ಸತತ ಎರಡನೇ ವರ್ಷ ಭಾರತದ ಅತ್ಯಂತ ನಂಬಿಕಸ್ತ ಬ್ರ್ಯಾಂಡ್ ಎನಿಸಿದ ಡೆಲ್
ಭಾರತದ ಅತ್ಯಂತ ನಂಬಿಕಸ್ತ ಬ್ತ್ಯಾಂಡ್ ಆಗಿ ಡೆಲ್ ಸತತವಾಗಿ ಎರಡನೇ ವರ್ಷ ಸ್ಥಾನ ಪಡೆದಿದೆ. TRA ಬ್ರ್ಯಾಂಡ್ ಟ್ರಸ್ಟ್ ವರದಿ (BTR) 2020 ಈ ಆಯ್ಕೆಯನ್ನು ಮಾಡಲಾಗಿದೆ. ಚೈನೀಸ್ ಮೊಬೈಲ್ ಫೋನ್ ಪ್ರಮುಖ ಕಂಪೆನಿ 'Mi' ಎರಡನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಫೋನ್ ವಿಭಾಗದಲ್ಲಿ ಬ್ರ್ಯಾಂಡ್ ವೊಂದು ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ.
ಸ್ಯಾಮ್ಸಂಗ್ ಗೆ ಮೂರನೇ ಸ್ಥಾನ ಇದೆ. ಆ ನಂತರದಲ್ಲಿ ಆಪಲ್ ಐಫೋನ್, ಎಲ್ ಜಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ. ಒಪ್ಪೋ ಆರನೇ ಸ್ಥಾನದಲ್ಲಿದೆ. ಸೋನಿ ಎಂಟರ್ ಟೇನ್ ಮೆಂಟ್ ಟೆಲಿವಿಷನ್ ಜನರಲ್ ಎಂಟರ್ ಟೇನ್ ಮೆಂಟ್ ಚಾನೆಲ್ ಏಳನೇ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷದಲ್ಲಿ ಇದೇ ಮೊದಲ ಬಾರಿಗೆ ಸೋನಿ ಟಿವಿ ಟಾಪ್ ಟೆನ್ ಸ್ಥಾನದಲ್ಲಿದೆ.
5ನೇ ಕ್ಲಾಸ್ ಗೆ ಶಾಲೆ ಬಿಟ್ಟ ಹುಡುಗನ ಪದ್ಮಭೂಷಣ; MDH ಧರಂಪಾಲ್ ನಿಧನ
ಇನ್ನು ಮಾರುತಿ ಸುಜುಕಿ ಎಂಟನೇ ಸ್ಥಾನದಲ್ಲಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಒಂಬತ್ತನೇ ಸ್ಥಾನದಲ್ಲಿ ಸ್ಯಾಮ್ಸಂಗ್ ಕಂಪೆನಿ ಟೆಲಿವಿಷನ್ ವಿಭಾಗದಲ್ಲಿದೆ. ವಿವೋ ಮೊಬೈಲ್ ಫೋನ್ ಹತ್ತನೇ ಸ್ಥಾನದಲ್ಲಿದೆ. ಐದು ಮೊಬೈಲ್ ಫೋನ್ ಬ್ರ್ಯಾಂಡ್ ಗಳು ಟಾಪ್ ಹತ್ತರ ಪಟ್ಟಿಯಲ್ಲಿದೆ. ಈ ವರದಿಯಲ್ಲಿ ಮೊದಲ ಇಪ್ಪತ್ತು ಕಂಪೆನಿಗಳಲ್ಲಿ ಮೊಬೈಲ್ ಉತ್ಪಾದಕರ ಹೆಸರೇ ಇವೆ.
ಎಫ್ ಅಂಡ್ ಬಿ (151 ಬ್ರ್ಯಾಂಡ್) ಮತ್ತು ಎಫ್ ಎಂಸಿಜಿ (144 ಬ್ರ್ಯಾಂಡ್) ಇವುಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿವೆ. ಒಟ್ಟಾರೆ ಬ್ರ್ಯಾಂಡ್ ಗಳಲ್ಲಿ ಇವುಗಳ ಪಾಲು 29.5% ಇದೆ. ಎಲ್ ಜಿ ಕಂಪೆನಿಯು ಟಿವಿ ವಿಭಾಗದಲ್ಲಿ (ಅಖಿಲ ಭಾರತ ಮಟ್ಟದಲ್ಲಿ ಐದನೇ ಸ್ಥಾನ), ರೆಫ್ರಿಜರೇಟರ್ (ಅಖಿಲ ಭಾರತ ಮಟ್ಟದಲ್ಲಿ 14), ವಾಷಿಂಗ್ ಮಶೀನ್ (ಅಖಿಲ ಭಾರತ ಮಟ್ಟದಲ್ಲಿ 26ನೇ ಸ್ಥಾನ) ಮುಂಚೂಣಿಯಲ್ಲಿದೆ.
ಇತರ ಪ್ರಮುಖ ವಿಭಾಗಗಳಲ್ಲಿ ಮುಂಚೂಣಿಯಲ್ಲಿ ಇರುವುದು ಪತಂಜಲಿ ದಂತ್ ಕಾಂತಿ (ಅಖಿಲ ಭಾರತ ಮಟ್ಟದಲ್ಲಿ 15ನೇ ಸ್ಥಾನ) ಟೂಥ್ ಪೇಸ್ಟ್ ವಿಭಾಗದಲ್ಲಿದೆ. ಒಂಬತ್ತು ವರ್ಷದಿಂದ ಈ ಸ್ಥಾನ ಭದ್ರ ಪಡಿಸಿಕೊಂಡಿದ್ದ ಕೋಲ್ಗೆಟ್ ಅನ್ನು ಪಕ್ಕಕ್ಕೆ ಸರಿಸಿದೆ.
ಈ ವರ್ಷದ ವರದಿಗಾಗಿ 16 ನಗರಗಳಲ್ಲಿ, ಗ್ರಾಹಕರ ಮೇಲೆ ಪ್ರಭಾವ ಬೀರುವ 1711 ಮಂದಿಯನ್ನು ಒಳಗೊಂಡಂತೆ 8000 ಬ್ರ್ಯಾಂಡ್ ಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಟಾಪ್ 1000 ಬ್ರ್ಯಾಂಡ್ ಗಳನ್ನು ಲಿಸ್ಟ್ ಮಾಡಿಕೊಳ್ಳಲಾಗಿತ್ತು.