For Quick Alerts
ALLOW NOTIFICATIONS  
For Daily Alerts

ಯು.ಎಸ್.ನಲ್ಲಿ "ಬ್ಲ್ಯಾಕ್ ಫ್ರೈಡೇ" ಆನ್ ಲೈನ್ ಮಾರಾಟ ಹೊಸ ದಾಖಲೆ

|

ಸಾಂಪ್ರದಾಯಿಕ "ಬ್ಲ್ಯಾಕ್ ಫ್ರೈಡೇ" ಪ್ರಯುಕ್ತ ಯು.ಎಸ್.ನಲ್ಲಿ ಆನ್ ಲೈನ್ ಮಾರಾಟವು ಒಂದೇ ದಿನದಲ್ಲಿ ಎರಡನೇ ಅತಿ ದೊಡ್ಡ ಮಟ್ಟದ ಸಾರ್ವಕಾಲಿಕವಾಗಿ ದಾಖಲೆ ಬರೆದಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆನ್ ಲೈನ್ ಖರೀದಿಯಲ್ಲಿ ವಿಪರೀತ ಹೆಚ್ಚಾಗಿದೆ ಎಂದು ಅಡೋಬ್ ಸಾಫ್ಟ್ ವೇರ್ ಕಂಪೆನಿ ವರದಿ ಮಾಡಿದೆ.

 

ಕೊರೊನಾ ಹಿನ್ನೆಲೆಯಲ್ಲಿ ಅಮೆರಿಕನ್ ಗ್ರಾಹಕರು ಮನೆಯಲ್ಲಿ ಉಳಿದುಕೊಂಡಿದ್ದು, ಶುಕ್ರವಾರದಂದು ಆನ್ ಲೈನ್ ನಲ್ಲಿ 900 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿದ್ದಾರೆ. ಕಳೆದ ವರ್ಷ, 2019ರಲ್ಲಿ ಇದೇ ದಿನದಂದು ಆಗಿದ್ದ ಮಾರಾಟಕ್ಕೆ ಹೋಲಿಸಿದಲ್ಲಿ 21.6 ಪರ್ಸೆಂಟ್ ಹೆಚ್ಚಳ ಆಗಿದೆ.

 

ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ USಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ US

ಈ ಬಾರಿಯ ಶುಕ್ರವಾರದ ಮಾರಾಟವನ್ನು ಮೀರಿದ್ದು ಕಳೆದ ವರ್ಷದ ಸೈಬರ್ ಮಂಡೇ ಮಾರಾಟ ಮಾತ್ರ. ಗಮನಾರ್ಹವಾದ ಅಂಶ ಏನೆಂದರೆ, ಶೇಕಡಾ 40ರಷ್ಟು ಮಾರಾಟ ಆಗಿದ್ದು ಸ್ಮಾರ್ಟ್ ಫೋನ್ ಗಳು. ಮತ್ತು ಹಲವು ಗ್ರಾಹಕರಿಗೆ ಬೆಂಬಲ ಸಿಕ್ಕಿದ್ದು ಸಣ್ಣ ಉದ್ಯಮಗಳಿಂದ. ಅಕ್ಟೋಬರ್ ತಿಂಗಳ ಸರಾಸರಿ ದಿನದ ಮಾರಾಟಕ್ಕೆ ಹೋಲಿಸಿದರೆ ಶುಕ್ರವಾರ ಅವರ ಮಾರಾಟ 545 ಪರ್ಸೆಂಟ್ ಏರಿಕೆ ಆಗಿದೆ.

ಯು.ಎಸ್.ನಲ್ಲಿ

ವರ್ಷಾಂತ್ಯದ ರಜಾ ದಿನಗಳಿಗೆ ಮುಂಚಿತವಾಗಿ ಸಣ್ಣ ಸ್ಥಳೀಯ ಉದ್ಯಮಗಳಿಗೆ ಬೆಂಬಲ ನೀಡುವುದಕ್ಕೆ ಯೋಜನೆ ಹಾಕಿಕೊಂಡಿರುವುದಾಗಿ 38ರಷ್ಟು ಗ್ರಾಹಕರು ತಿಳಿಸಿರುವುದಾಗಿ ಅಡೋಬ್ ಹೇಳಿದೆ. ಈ ಬಾರಿ ಸೈಬರ್ ಮಂಡೇ (ಸೋಮವಾರ) ಸಾರ್ವಕಾಲಿಕ ದಾಖಲೆ ಮಾರಾಟ ಆಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

10.8 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 12.7 ಬಿಲಿಯನ್ ಅಮೆರಿಕನ್ ಡಾಲರ್ ತನಕ ಮಾರಾಟ ಆಗಬಹುದು, ಬೇಡಿಕೆ 15ರಿಂದ 35 ಪರ್ಸೆಂಟ್ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇದೆ. ಹೆಚ್ಚು ಜನರು ವರ್ಕ್ ಫ್ರಮ್ ಹೋಮ್ ಮಾಡುತ್ತಿರುವುದರಿಂದ ಕಂಪ್ಯೂಟರ್ ಹಾಗೂ ಮನೆಯಲ್ಲೇ ದೈಹಿಕ ದಾರ್ಢ್ಯತೆ ಕಾಪಾಡಿಕೊಳ್ಳುವ ಅಗತ್ಯ ಇರುವ ಸಲಕರಣೆಗಳಿಗೆ ಬೇಡಿಕೆ ಹೆಚ್ಚಾಗಿದೆ.

English summary

Black Friday Online Sales Set New Record In US

Due to corona on Black Friday online sales set new record in US. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X