For Quick Alerts
ALLOW NOTIFICATIONS  
For Daily Alerts

ಗೇಮಿಂಗ್ ವ್ಯಸನಕ್ಕೆ ಚೀನಾ ಹಾಕುತ್ತಿದೆ ಕಡಿವಾಣ!

By ರಂಗಸ್ವಾಮಿ ಮೂಕನಹಳ್ಳಿ
|

ಗೇಮಿಂಗ್ ಎನ್ನುವುದು ಒಂದು ಮಾಯಾಲೋಕ. ಒಮ್ಮೆ ಇದರಲ್ಲಿ ಹೊಕ್ಕಿದರೆ ಮುಗಿಯಿತು. ಅದರಿಂದ ಬಿಡುಗಡೆಗೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಿಮಗೆಲ್ಲ ತಿಳಿದಿರಲಿ ಜಗತ್ತಿನಲ್ಲಿ ಇರುವುದು ಏಳೂವರೆ ಬಿಲಿಯನ್ ಜನ ಅಂದರೆ ಬರೋಬ್ಬರಿ 750 ಕೋಟಿ. ಅದರಲ್ಲಿ 2.7 ಬಿಲಿಯನ್ , ಅಂದರೆ 270 ಕೋಟಿ ಜನ ಈ ಆಟಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇದು ಅಫೀಮು ಸೇವನೆಗಿಂತ ಹೆಚ್ಚು ಅಪಾಯಕಾರಿ ಅಡಿಕ್ಷನ್ ಎಂದರೆ ನೀವು ನಂಬಬೇಕು.

 

ಇನ್ನೊಂದು ವಿಷಯ 2023 ರ ವೇಳೆಗೆ ಇನ್ನೂ ಅರ್ಧ ಬಿಲಿಯನ್ ಅಂದರೆ 50 ಕೋಟಿ ಜನರು ಈ ಗೇಮಿಂಗ್ ಬಲೆಯಲ್ಲಿ ಬೀಳಲಿದ್ದಾರೆ. ಕೊರೊನಾ ಸಮಯದಲ್ಲಿ ಹೀಗೆ ಸಮಯ ಕಳೆಯಲು ಹೊಸದಾಗಿ ಗೇಮಿಂಗ್‌ನಲ್ಲಿ ಸಿಲುಕಿದವರ ಸಂಖ್ಯೆ ಕೂಡ ಐವತ್ತು ಕೋಟಿ ಮೀರುತ್ತದೆ. ಗೇಮಿಂಗ್ ಎನ್ನುವುದು ಯಾವಾಗ ಅಭ್ಯಾಸವಾಗಿ ಪರಿವರ್ತನೆಯಾಗುತ್ತದೆ, ಆ ನಂತರ ಅದಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವಂತಾಗುತ್ತದೆ ಎನ್ನುವುದು ಕೂಡ ತಿಳಿಯದ ಮಟ್ಟಿಗೆ ವ್ಯಕ್ತಿ ಅದರ ದಾಸನಾಗಿ ಹೋಗುತ್ತಾನೆ. ಮನುಷ್ಯನ ಭಾವನೆಗಳನ್ನು ಬಂಡವಾಳ ಮಾಡಿಕೊಂಡ ಹಲವು ರೀತಿಯ ಗೇಮ್‌ಗಳು ಇಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವಲಯ ಅತಿ ವೇಗವಾಗಿ ಬೆಳೆಯುತ್ತಿರುವ ವಲಯ ಎಂದು ಕೂಡ ಹೆಗ್ಗಳಿಕೆ ಪಡೆದಿದೆ.

ಡೈಲಿ ಮನಿ & ಮಾರ್ಕೆಟ್: ಮೊನಾಪಲಿ ವಿರುದ್ಧ ಸಿಡಿದೆದ್ದ ಸೌತ್ ಕೊರಿಯಾ!

ಜಾಗತಿಕ ಗ್ಲೋಬಲ್ ಗೇಮಿಂಗ್ ಮಾರುಕಟ್ಟೆ 2020ರ ಅಂತ್ಯದಲ್ಲಿ 174 ಬಿಲಿಯನ್ ಮೌಲ್ಯವನ್ನ ಹೊಂದಿತ್ತು. ಮುಂದಿನ ನಾಲ್ಕೈದು ವರ್ಷದಲ್ಲಿ ಇದು ದುಪ್ಪಟಾಗುವ ಎಲ್ಲಾ ಲಕ್ಷಣಗಳು ಕೂಡ ದಟ್ಟವಾಗಿದೆ. ವಾರ್ಷಿಕ ಹತ್ತು ಪ್ರತಿಶತಕ್ಕೂ ಮೀರಿದ ಗ್ರೋಥ್ ರೇಟ್ ಈ ವಲಯದಲ್ಲಿ ದಾಖಲಾಗುತ್ತಿದೆ. ಅಚ್ಚರಿಯ ಸಂಗತಿ ಎನ್ನುವಂತೆ ಹೀಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವರಲ್ಲಿ 30 ಪ್ರತಿಶತ 25 ವಯಸ್ಸಿನ ಕೆಳಗೆ ಇರುವ ಯುವ ಜನತೆ ಎನ್ನುವುದು.

