For Quick Alerts
ALLOW NOTIFICATIONS  
For Daily Alerts

ಏರ್‌ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!

|

ಹೊಸ ಕಾರುಗಳಲ್ಲಿ ಮುಂಭಾಗದ ಸೀಟುಗಳಿಗೆ ಏರ್‌ಬ್ಯಾಗ್‌ ಕಡ್ಡಾಯಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಕೃತವಾಗಿ (ಟ್ವಿಟ್ಟರ್ ಮೂಲಕ) ಪ್ರಕಟಣೆ ಹೊರಬಿದ್ದ ಬಳಿಕ 2021 ರ ಏಪ್ರಿಲ್ 1 ರಿಂದ ಎಲ್ಲಾ ಹೊಸ ವಾಹನಗಳನ್ನು ಮುಂಭಾಗದ ಪ್ರಯಾಣಿಕರ ಏರ್‌ಬ್ಯಾಗ್‌ನೊಂದಿಗೆ ಗುಣಮಟ್ಟದ ಸಾಧನವಾಗಿ ಮಾರಾಟ ಮಾಡಬೇಕೆಂದು ಹೇಳಿದೆ.

ಇಲ್ಲಿಯವರೆಗೆ, ಸರ್ಕಾರವು ಕಾರಿನ ಡ್ರೈವರ್ ಸೀಟ್‌ನಲ್ಲಿ ಏರ್‌ಬ್ಯಾಗ್ ಹೊಂದಿರಬೇಕೆಂದು ಮಾತ್ರ ಆದೇಶಿಸಿತ್ತು. ಮಾರುತಿ ಸುಜುಕಿ ಸ್ಪ್ರೆಸೊ, ರೆನಾಲ್ಟ್ ಕ್ವಿಡ್, ಹ್ಯುಂಡೈ ಸ್ಯಾಂಟ್ರೊ ಮುಂತಾದ ಆರಂಭಿಕ ಲೆವೆಲ್ ಕಾರುಗಳ ಹಲವು ಮಾಡೆಲ್‌ಗಳಲ್ಲಿ ಕಾರಿನ ಡ್ರೈವರ್‌ ಸೀಟ್‌ಗೆ ಏರ್‌ಬ್ಯಾಗ್‌ ನೀಡುತ್ತದೆ. ಮುಂಭಾಗದ ಎರಡು ಸೀಟ್‌ಗಳಿಗೆ ಹೆಚ್ಚುವರಿ ವೆಚ್ಚದೊಂದಿಗೆ ಏರ್‌ಬ್ಯಾಗ್‌ ಬರುತ್ತದೆ.

ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ
 

ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ

ಚಾಲಕ ಮತ್ತು ಪ್ರಯಾಣಿಕರ ನಡುವಿನ ಸುರಕ್ಷತಾ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರವು ಈ ಕ್ರಮ ಕೈಗೊಂಡಿದೆ. ಮೊದಲೇ ಅಸ್ತಿತ್ವದಲ್ಲಿರುವ ಕಾನೂನುಗಳು ಭಾರತದ ರಸ್ತೆ ಸುರಕ್ಷತಾ ಮಾನದಂಡಗಳಲ್ಲಿ ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸಿದ ಕಾರಣ, ಸರ್ಕಾರವು ಗೆಜೆಟ್ ಅಧಿಸೂಚನೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ.

ಏಪ್ರಿಲ್‌ 1ರಿಂದ ಮಾರಾಟವಾಗುವ ಕಾರುಗಳಿಗೆ ಅನ್ವಯ

ಏಪ್ರಿಲ್‌ 1ರಿಂದ ಮಾರಾಟವಾಗುವ ಕಾರುಗಳಿಗೆ ಅನ್ವಯ

ಏಪ್ರಿಲ್ 1 ರ ನಂತರ ಮಾರಾಟವಾಗಲಿರುವ ಎಲ್ಲಾ ಹೊಸ ವಾಹನಗಳು ಮುಂಭಾಗದ ಸೀಟ್‌ಗಳಲ್ಲಿ ಏರ್‌ಬ್ಯಾಗ್ ಹೊಂದಿರಬೇಕು ಎಂದು ನಿಯಮ ಹೇಳುತ್ತದೆ, ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಕಾರುಗಳನ್ನು 2021ರ ಆಗಸ್ಟ್ 31 ರಿಂದ ಡ್ಯುಯಲ್ ಏರ್‌ಬ್ಯಾಗ್‌ಗಳೊಂದಿಗೆ ಮಾರಾಟ ಮಾಡಬೇಕಾಗುತ್ತದೆ.

