For Quick Alerts
ALLOW NOTIFICATIONS  
For Daily Alerts

ದುಬೈನ 25ನೇ ಶಾಪಿಂಗ್ ಫೆಸ್ಟಿವಲ್‍, ಶೇ 90ರಷ್ಟು ರಿಯಾಯಿತಿ ಗಳಿಸಿ

|

ದುಬೈ, ಡಿಸೆಂಬರ್ 24: ಜಗತ್ತಿನ ಅತ್ಯಂತ ದೊಡ್ಡ ಶಾಪಿಂಗ್ ಫೆಸ್ಟಿವಲ್‍ಗಳಲ್ಲಿ ಒಂದಾದ ಹಾಗೂ ಡಿಎಫ್‍ಆರ್‍ಇ ಆಯೋಜಿಸುವ ದುಬೈ ಶಾಪಿಂಗ್ ಫೆಸ್ಟಿವಲ್‍ನ 25ನೇ ಆವೃತ್ತಿ ಗುರುವಾರ ಡಿಸೆಂಬರ್ 26, 2019ರಿಂದ ಫೆಬ್ರವರಿ 1, 2020ರವರೆಗೆ ನಡೆಯಲಿದೆ. ಮೂವತ್ತೆಂಟು ದಿನಗಳ ಅದ್ಭುತ ಪ್ರದರ್ಶನಗಳು, ತಲ್ಲೀನಗೊಳಿಸುವ ಅನುಭವಗಳು, ನವೀನ ಬ್ರಾಂಡ್ ಆ್ಯಕ್ಟಿವೇಷನ್‍ಗಳು ಮತ್ತು ಕುಟುಂಬ ಸ್ನೇಹಿ ಅನುಭವಗಳೊಂದಿಗೆ ಈ ಆವೃತ್ತಿ ಅತ್ಯಂತ ನೆನಪಿನಲ್ಲುಳಿಯುವಂಥದ್ದಾಗಲಿದೆ.

1000ಕ್ಕೂ ಹೆಚ್ಚಿನ ಬ್ರಾಂಡ್‍ಗಳು ಭಾಗವಹಿಸುವುದರೊಂದಿಗೆ ಸುಮಾರು 4000 ಮಳಿಗೆಗಳು ಈ ಮೇಳದಲ್ಲಿದ್ದು, ನಗರದಲ್ಲಿ ಶೇ 75ರವರೆಗಿನ ರಿಯಾಯಿತಿಗಳು ಮತ್ತು7 ಕೊಡುಗೆಗಳನ್ನು ಶಾಪರ್ ಗಳು ಮತ್ತು ಡೀಲ್ ಹಂಟರ್ ಗಳಿಗೆ ನಗರದಲ್ಲಿ ಎಲ್ಲೆಡೆ ನೀಡಲಾಗುವುದು. ಜೊತೆಗೆ ಶಾಪರ್ ಗಳಿಗೆ ಜಾಗತಿಕ ಫ್ಯಾಷನ್, ಸೌಂದರ್ಯ, ಮನೆ ವಸ್ತುಗಳು ಮತ್ತು ಜೀವನಶೈಲಿ ಉತ್ಪನ್ನಗಳ ರೀಟೇಲರ್ ಗಳಿಂದ ಬ್ರಾಂಡ್ ಆ್ಯಕ್ಟಿವೇಷನ್‍ಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.

 

ನೀವು ಎದರು ನೋಡಬೇಕಾದ ವಿಷಯಗಳು ಇಂತಿವೆ: ಬುರ್ಜ್‍ಪಾರ್ಕ್ ಡೌನ್‍ಟೌನ್ ದುಬೈನಲ್ಲಿ ಹಿಂದೆಂದೂ ಇಲ್ಲದಂತಹ ವೈಭವೋಪೇತ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಮಿರೇಟ್ಸ್ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಂದ ಪ್ರದರ್ಶನಗಳು ಅಲ್ಲದೇ ಸಾಂಸ್ಕೃತಿಕ ಮತ್ತು ಕುಟುಂಬ ಸ್ನೇಹಿ ಕಾರ್ಯಕ್ರಮಗಳು ಡಿಸೆಂಬರ್ 26. 27, 2019ರಂದು ನಡೆಯಲಿವೆ. ಜೊತೆಗೆ ದುಬೈನ ಖ್ಯಾತ ಆಗಸದಲ್ಲಿನ ಬಾಣ ಬಿರುಸುಗಳ ಪ್ರದರ್ಶನ ಜೊತೆಗೆ ನಗರದ ಎಲ್ಲೆಡೆ ಒಂದೇ ಬಾರಿಗೆ ಬೆಳಕಿನ ಪ್ರದರ್ಶನ ಗಮನ ಸೆಳೆಯುವಂಥದ್ದಾಗಿರುತ್ತದೆ.

