For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ನೇಮಕ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ಅವರನ್ನು ಮಂಗಳವಾರ ಸರ್ಕಾರದಿಂದ ನೇಮಕ ಮಾಡಲಾಗಿದೆ. ಅಕ್ಟೋಬರ್ 7ನೇ ತಾರೀಕಿನಿಂದ ಮೂರು ವರ್ಷದ ಅವಧಿಗೆ ಅವರನ್ನು ನೇಮಿಸಲಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ನೇತೃತ್ವವನ್ನು ಅಧ್ಯಕ್ಷರು ವಹಿಸುತ್ತಾರೆ. ಅವರಿಗೆ ನಾಲ್ವರು ಕಾರ್ಯ ನಿರ್ವಾಹಕ ನಿರ್ದೇಶಕರು ನೆರವು ನೀಡುತ್ತಾರೆ.

ದಿನೇಶ್ ಕುಮಾರ್ ಅವರು ಎಸ್ ಬಿಐ ಅಧ್ಯಕ್ಷರಾಗಿರುವ ರಜನೀಶ್ ಕುಮಾರ್ ಸ್ಥಾನಕ್ಕೆ ಬರಲಿದ್ದಾರೆ. ರಜನೀಶ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ನೇ ತಾರೀಕಿಗೆ ಕೊನೆಯಾಗುತ್ತದೆ. 2017ರಲ್ಲಿ ಅಧ್ಯಕ್ಷರ ಹುದ್ದೆಯ ಸ್ಪರ್ಧಿಗಳಲ್ಲಿ ಖಾರ ಹೆಸರು ಕೂಡ ಕೇಳಿಬಂದಿತ್ತು. 2016ರ ಆಗಸ್ಟ್ ನಲ್ಲಿ ದಿನೇಶ್ ಕುಮಾರ್ ಅವರನ್ನು ಮೂರು ವರ್ಷದ ಅವಧಿಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ ಗಳಿಗೆ ಆಫರ್ ಗಳ ಸುರಿಮಳೆ

2019ರಲ್ಲಿ ಎರಡು ವರ್ಷಗಳ ವಿಸ್ತರಣೆ ಸಿಕ್ಕಿತ್ತು. ದಿನೇಶ್ ಖಾರ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ಲೋಬಲ್ ಬ್ಯಾಂಕಿಂಗ್ ವಿಭಾಗದ ನೇತೃತ್ವ ವಹಿಸಿದ್ದವರು. ಮಂಡಳಿ ಮಟ್ಟದ ಹುದ್ದೆಗಳನ್ನು ನಿರ್ವಹಿಸಿದವರು ಮತ್ತು ನಾನ್ ಬ್ಯಾಂಕಿಂಗ್ ಅಂಗಸಂಸ್ಥೆಗಳ ವ್ಯವಹಾರಗಳ ನಿಗಾ ವಹಿಸುತ್ತಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ನೇಮಕ

ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಖಾರ ಆಯ್ಕೆ ಆಗುವ ಮುನ್ನ ಎಸ್ ಬಿಐ ಫಂಡ್ಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮೆಟೆಡ್ ಸಿಇಒ ಹಾಗೂ ಎಂ.ಡಿ. ಆಗಿದ್ದರು. ಅವರು 1984ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಎಸ್ ಬಿಐ ಸೇರ್ಪಡೆಯಾದವರು. ಐದು ಸಹವರ್ತಿ ಬ್ಯಾಂಕ್ ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಎಸ್ ಬಿಐನಲ್ಲಿ ವಿಲೀನ ಮಾಡುವುದರಲ್ಲಿ ಖಾರ ಅವರ ಪಾತ್ರ ಪ್ರಮುಖವಾಗಿತ್ತು.

ಕೊರೊನಾ ಸನ್ನಿವೇಶದಲ್ಲಿ ಎಸ್ ಬಿಐಗೆ ಪ್ರಮುಖ ಸವಾಲು ಇದೆ. ಜೂನ್ 30, 2020ಕ್ಕೆ ಕೊರೊನಾದ ಕಾರಣಕ್ಕೆ ನಷ್ಟ ಸಂಭವಿಸಬಹುದು ಎಂದು 3000 ಕೋಟಿ ರುಪಾಯಿ ಪ್ರಾವಿಷನ್ ಮಾಡಿದೆ.

English summary

Dinesh Kumar Khara Appointed As SBI Chairman For 3 Year Tenure By Government

Dinesh Kumar Khara appointed as SBI chairman by government for 3 year tenure which will come into effect from October 7, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X