ ಟೋಕನೈಜೇಶನ್ ಆಗಿದೆ. ಹಾಗೆಯೇ ಈ ವಿಧಾನವು ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡುತ್ತದೆ. ಆರ್ಬಿಐನ ಈ ಟೋಕನೈಜೇಶನ್ ನೀತಿಯು ಈ ವಿಧಾನವನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುವುದನ್ನು ವಿವರಿಸಿದೆ. ಇನ್ನು ಮುಂದೆ ಸಂಪರ್ಕರಹಿತ ಬ್ಯಾಂಕಿಂಗ್ಗೆ ಯಾವುದೇ ಸಿವಿವಿ (ಕಾರ್ಡ್ ವೆರಿಫಿಕೇಶನ್ ವಾಲ್ಯೂ) ಬೇಕಾಗಿಲ್ಲ. ಇದು ಸಂಪೂರ್ಣವಾಗಿ ನೆಟ್ವರ್ಕ್ ಅನ್ನು ಸುರಕ್ಷಿತಗೊಳಿಸಲಿದೆ.
ಈ ಟೋಕನೈಜೇಶನ್ ಡೇಟಾ ಕಳ್ಳತನವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು, ಆದರೆ ಈ ಡೇಟಾ ಕಳ್ಳತನದ ಸಾಧ್ಯತೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಆಪ್ಗಳ ಮೂಲಕ ನೀವು ಶಾಪಿಂಗ್ ಮಾಡುವುದನ್ನು ಈ ಹೊಸ ವಿಧಾನ ಟೋಕನೈಜೇಶನ್ ನೀವು ಸುಲಭವಾಗಿ ಶಾಪಿಂಗ್ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಆನ್ಲೈನ್ ಶಾಪಿಂಗ್ ಅನ್ನು ಸುರಕ್ಷಿತಗೊಳಿಸುತ್ತದೆ. ಟೋಕನೈಜ್ ಮಾಡಿದ ಕಾರ್ಡ್ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್ಸೈಟ್ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.