ಶಾಪಿಂಗ್ ಮತ್ತು ಪ್ರೋತ್ಸಾಹನಾ ಕಾರ್ಯಕ್ರಮಗಳು

ಶಾಪಿಂಗ್ ಮತ್ತು ಪ್ರೋತ್ಸಾಹನಾ ಕಾರ್ಯಕ್ರಮಗಳು

ದುಬೈನ ಮಾಲ್‍ಗಳಲ್ಲಿ ಖರೀದಿಸುವವರಿಗೆ ಶೇ.25ರಿಂದ ಶೇ.75ರವರೆಗಿನ ರಿಯಾಯಿತಿ ಲಭ್ಯವಿರುತ್ತದೆ. ಅಂತಾರಾಷ್ಟ್ರೀಯ ಫ್ಯಾಷನ್, ಸೌಂದರ್ಯ, ಗೃಹೋಪಯೋಗಿ ಮತ್ತು ಜೀವನಶೈಲಿಯ ಬ್ರಾಂಡ್‍ಗಳಲ್ಲಿ ಈ ಕೊಡುಗೆ ಲಭ್ಯ.

ಅನೇಕ ಪ್ರೋತ್ಸಾಹನಾ ಕಾರ್ಯಕ್ರಮಗಳು ನಡೆಯಲಿವೆ. ಅವುಗಳಲ್ಲಿ ಕೆಲವು ಇಂತಿವೆ : 12 ಗಂಟೆಗಳ ಸೇಲ್-ಇದು ಮಾಜಿದ್ ಅಲ್ ಫುತ್ತೇಮ್ ಮಾಲ್ಸ್ ನಲ್ಲಿ ಗ್ರಾಹಕರಿಗೆ ಶೇ.90ರಷ್ಟು ರಿಯಾಯಿತಿ ನೀಡುವ ಕಾರ್ಯಕ್ರಮವಾಗಿದೆ. ಇನ್ನು ಹಲವಾರು ಮಾಲ್‍ಗಳಲ್ಲಿ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಈ ಕೊಡುಗೆ ಡಿಸೆಂಬರ್ 26ರಂದು ಲಭ್ಯವಿರುತ್ತದೆ. ಎಂಎಎಫ್ ಮಾಲ್‍ಗಳಲ್ಲಿ ಖರೀದಿ ಮಾಡಿದವರಲ್ಲಿ 25 ವಿಜೇತರಿಗೆ ಎಇಡಿ 10,000 ವೋಚರ್ ಗಳು ಲಭಿಸಲಿವೆ.

ಎಲ್ಲೆಡೆಯ ಕಲೆ, ಮನರಂಜನೆ

ಎಲ್ಲೆಡೆಯ ಕಲೆ, ಮನರಂಜನೆ

ಸೌಕ್ ಹೆರಿಟೇಜ್‍ನಲ್ಲಿ ದುಬೈ ಕ್ರೀಕ್‍ನ 1.8 ಕಿಲೋಮೀಟರ್ ಉದ್ದಕ್ಕೂ ವಿಭಿನ್ನ ಸಂಸ್ಕೃತಿಗಳನ್ನು ಸಂದರ್ಶಕರು ಅನುಭವಿಸಬಹುದು. ಶಾಪಿಂಗ್, ಭೋಜನ ಅಲ್ಲದೆ, ಜಗತ್ತಿನ ಎಲ್ಲೆಡೆಯ ಕಲೆ, ಮನರಂಜನೆಯನ್ನು ಆನಂದಿಸಬಹುದು.

ಮಾರ್ಕೆಟ್ ಔಟ್‍ಸೈಡ್ ದಿ ಬಾಕ್ಸ್ ಕಾರ್ಯಕ್ರಮದಲ್ಲಿ(ಎಂಒಟಿಬಿ) ಸ್ಥಳೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಂಗೀತಗಾರರು ಮತ್ತು ಬ್ಯಾಂಡ್‍ಗಳು ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮ ಜನವರಿ 16, 2020ರಿಂದ ಫೆಬ್ರವರಿ 01, 2020ರವರೆಗೆ ನಡೆಯಲಿದೆ.

ರಾಹತ್ ಫಥೇ ಅಲಿಖಾನ್ ಸಂಗೀತ ಕಾರ್ಯಕ್ರಮ
 

ರಾಹತ್ ಫಥೇ ಅಲಿಖಾನ್ ಸಂಗೀತ ಕಾರ್ಯಕ್ರಮ

ಇಲ್ಲಿನ ಪ್ರಯೋಗಾತ್ಮಕ ಗೇಮ್‍ಝೋನ್‍ನಲ್ಲಿ ಮಕ್ಕಳಿಗೆ ಸಮರ್ಪಿತವಾದ ಕಿಡ್‍ಝೋನ್ ಇದ್ದು, ಆನಂದ ನೀಡುತ್ತದೆ. ಇದಲ್ಲದೆ, ಸಿಟಿ ವಾಕ್‍ನಲ್ಲಿನ ಕೋಕಾ-ಕೋಲಾ ಅರೇನಾದಲ್ಲಿ ಡಿಸೆಂಬರ್ 27ರಂದು ಪಾಕಿಸ್ತಾನದ ರಾಹತ್ ಫಥೇ ಅಲಿಖಾನ್ ಅವರ ಸಂಗೀತ ಕಾರ್ಯಕ್ರಮ ಜನವರಿ 10ರಂದು ಬ್ರಿಟಿಷ್ ಪಾಪ್‍ತಾರೆ ಎಲ್ಲೀ ಗೋಲ್ಡಿಂಗ್ ಅವರ ಪ್ರದರ್ಶನ ನೆಡೆಯಲಿದೆ.

