For Quick Alerts
ALLOW NOTIFICATIONS  
For Daily Alerts

ಏರ್ ಬಬಲ್ ಒಪ್ಪಂದ: ಗೋವಾದಿಂದ ಲಂಡನ್ ಗೆ ನೇರ ವಿಮಾನ ಹಾರಾಟ

|

ಏರ್ ಇಂಡಿಯಾವು ಗೋವಾದಿಂದ ಲಂಡನ್ ಗೆ ನೇರ ವಿಮಾನ ಸೇವೆಯನ್ನು ಭಾನುವಾರದಿಂದ ಆರಂಭ ಮಾಡಿದೆ. ಆರಂಭದಲ್ಲಿ ಇದು ವಾರಕ್ಕೆ ಒಮ್ಮೆ ಮಾತ್ರ ಇರುತ್ತದೆ. ನವೆಂಬರ್ ತಿಂಗಳಿನಿಂದ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಇದು ವಾರಕ್ಕೆ ಎರಡು ಬಾರಿ ಹಾರಾಟ ನಡೆಸುತ್ತದೆ ಎಂದು ಗೋವಾ ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.

"ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಮುಖ್ಯವಾದ ದಿನವಿದು. ಇಂದು ಏರ್ ಇಂಡಿಯಾದಿಂದ LHR-GOI-LHR, B787 ನೇರ ವಿಮಾನ ಆರಂಭಿಸಲಾಯಿತು. ಆರಂಭದಲ್ಲಿ ವಾರಕ್ಕೆ ಒಮ್ಮೆ ಆನಂತರ ನವೆಂಬರ್ ನಿಂದ ಏರ್ ಬಬಲ್ ಅಡಿಯಲ್ಲಿ ವಾರಕ್ಕೆ ಎರಡು ಬಾರು ಹಾರಾಟ ನಡೆಸುತ್ತದೆ. ಗೋವಾ ಈಗ ಲಂಡನ್ ಜತೆಗೆ ನೇರವಾಗಿ ಸಂಪರ್ಕ ಹೊಂದಿದೆ," ಎಂದು ಟ್ವೀಟ್ ಮಾಡಲಾಗಿದೆ.

 

ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ತಡೆರಹಿತ ವಿಮಾನ ಮುಂದಿನ ವರ್ಷದಿಂದ

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಮೂಲಿ ಅಂತರರಾಷ್ಟ್ರೀಯ ವಿಮಾನಗಳಿಗೆ ನಿಷೇಧ ಇದ್ದರೂ ನಾಗರಿಕ ವಿಮಾನಯಾನ ಸಚಿವಾಲಯದಿಂದ ಕೆಲವು ದೇಶಗಳ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ವಿಸ್ತಾರಾದಿಂದ ಕಳೆದ ಗುರುವಾರ ಮಾಹಿತಿ ನೀಡಿದ್ದು, ದೆಹಲಿ- ಲಂಡನ್ ಮಧ್ಯದ ವಿಮಾನ ಹಾರಾಟ ಸಂಖ್ಯೆಯನ್ನು ನವೆಂಬರ್ 21ರಿಂದ ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ.

ಏರ್ ಬಬಲ್ ಒಪ್ಪಂದ: ಗೋವಾದಿಂದ ಲಂಡನ್ ಗೆ ನೇರ ವಿಮಾನ ಹಾರಾಟ

ನವೆಂಬರ್ 21ರಿಂದ ದೆಹಲಿ- ಲಂಡನ್ ಮಧ್ಯೆ ವಾರಕ್ಕೆ ಐದು ವಿಮಾನಗಳ ಹಾರಾಟ ನಡೆಯುತ್ತದೆ. ಸದ್ಯಕ್ಕೆ ವಾರಕ್ಕೆ ನಾಲ್ಕು ವಿಮಾನ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಡಿಸೆಂಬರ್ 1ನೇ ತಾರೀಕಿನಿಂದ ನಿತ್ಯವೂ ಹಾರಾಟ ನಡೆಸುತ್ತದೆ ಎಂದು ವಿಸ್ತಾರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಹಾಗೂ ಯುಕೆ ಮಧ್ಯೆ ಏರ್ಪಟ್ಟಿರುವ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಈ ಹಾರಾಟ ನಡೆಯುತ್ತಿದೆ. ನಿಗದಿತ ವೇಳಾಪಟ್ಟಿಯ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಮಾರ್ಚ್ 23ರಿಂದಲೇ ಅಮಾನತು ಮಾಡಲಾಗಿದೆ. ಕಳೆದ ಜುಲೈನಿಂದ ಭಾರತವು 17 ದೇಶಗಳ ಜತೆಗೆ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಎರಡೂ ದೇಶಗಳು ಕೆಲವು ನಿರ್ಬಂಧದೊಂದಿಗೆ ಪರಸ್ಪರ ದೇಶಗಳಿಗೆ ಪ್ರಯಾಣಿಕರ ವಿಮಾನ ಹಾರಾಟ ನಡೆಸಬಹುದು.

English summary

Direct Flight From Goa To London Under Air Bubble Agreement

Direct flight operation started from Goa to London on Sunday, under air bubble agreement.
Company Search
COVID-19