For Quick Alerts
ALLOW NOTIFICATIONS  
For Daily Alerts

ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು

By ಅನಿಲ್ ಆಚಾರ್
|

ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಕುಸಿತ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ಹಾಂಕಾಂಗ್ ನಲ್ಲಿ ಬಿಟ್ ಕಾಯಿನ್ $ 29,327ರಲ್ಲಿ ವಹಿವಾಟು ನಡೆಸಿತು. ಇದಕ್ಕೆ ಮುನ್ನ ಹತ್ತಿರಹತ್ತಿರ 11% ಕುಸಿತ ಕಂಡಿತ್ತು. $ 30,000ಕ್ಕಿಂತ ಕೆಳಗೆ ಇಳಿದರೆ ಎಚ್ಚರವಾಗಿರಬೇಕು ಎನ್ನುತ್ತಾರೆ ತಜ್ಞರು. ಏಕೆಂದರೆ ಕಳೆದ ವರ್ಷ 300% ಏರಿಕೆ ದಾಖಲಿಸಿತ್ತು ಬಿಟ್ ಕಾಯಿನ್. ಆ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

"ಈ ಮಟ್ಟದಲ್ಲಿ ಬಹಳ ದುರ್ಬಲವಾಗಿ ಕಾಣುತ್ತಿದೆ. ಒಂದು ವೇಳೆ ಆ ಹಂತದಿಂದ ಕೆಳಗೆ ಇಳಿದರೆ ಬಿಟ್ ಕಾಯಿನ್ ಹಾಗೂ ಕ್ರಿಪ್ಟೋಗಳಿಗೆ ಇದು ಮುಂದಿನ ಕೆಲ ಸಮಯ ಕೆಟ್ಟ ಸುದ್ದಿ," ಎಂದು ಗುರುವಾರ ಒನಾಡ ಯುರೋಪ್ ನಲ್ಲಿನ ಹಿರಿಯ ಮಾರುಕಟ್ಟೆ ತಜ್ಞ ಕ್ರೆಗ್ ಎರ್ಲಮ್ ಅಭಿಪ್ರಾಯ ಪಟ್ಟಿದ್ದಾರೆ. $ 20,000 ಹಂತಕ್ಕೆ ಬಂದರೂ ನನಗೆ ಅಚ್ಚರಿ ಇಲ್ಲ ಎನ್ನುತ್ತಾರೆ.

 

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಡಿಸೆಂಬರ್ ನಲ್ಲಿ ಬಿಟ್ ಕಾಯಿನ್ $ 20,000 ದಾಟಿದ ಮೇಲೆ ಭಾರೀ ಏರಿಕೆ ಕಾಣುತ್ತಾ ಸಾಗಿತ್ತು. ಜನವರಿ ಶುರುವಿನಲ್ಲಿ $ 30 ಸಾವಿರ ದಾಟಿದ್ದು, ನೋಡನೋಡುತ್ತಲೇ $ 42,000 ಬಳಿ ತಲುಪಿತು. ಆದರೆ ನಂತರದಲ್ಲಿ ಇಳಿಜಾರಿನಲ್ಲಿ ಸಾಗಿದೆ. ಕ್ರಿಪ್ರೋಕರೆನ್ಸಿಯಲ್ಲಿ ಕಂಡುಬಂದ ಏರಿಕೆ ಬಗ್ಗೆ ವಿವಿಧ ಅಭಿಪ್ರಾಯಗಳಿವೆ. ಮುಖ್ಯವಾಹಿನಿಯಲ್ಲೇ ಹೂಡಿಕೆಯಾಗಿ ಬಿಟ್ ಕಾಯಿನ್ ಚಲಾವಣೆಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಹಣ ಹೂಡುವವರು ಇದ್ದಾರೆ. ಆದರೆ ಇದು ಸಟ್ಟಾ ವ್ಯವಹಾರ ಅನ್ನೋದು ಕೆಲವರ ಆರೋಪ.

ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ

ಬಿಟ್ ಕಾಯಿನ್ ಟ್ರಸ್ಟ್ ಹಿಂದೆ ಇರುವುದು ಗ್ರೇಸ್ಕೇಲ್ ಇನ್ವೆಸ್ಟ್ ಮೆಂಟ್ಸ್. ನಾಲ್ಕನೇ ತ್ರೈಮಾಸಿಕದಲ್ಲಿ $ 3 ಬಿಲಿಯನ್ ಗೂ ಹೆಚ್ಚು ಹರಿದುಬಂದಿದೆ. ಇದೇ ವಾರದಲ್ಲಿ ಬ್ಲ್ಯಾಕ್ ರಾಕ್ ಕಂಪೆನಿ ಕ್ರಿಪ್ಟೋ ಕರೆನ್ಸಿ ಜಗತ್ತಿಗೆ ಕಾಲಿಟ್ಟಿದೆ. ಎರಡು ಫಂಡ್ ಗಳಲ್ಲಿ ಕ್ರಿಪ್ಟೋ ಕರೆನ್ಸಿ ಖರೀದಿಗೆ ಅನುಮತಿ ನೀಡಿದೆ.

English summary

Cryptocurrency Bitcoin Trading Below 30000 USD

Cryptocurrency bitcoin trading below $ 30,000 in Hongkong on January 22nd morning. Recently it touched near $ 42,000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X