For Quick Alerts
ALLOW NOTIFICATIONS  
For Daily Alerts

PMC Bank Scam: 100 ಕೋಟಿ ಮೌಲ್ಯದ 3 ಹೋಟೆಲ್ ಇ.ಡಿ.ಯಿಂದ ಮುಟ್ಟುಗೋಲು

|

ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಸೆಪ್ಟೆಂಬರ್ 18ರ ಶುಕ್ರವಾರದಂದು ತಾತ್ಕಾಲಿಕವಾಗಿ ನವದೆಹಲಿಯಲ್ಲಿ ನೂರು ಕೋಟಿ ರುಪಾಯಿ ಮೌಲ್ಯದ ಮೂರು ಹೋಟೆಲ್ ಗಳನ್ನು ಮುಟ್ಟುಗೋಲು ಹಾಕಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002 ಅಡಿಯಲ್ಲಿ ಈ ಕ್ರಮ ಜರುಗಿಸಿದೆ. ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ.

 

ನವದೆಹಲಿಯಲ್ಲಿನ ಹೋಟೆಲ್ ಕಾನ್ ಕ್ಲೇವ್ ಬೌಟಿಕ್, ಹೋಟೆಲ್ ಕಾನ್ ಕ್ಲೇವ್ ಕಂಫರ್ಟ್ ಹಾಗೂ ಕಾನ್ ಕ್ಲೇವ್ ಎಕ್ ಕ್ಯೂಟಿವ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲಿಬ್ರಾ ರಿಯಾಲ್ಟರ್ಸ್, ದೀವಾನ್ ರಿಯಾಲ್ಟರ್ಸ್, ರಾಕೇಶ್ ಕುಮಾರ್ ವಾಧ್ವಾನ್, ರೊಮಿ ಮೆಹ್ರಾ, ಲಿಬ್ರಾ ಹೋಟೆಲ್ಸ್ ಮತ್ತು ಅದರ ನಿರ್ದೇಶಕರಿಗೆ ಈ ಹೋಟೆಲ್ ಗಳು ಸೇರಿದ್ದು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಪಿಎಂಸಿ ಬ್ಯಾಂಕ್ ಮೇಲಿನ ನಿರ್ಬಂಧ 3 ತಿಂಗಳು ವಿಸ್ತರಣೆ: RBI

ತನಿಖೆ ಪ್ರಕಾರ, ಲಿಬ್ರಾ ರಿಯಾಲ್ಟರ್ಸ್ ಮತ್ತು ದೀವಾನ್ ರಿಯಾಲ್ಟರ್ಸ್ ನವರು ಪಿಎಂಸಿ ಬ್ಯಾಂಕ್ ನಿಂದ ವಂಚನೆ ಮಾಡಿ, ಸಾಲದ ರೂಪದಲ್ಲಿ 247 ಕೋಟಿ ರುಪಾಯಿ ಪಡೆದಿತ್ತು. ಎಚ್ ಡಿಐಎಲ್ ಸಮೂಹ ಪಡೆದಿದ್ದ 6117 ಕೋಟಿ ರುಪಾಯಿಯಲ್ಲಿ ಈ ಮೊತ್ತವೂ ಒಳಗೊಂಡಿದೆ ಎಂದು ಇ.ಡಿ. ಹೇಳಿದೆ.

PMC Bank Scam: 100 ಕೋಟಿ ಮೌಲ್ಯದ 3 ಹೋಟೆಲ್ ಇ.ಡಿ.ಯಿಂದ ಮುಟ್ಟುಗೋಲು

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಿಎಂಸಿ ಬ್ಯಾಂಕ್ ವಂಚನೆ ಬಯಲಿಗೆ ಬಂದಿತ್ತು. ಕೆಲವು ಖಾತೆಗಳನ್ನು ಸೃಷ್ಟಿ ಮಾಡಿ, ಆ ಮೂಲಕ ಅದಾಗಲೇ ದಿವಾಳಿ ಆಗಿದ್ದ ಎಚ್ ಡಿಐಎಲ್ ಗೆ 4335 ಕೋಟಿ ರುಪಾಯಿ ಸಾಲವನ್ನು ನೀಡಿ, ಮಾಹಿತಿಯನ್ನು ಮುಚ್ಚಿಟ್ಟಿದ್ದನ್ನು ಆರ್ ಬಿಐ ಕಂಡುಹಿಡಿದಿತ್ತು. ಆರ್ ಬಿಐ ಪ್ರಕಾರ, ಸಮಸ್ಯೆ ಇರುವ ನಲವತ್ನಾಲ್ಕು ಖಾತೆಯನ್ನು ಮುಚ್ಚಿಡಲಾಗಿತ್ತು.

ಎಚ್ ಡಿಐಎಲ್ ಪ್ರವರ್ತಕರಾದ ರಾಕೇಶ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು. ಈ ಹಗರಣದ ಬಗ್ಗೆ ಇ.ಡಿ. ಹಾಗೂ ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ.

English summary

ED Attached 100 Crore Worth Of 3 Hotels In PMC Scam Case

PMC Scam Case: Enforcement Directorate attaches 100 crore worth of 3 hotels in New Delhi on September 18, 2020.
Story first published: Friday, September 18, 2020, 19:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X