For Quick Alerts
ALLOW NOTIFICATIONS  
For Daily Alerts

ಡಿಮಾರ್ಟ್ ಸಿಇಒ ನೊರೊನ್ಹಾ ಈಗ ಬಿಲಿಯನೇರ್‌

|

ನವದೆಹಲಿ, ಅಕ್ಟೋಬರ್ 18: ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಇಗ್ನೇಷಿಯಸ್ ನವಿಲ್ ನೊರೊನ್ಹಾ ಈಗ ಬಿಲಿಯನೇರ್‌ (ಶತ ಕೋಟ್ಯಧಿಪತಿ) ಆಗಿದ್ದಾರೆ.

 

ಪ್ರಸ್ತುತ ದೇಶಾದಾದ್ಯಂತ ಡಿಮಾರ್ಟ್ ರಿಟೇಲ್‌ ಸ್ಟೋರ್‌ಗಳಲ್ಲಿ ವ್ಯಾಪಾರವು ಅಧಿಕವಾಗಿದೆ. ಕಡಿಮೆ ದರದಲ್ಲಿ ಅಗತ್ಯ ಸಾಮಾಗ್ರಿಗಳು ದೊರೆಯುತ್ತದೆ ಎಂಬ ನಿಟ್ಟಿನಲ್ಲಿ ಹೆಚ್ಚಿನ ಜನರು ಡಿಮಾರ್ಟ್‌ನತ್ತ ಮುಖಮಾಡಿದ್ದಾರೆ. ಈ ನಡುವೆ ಡಿಮಾರ್ಟ್‌ನ ಲಾಭವು ಕೂಡಾ ಅಧಿಕವಾಗಿದೆ. ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್‌ನ ತೆರಿಗೆಯ ಬಳಿಕದ ಲಾಭವು 417.76 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 198.55 ಕೋಟಿ ರೂಪಾಯಿ ಲಾಭವನ್ನು ಡಿಮಾರ್ಟ್‌ ಹೊಂದಿತ್ತು. ಇದಕ್ಕೆ ಹೋಲಿಕೆ ಮಾಡಿದಾಗ ಅಂದರೆ 2020ರ ಸೆಪ್ಟೆಂಬರ್ ತ್ರೈಮಾಸಿಕಕ್ಕಿಂತ ಶೇ 110.4ರಷ್ಟು ಹೆಚ್ಚು ಲಾಭ ದಾಖಲಾಗಿದೆ.

ಫೋರ್ಬ್ಸ್: ಉದ್ಯೋಗದಾತ ಪಟ್ಟಿಯಲ್ಲಿ ಭಾರತಕ್ಕೆ ರಿಲಯನ್ಸ್ ಪ್ರಥಮ

2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಡಿಮಾರ್ಟ್ ರಿಟೇಲ್ ಸ್ಟೋರ್‌ಗೆ ಒಟ್ಟು ಆದಾಯವು 5306.20 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷದಲ್ಲಿ ಈ ಆದಾಯವು ಭಾರೀ ಏರಿಕೆ ಆಗಿದೆ. ಶೇಕಡ 46.8ರಷ್ಟು ಆದಾಯವು ಹೆಚ್ಚಳವಾಗಿದ್ದು, ಈಗ 7789 ಕೋಟಿ ರೂಪಾಯಿ ಆದಾಯವನ್ನು ಈ ತ್ರೈಮಾಸಿಕದಲ್ಲಿ ಡಿಮಾರ್ಟ್ ಹೊಂದಿದೆ. ಇನ್ನು ಡಿಮಾರ್ಟ್ ಷೇರುಗಳು ಶೇಕಡ 113 ಏರಿಕೆ ಕಂಡಿದೆ ಎಂದು ಹೇಳಲಾಗಿದೆ.

 ನೊರೊನ್ಹಾ ಆದಾಯ 7,744 ಕೋಟಿಗೆ ಏರಿಕೆ

ನೊರೊನ್ಹಾ ಆದಾಯ 7,744 ಕೋಟಿಗೆ ಏರಿಕೆ

ಈ ಎಲ್ಲಾ ಬೆಳವಣಿಗೆಯ ನಡುವೆ ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 47 ವರ್ಷ ಪ್ರಾಯದ ಇಗ್ನೇಷಿಯಸ್ ನವಿಲ್ ನೊರೊನ್ಹಾ ಈಗ ಬಿಲಿಯನೇರ್‌ (ಶತ ಕೋಟ್ಯಧಿಪತಿ) ಆಗಿದ್ದಾರೆ. ಇಗ್ನೇಷಿಯಸ್ ನವಿಲ್ ನೊರೊನ್ಹಾರ ಆದಾಯವು ಈಗ 7,744 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.