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು ಅತಿ ಹೆಚ್ಚು ಮಾರಾಟ

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು ಅತಿ ಹೆಚ್ಚು ಮಾರಾಟ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಹತ್ತು ಕಾರುಗಳಲ್ಲಿ ಏಳನ್ನು ಮಾರುತಿ ಸುಜುಕಿ ಮಾರಾಟ ಮಾಡಿದ್ದು, ಕಾರುಗಳ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ವಿಫ್ಟ್, ಬಲೆನೊ, ವ್ಯಾಗನ್ಆರ್ ಮತ್ತು ಆಲ್ಟೊ ಫೆಬ್ರವರಿ, 2021 ಅತಿ ಹೆಚ್ಚು ಮಾರಾಟವಾದ ಕಾರುಗಳಾಗಿವೆ. ಆದರೆ ಈ ಎಲ್ಲಾ ಕಾರುಗಳು ಮುಂಭಾಗದ ಎರಡು ಸೀಟ್‌ಗಳಿಗೆ ಏರ್‌ಬ್ಯಾಗ್‌ ಹೊಂದಿಲ್ಲ.

ಉದಾಹರಣೆಗೆ, ಸುಜುಕಿ ಸ್ವಿಫ್ಟ್ ಎಲ್ಸಿ, ಮುಂಭಾಗದ ಎರಡು ಸೀಟ್‌ಗಳಲ್ಲಿ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ನೀಡುತ್ತದೆ, ಆದಾಗ್ಯೂ, ಪ್ರಯಾಣಿಕರ ಏರ್‌ಬ್ಯಾಗ್ ಸ್ಪಷ್ಟವಾಗಿ ಇರುವುದಿಲ್ಲ.

ಭಾರತದ ಕಾರುಗಳ ಸುರಕ್ಷತೆಯಲ್ಲಿದೆ ಲೋಪದೋಷ!
 

ಭಾರತದ ಕಾರುಗಳ ಸುರಕ್ಷತೆಯಲ್ಲಿದೆ ಲೋಪದೋಷ!

ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ಇದ್ದರೂ ಸಹ, ಭಾರತದಲ್ಲಿ ಕಾರುಗಳ ಸುರಕ್ಷತೆಯಲ್ಲಿ ಯಾವಾಗಲು ಲೋಪದೋಷಗಳು ಕಂಡುಬರುತ್ತಿವೆ. ಭಾರತದ ಬಹುತೇಕ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಮತ್ತು ಯುರೋಎನ್‌ಸಿಎಪಿ ಅಪಘಾತ (ಕ್ರ್ಯಾಶ್) ಪರೀಕ್ಷೆಗಳಲ್ಲಿ ನಿರಂತರವಾಗಿ ಒಂದು ಅಥವಾ ಎರಡು ಸ್ಟಾರ್ ರೇಟಿಂಗ್‌ಗಳನ್ನು ಪಡೆಯುತ್ತಿವೆ.

ಇದು ಮೇಲ್ಮೋಟಕ್ಕೆ ಬ್ರ್ಯಾಂಡ್‌ಗಳಿಗೆ ತಮ್ಮ ಕಾರುಗಳನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರೆ, ಸ್ಥಳೀಯ ತಯಾರಕರಾದ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ತಮ್ಮ ಪ್ರತಿಸ್ಪರ್ಧಿಗಳನ್ನು ಸುರಕ್ಷತಾ ದೃಷ್ಟಿಯಿಂದ ಪ್ರಬಲ ಪೈಪೋಟಿ ನೀಡಲು ಅವಕಾಶ ಮಾಡಿಕೊಟ್ಟಿದೆ.

ಟಾಟಾ, ಮಹೀಂದ್ರಾ ಕಾರುಗಳ ಪ್ರಬಲ ಪೈಪೋಟಿ

ಟಾಟಾ, ಮಹೀಂದ್ರಾ ಕಾರುಗಳ ಪ್ರಬಲ ಪೈಪೋಟಿ

ಟಾಟಾ, ಮಹೀಂದ್ರಾ ಕಾರುಗಳು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಮೂಲಕ ಇತರೆ ಪ್ರತಿಸ್ಪರ್ಧಿಗಳಿಗೆ ಸಾಕಷ್ಟು ಪೈಪೋಟಿ ನೀಡುತ್ತಿವೆ. ಇತ್ತೀಚಿನ ಗ್ಲೋಬಲ್‌ಎನ್‌ಸಿಎಪಿ ಸುರಕ್ಷತೆಯಲ್ಲಿ ಬ್ರಾಂಡ್‌ಗಳು ನಾಲ್ಕು ಸ್ಟಾರ್ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಟಾಟಾ ಟಿಯಾಗೊ ಮತ್ತು ಮಹೀಂದ್ರಾ ಕೆಯುವಿ 100 ನಂತಹ ಕಾರುಗಳ ಮೂಲ ರೂಪಾಂತರಗಳು ಪ್ರಯಾಣಿಕರ ಏರ್‌ಬ್ಯಾಗ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತವೆ.

ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದರೆ, ಕಾರುಗಳ ತಯಾರಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಸರ್ಕಾರದ ಹೊಸ ಕಾನೂನು ಜಾರಿ ಕೂಡ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ಪ್ರೋತ್ಸಾಹಿಸುತ್ತದೆ.

English summary

Dual airbags mandatory for new cars likely to increase prices

Central Govt mandated all new vehicles are to be sold with a front passenger airbag as standard equipment. This could increase the price of new cars.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X