For Quick Alerts
ALLOW NOTIFICATIONS  
For Daily Alerts

ಅನ್‌ಲಾಕ್ 2.0: ಆರ್ಥಿಕ ಚೇತರಿಕೆಯ ಗುಟ್ಟು ಬಿಚ್ಚಿಟ್ಟ ಪ್ರಧಾನಿ ಮೋದಿ

|

ನವದೆಹಲಿ, ಜೂನ್ 16: ಕೊರೊನಾ ಲಾಕ್‌ಡೌನ್‌ ನ ತರುವಾಯ ಆರ್ಥಿಕ ಚೇತರಿಕೆಯ ಹಸಿರು ಚಿಗುರುಗಳು ಈಗ ಗೋಚರಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್-ಗವರ್ನರ್‌ಗಳೊಂದಿಗೆ ಮಂಗಳವಾರ ನಡೆದ ವಿಡಿಯೋ ಕಾನ್ಪರೆನ್ಸ್ ಸಂವಾದದಲ್ಲಿ ಮಾತನಾಡಿ, ಆರ್ಥಿಕ ಚೇತರಿಕೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಮೋದಿ 2.0 ಅಲ್ಲ, ಡೆಮೊನ್ 2.0 ಎಂದ ರಾಹುಲ್ ಗಾಂಧಿ

ಕಳೆದ ಕೆಲವು ವಾರಗಳಲ್ಲಿ ಹಲವಾರು ಕ್ರಮಗಳು ಆರ್ಥಿಕ ಚೇತರಿಕೆಗೆ ಕಾರಣವಾಗಿವೆ ಎಂದು ಪಿಎಂ ಮೋದಿ ಹೇಳಿದರು. ರಫ್ತು, ವಿದ್ಯುತ್ ಉತ್ಪಾದನೆ ಮತ್ತು ದ್ವಿಚಕ್ರ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆಯಂತಹ ಹಲವಾರು ಆರ್ಥಿಕ ಸೂಚಕಗಳನ್ನು ಮೋದಿ ಉಲ್ಲೇಖಿಸಿದ್ದಾರೆ.

ವಿದ್ಯುತ್ ಬಳಕೆ ಹೆಚ್ಚಾಗಲು ಪ್ರಾರಂಭಿಸಿದೆ
 

ವಿದ್ಯುತ್ ಬಳಕೆ ಹೆಚ್ಚಾಗಲು ಪ್ರಾರಂಭಿಸಿದೆ

ಇದೇ ವೇಳೆ ಕೊರೊನಾನವೈರಸ್ ಸಾಂಕ್ರಾಮಿಕ ವಿರುದ್ಧದ ಭಾರತದ ಹೋರಾಟವನ್ನು ಮೋದಿ ಶ್ಲಾಘಿಸಿದರು. ಇತರ ರಾಷ್ಟ್ರಗಳಿಗಿಂತ ಭಾರತ ಉತ್ತಮ ಪ್ರದರ್ಶನ ನೀಡಿದೆ ಎಂದರು. ಈ ಹಿಂದೆ ಕಡಿಮೆಯಾಗುತ್ತಿದ್ದ ವಿದ್ಯುತ್ ಬಳಕೆ ಈಗ ಹೆಚ್ಚಾಗಲು ಪ್ರಾರಂಭಿಸಿದೆ ಎಂದು ಮೋದಿ ಹೇಳಿದರು. ಕಳೆದ ವರ್ಷ ಮೇ ಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ರಸಗೊಬ್ಬರ ಮಾರಾಟ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.

ಈ ಸಲ ಮುಂಗಾರು ಬಿತ್ತನೆ 12-13% ಹೆಚ್ಚಳ

ಈ ಸಲ ಮುಂಗಾರು ಬಿತ್ತನೆ 12-13% ಹೆಚ್ಚಳ

ಈ ಬಾರಿ, ಮುಂಗಾರು ಬಿತ್ತನೆ ಹಿಂದಿನ ವರ್ಷಕ್ಕಿಂತ ಸುಮಾರು 12-13% ಹೆಚ್ಚಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಡಿಜಿಟಲ್ ಪಾವತಿ ಲಾಕ್‌ಡೌನ್‌ಗೆ ಮುಂಚೆಯೇ ಸ್ಥಾನವನ್ನು ತಲುಪಿದೆ. ಇದು ಮಾತ್ರವಲ್ಲ, ಮೇ ತಿಂಗಳಲ್ಲಿ ಟೋಲ್ ಸಂಗ್ರಹದ ಹೆಚ್ಚಳವು ಆರ್ಥಿಕ ಚಟುವಟಿಕೆಯ ಹೆಚ್ಚಳವನ್ನೂ ತೋರಿಸುತ್ತದೆ" ಎಂದು ಪ್ರಧಾನಿ ಹೇಳಿದರು.

ರಪ್ತು ವಲಯ ಚೇತರಿಸಿಕೊಳ್ಳುತ್ತಿದೆ

ರಪ್ತು ವಲಯ ಚೇತರಿಸಿಕೊಳ್ಳುತ್ತಿದೆ

ಸತತ 3 ತಿಂಗಳು ರಫ್ತು ಕಡಿಮೆಯಾದ ನಂತರ, ಜೂನ್‌ನಲ್ಲಿ ರಫ್ತು ಮತ್ತೆ ಏರಿದೆ. ಇವೆಲ್ಲವೂ ನಮ್ಮನ್ನು ಮುಂದೆ ಸಾಗಲು ಪ್ರೋತ್ಸಾಹಿಸುವ ಚಿಹ್ನೆಗಳು ಎಂದು ಮೋದಿ ಹೇಳಿದರು.

ಅನ್‌ಲಾಕ್ 2.0
 

ಅನ್‌ಲಾಕ್ 2.0

ಕೊರೊನಾಕ್ಕೆ ಜಗ್ಗದೇ ನಮ್ಮ ಆರ್ಥಿಕತೆಯು ಹೆಚ್ಚು ತೆರೆದುಕೊಳ್ಳುತ್ತದೆ. ನಮ್ಮ ಕಚೇರಿಗಳು ತೆರೆಯುತ್ತವೆ. ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ. ಸಾರಿಗೆ ತೆರೆದುಕೊಳ್ಳುತ್ತವೆ. ಆದ್ದರಿಂದ ಹೊಸ ಉದ್ಯೋಗಾವಕಾಶಗಳು ಸಿಗಲಿವೆ ಎಂದು ಪ್ರಧಾನಿ ಮೋದಿ ಅವರು ಅನ್‌ಲಾಕ್ 2.0 ಬಗ್ಗೆ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು.

English summary

Economy Will Take Boost In Unlock 2.0 Says PM Narendra Modi

Economy Will Take Boost In Unlock 2.0 Says PM Narendra Modi At Chief Ministers Video Conference.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more