ಗೇಮಿಂಗ್ ವ್ಯಸನಕ್ಕೆ ಚೀನಾ ಹಾಕುತ್ತಿದೆ ಕಡಿವಾಣ!

ಚೀನಾ , ಯುನೈಟೆಡ್ ಸ್ಟೇಟ್ಸ್ , ಜಪಾನ್ ಮತ್ತು ಸೌತ್ ಕೊರಿಯಾ ದೇಶಗಳು ಕ್ರಮವಾಗಿ ಅತಿ ಹೆಚ್ಚು ಗೇಮಿಂಗ್ ಇಂಡಸ್ಟ್ರಿ ಹೊಂದಿರುವ ದೇಶಗಳು.

 

ಯಾವುದನ್ನೇ ಆಗಲಿ ಮುಕ್ತವಾಗಿ ಬಿಟ್ಟ ನಂತರ ಅದನ್ನು ಅಷ್ಟೇ ಶ್ರದ್ದೆಯಿಂದ ನಿಯಂತ್ರಣ ಮಾಡುವ ತಾಕತ್ತು ಕೂಡ ಇರಬೇಕು. ಚೀನಾ ದೇಶದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಗೇಮಿಂಗ್ ವ್ಯಸನವನ್ನು ಕಡಿಮೆ ಮಾಡಲು 18ಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ವಾರದಲ್ಲಿ ಮೂರು ದಿನ ಒಂದು ಗಂಟೆ ಅಂದರೆ ಶುಕ್ರವಾರ , ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 9ಗಂಟೆಯವರೆಗೆ ಮಾತ್ರ ಆಟವನ್ನು ಆಡಲು ಅನುಮತಿಯನ್ನು ನೀಡಿದೆ. ಉಳಿದಂತೆ ಬೇರೆ ರಾಷ್ಟ್ರೀಯ ರಜಾದಿನಗಳಲ್ಲಿ ಕೂಡ ಒಂದು ತಾಸು ಆಡಲು ಅನುಮತಿಯನ್ನು ನೀಡಿದೆ.

ಪರವಾನಿಗೆ ಇಲ್ಲದ ಆಟದ ಕಟ್ಟೆಗಳಲ್ಲಿ ಆಡಲು ಯುವ ಜನತೆ ಆಗಲೇ ಬೇರೆ ದಾರಿಯನ್ನು ಹುಡುಕಲು ಶುರು ಮಾಡಿದೆ. ಪರವಾನಿಗೆ ಇರುವ ಪ್ಲಾಟ್‌ಫಾರಮ್‌ಗಳನ್ನು ನಿಯಂತ್ರಿಸಬಹದು. ಉಳಿದವುಗಳನ್ನು ಏನು ಮಾಡುವುದು? ವ್ಯಸನ ಅಥವಾ ಅಡಿಕ್ಷನ್ ಸುಲಭವಾಗಿ ಬಿಟ್ಟು ಹೋಗುವಂತಹದಲ್ಲ! ಹಣ ಗಳಿಕೆ, ಜಿಡಿಪಿ ಅಭಿವೃದ್ಧಿಯ ಮಾಪಕಗಳು ಸರಿ, ಸಮಾಜದಲ್ಲಿ ಸದ್ದಿಲ್ಲದೇ ಆಗುವ ಇಂತಹ ವ್ಯಸನದಿಂದ ಕಳೆದು ಹೋಗುವ ನವ ನಾಗರೀಕರ ಘೋರ ಬದುಕನ್ನು ಯಾವ ಲೆಕ್ಕದಲ್ಲಿ ಬರೆಯೋಣ?

ಅಲ್ಪವಾದರೂ ಸರಿಯೇ, ಚೀನಾ ಎಚ್ಚೆತ್ತಿದೆ, ಮುಂದಿನ ಜನಾಂಗ ವ್ಯಸನಿಗಳಾಗುವ ಮುನ್ನಾ ಇನ್ನಷ್ಟು ಹೆಚ್ಚಿನ ಕೆಲಸ ಬಾಕಿಯಿದೆ.

English summary

Daily Money and Market Series 2:China Cuts Video Game Time for Kids to curb gaming addiction

Daily Money and Market Series by Financial Expert Rangaswamy Mookanahalli: China come out with a new rule that makes it illegal for children to play video games for more than three hours in a week to curb gaming addiction. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X