ದುಬೈನ ಮೊದಲ ಹೋಲೊಗ್ರಾಮ್ ಕಾನ್ ಸರ್ಟ್ ಕಾರ್ಯಕ್ರಮ

ದುಬೈನ ಮೊದಲ ಹೋಲೊಗ್ರಾಮ್ ಕಾನ್ ಸರ್ಟ್ ಕಾರ್ಯಕ್ರಮ

ದುಬೈನ ಮೊದಲ ಹೋಲೊಗ್ರಾಮ್ ಕಾನ್ ಸರ್ಟ್ ಕಾರ್ಯಕ್ರಮ 20 ಸಂಗೀತಗಾರರೊಂದಿಗೆ ಡಿಸೆಂಬರ್ 26, 27ರಂದು ದುಬೈನ ಓಪೇರಾ ಗ್ರಾಂಡ್ ಥಿಯೇಟರ್ ನಲ್ಲಿ ನಡೆಯಲಿದೆ. ಜೊತೆಗೆ ಬುರ್ಜ್ ಪ್ಲಾಜಾ ಸೇರಿದಂತೆ ನಗರದ ವಿವಿಧಡೆಗಳಲ್ಲಿ ವರ್ಣಮಯ ಬಣ್ಣದ ದೀಪದ ಅಲಂಕಾರ ಅನನ್ಯವಾಗಿರಲಿದೆ. ದಿನಾಲೂ ವಿಶ್ವಮಟ್ಟದ ಬಾಣ ಬಿರುಸುಗಳ ಪ್ರದರ್ಶನ. ರಾತ್ರಿಯ ವೇಳೆ ಗಮನಸೆಳೆಯಲಿದೆ. ಡಿಎಸ್‍ಎಫ್ ಡೈನಿನ್ ಸ್ಪೆಷಲ್‍ಗಳಲ್ಲಿ ಫುಡ್ ಆ್ಯಪ್ ಡೊಮ್ಯಾಟೊ ಸಾವಿರಕ್ಕೂ ಹೆಚ್ಚಿನ ರೆಸ್ಟೋರೆಂಟ್‍ಗಳಲ್ಲಿ ಶೆ.25ರಿಂದ ಆರಂಭವಾಗುವಂತೆ ವಿಶೇಷ ರಿಯಾಯಿತಿ ಸಾದರಪಡಿಸುತ್ತಿದೆ.

ಡಿಎಸ್‍ಫ್ ಸ್ಕೈವಾರ್ಡ್ಸ್ ಮಿಲೆಯನೇರ್

ಡಿಎಸ್‍ಫ್ ಸ್ಕೈವಾರ್ಡ್ಸ್ ಮಿಲೆಯನೇರ್

ಇದಲ್ಲದೆ ಲಾಟರಿ ಯೋಜನೆಗಳು ಇಲ್ಲಿದ್ದು, ರಾಫೆಲ್‍ಗಳು ಮಿಲಿಯನೇರ್ ಗಳನ್ನು ಸೃಷ್ಟಿಸಲು ಮುಂದಾಗಿವೆ. 25 ಜನರಿಗೆ ಎಂಎಎಫ್ ಮಾಲ್‍ಗಳಿಂದ ಡಿಎಸ್‍ಎಫ್ ಶೇರ್ ಮಿಲಿಯನೇರ್ ಕೊಡುಗೆ ಇದ್ದು, ಪ್ರತಿ ವಿಜೇತರಿಗೆ 10,00000 ಷೇರ್ ಪಾಯಿಂಟ್‍ಗಳು ಲಭಿಸುತ್ತವೆ. ಡಿಎಸ್‍ಫ್ ಸ್ಕೈವಾರ್ಡ್ಸ್ ಮಿಲೆಯನೇರ್ ನಲ್ಲಿ ದುಬೈ ಮಾಲ್‍ನೊಂದಿಗೆ ಪಾಲುದಾರಿಕೆಯಲ್ಲಿ ನೂತನ ಪ್ರೋತ್ಸಾಹನಾ ಕಾರ್ಯಕ್ರಮವಿದ್ದು, ಐದು ಜನರಿಗೆ 10 ಲಕ್ಷ ಸ್ಕೈವಾರ್ಡ್ಸ್ ಮೈಲ್‍ಗಳನ್ನು ಗೆಲ್ಲುವ ಅವಕಾಶವಿರುತ್ತದೆ.

English summary

Dubai Shopping Festival Mega Sale 90 PC discount

Dubai Shopping Festival, Mega 12-hour sale in Dubai, get up to 90% discount, The 25th edition of Dubai Shopping Festival (DSF) will launch with an all-encompassing two-day Grand Opening event at Burj Park, Downtown Dubai on December 26 and 27.
Story first published: Tuesday, December 24, 2019, 16:09 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more