For Quick Alerts
ALLOW NOTIFICATIONS  
For Daily Alerts

ನೇರ ತೆರಿಗೆ ಸಂಗ್ರಹ ಹೆಚ್ಚಳ: 2020-21ರ ಹಣಕಾಸು ವರ್ಷದಲ್ಲಿ 9.45 ಲಕ್ಷ ಕೋಟಿ ರೂಪಾಯಿ

|

ಮಾರ್ಚ್‌ 31ಕ್ಕೆ ಕೊನೆಗೊಂಡ 2020-21ರ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು 9.45 ಲಕ್ಷ ಕೋಟಿ ರೂ. ಆಗಿದ್ದು, ಇದು ಕೇಂದ್ರ ಬಜೆಟ್‌ನಲ್ಲಿ ಪರಿಷ್ಕೃತ ಅಂದಾಜುಗಳಿಗಿಂತ ಶೇ. 5ರಷ್ಟು ಹೆಚ್ಚಾಗಿದೆ.

 

2020-21ರ ಹಣಕಾಸು ವರ್ಷದಲ್ಲಿ ಗಣನೀಯ ಪ್ರಮಾಣದ ಮರುಪಾವತಿ ನೀಡಿದ್ದರೂ, ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಅಂದಾಜುಗಳನ್ನು ಮೀರಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಪಿ.ಸಿ ಮೋಡಿ ಶುಕ್ರವಾರ ಹೇಳಿದ್ದಾರೆ.

2020-21ರ ವರ್ಷದಲ್ಲಿ 9.45 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ

ಕಾರ್ಪೋರೇಟ್ ತೆರಿಗೆ ಸಂಗ್ರಹ ಹೆಚ್ಚಳ

ಇದೇ ಹಣಕಾಸಿನ ಅವಧಿಯಲ್ಲಿ, ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು 4.57 ಲಕ್ಷ ಕೋಟಿ ರೂ., ನಿವ್ವಳ ವೈಯಕ್ತಿಕ ಆದಾಯ ತೆರಿಗೆ 4.71 ಲಕ್ಷ ಕೋಟಿ ರೂ. ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಯಿಂದ 16,927 ಕೋಟಿ ರೂ. ಸಂಗ್ರಹಗೊಂಡಿದೆ.

ಇನ್ನು 2020ರ ಅತ್ಯಂತ ಸವಾಲಿನ ವರ್ಷದ ಹೊರತಾಗಿಯೂ, ಹಣಕಾಸು ವರ್ಷ 2020-21ರ ಮುಂಗಡ ತೆರಿಗೆ ಸಂಗ್ರಹವು 4.95 ಲಕ್ಷ ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಸುಮಾರು 6.7 ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಸರ್ಕಾರ ಹೇಳಿದೆ.

English summary

Direct Tax Collection In FY-21 At Rs 9.45 Lakh Crore

The Centre’s net direct tax collection grew 4.42% in 2020-21 at Rs 9.45 lakh crore over the revised estimate (RE) of Rs 9.05 lakh crore after giving Rs 2.61 lakh crore refunds to the taxpayer, Union finance ministry said on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X