 ಸಂಸ್ಥೆಯಲ್ಲಿ ಶೇಕಡ  2.03 ಪಾಲು ಹೊಂದಿರುವ ನೊರೊನ್ಹಾ

ಸಂಸ್ಥೆಯಲ್ಲಿ ಶೇಕಡ 2.03 ಪಾಲು ಹೊಂದಿರುವ ನೊರೊನ್ಹಾ

ಇಗ್ನೇಷಿಯಸ್ ನವಿಲ್ ನೊರೊನ್ಹಾ ಪ್ರಸ್ತುತ ಒಟ್ಟು 13.13 ಮಿಲಿಯನ್‌ ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ ಒಟ್ಟು ಶೇಕಡ 2.03 ಪಾಲನ್ನು ಹೊಂದಿದ್ದಾರೆ. ಇನ್ನು ಡಿಮಾರ್ಟ್ ರಿಟೇಲ್ ಸ್ಟೋರ್‌ನ ಅಭಿವೃದ್ಧಿ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಇಗ್ನೇಷಿಯಸ್ ನವಿಲ್ ನೊರೊನ್ಹಾ, "ಕಳೆದ ವರ್ಷ ಇದೇ ತ್ರೈಮಾಸಿಕಕ್ಕಿಂತ ಈ ವರ್ಷದಲ್ಲಿ ಡಿಮಾರ್ಟ್‌ನ ಆದಾಯವು ಶೇಕಡ 46.6ರಷ್ಟು ಅಧಿಕವಾಗಿದೆ. ಈ ಹಿಂದಿಗೆ ಹೋಲಿಕೆ ಮಾಡಿದರೆ ಈಗ ಡಿಮಾರ್ಟ್ ಸ್ಟೋರ್‌ಗಳಲ್ಲಿ ಶೇಕಡ 23.7 ರಷ್ಟು ಅಭಿವೃದ್ಧಿ ಕಂಡು ಬಂದಿದೆ," ಎಂದು ತಿಳಿಸಿದ್ದಾರೆ.

ಗೋಲ್ಡ್‌ ಇಟಿಫ್‌ ಹೂಡಿಕೆ ಅಧಿಕ: ಮುಂಬರುವ ತಿಂಗಳುಗಳಲ್ಲೂ ಏರಿಕೆ ಸಾಧ್ಯತೆ

 ಷೇರು ಶೇಕಡ 1,800 ಪಟ್ಟು ಜಿಗಿತ!
 

ಷೇರು ಶೇಕಡ 1,800 ಪಟ್ಟು ಜಿಗಿತ!

"ನಾವು ಒಟ್ಟು 187 ಸ್ಟೋರ್​ಗಳನನ್ನು ಹೊಂದಿದ್ದೇವೆ. ಈ ಪೈಕಿ ಹೆಚ್ಚಿನವು ಎರಡು ವರ್ಷ ಅಥವಾ ಅದಕ್ಕಿಂತ ಹಳೆಯದ್ದು ಆಗಿದೆ," ಎಂದು ಅವೆನ್ಯೂ ಸೂಪರ್​ಮಾರ್ಟ್ಸ್​ನ ಇಗ್ನೇಷಿಯಸ್ ನವಿಲ್ ನೊರೊನ್ಹಾ ಹೇಳಿದ್ದಾರೆ. ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್‌ನ ಷೇರು ಅಧಿಕವಾದ ಬಳಿಕ ಮಾರ್ಟ್‌ನ ವ್ಯಾಪಾರವು ಅಧಿಕವಾಗಿದೆ ಎಂದು ಹೇಳಲಾಗಿದೆ. 2017 ರ ಮಾರ್ಚ್ 21 ರಂದು ಅವೆನ್ಯೂ ಸೂಪರ್​ಮಾರ್ಟ್ಸ್ ಲಿಮಿಟೆಡ್‌ನ ಷೇರು ರೂಪಾಯಿ 299 ಆಗಿತ್ತು. ಆದರೆ ಈಗ ಶೇಕಡ 1,800 ಪಟ್ಟು ಬೆಲೆಯು ಅಧಿಕವಾಗಿದೆ.

 ನವಿಲ್ ನೊರೊನ್ಹಾ ಬಗ್ಗೆ ಸ್ವಲ್ಪ ತಿಳಿಯಿರಿ..

ನವಿಲ್ ನೊರೊನ್ಹಾ ಬಗ್ಗೆ ಸ್ವಲ್ಪ ತಿಳಿಯಿರಿ..

ಮುಂಬೈನಲ್ಲೇ ಹುಟ್ಟಿ ಬೆಳೆದ, ಇಗ್ನೇಷಿಯಸ್ ನವಿಲ್ ನೊರೊನ್ಹಾ ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಮ್ಯಾನೇಜ್‌ಮೆಂಟ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಡಿಮಾರ್ಟ್‌ಗೆ ಸೇರುವ ಮುನ್ನ, ನೊರೊನ್ಹಾ ಹಿಂದುಸ್ತಾನ್ ಯೂನಿಲಿವರ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ನವಿಲ್ ನೊರೊನ್ಹಾರನ್ನು ಅವೆನ್ಯೂ ಸೂಪರ್ ಮಾರ್ಟ್ಸ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ 2004 ರಲ್ಲಿ ವ್ಯವಹಾರದ ಮುಖ್ಯಸ್ಥರಾಗಿ ನೇಮಿಸಿಕೊಂಡಿದ್ದಾರೆ. 2007 ರಲ್ಲಿ ನವಿಲ್ ನೊರೊನ್ಹಾ ಸಂಸ್ಥೆಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.

English summary

DMart CEO Ignatius Navil Noronha is now billionaire

DMart CEO Ignatius Navil Noronha is now billionaire. To know about his Income, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X