For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಮಾಯಾಬಜಾರ್: ಎಲಾನ್ ಮಸ್ಕ್ ಆಸ್ತಿ 6 ಗಂಟೇಲಿ 1,19,941 ಕೋಟಿ ಉಡೀಸ್

|

ಟೆಸ್ಲಾ ಕಂಪೆನಿ ಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್ ವೈಯಕ್ತಿಕ ಆಸ್ತಿ ಕೇವಲ ಆರು ಗಂಟೆಯಲ್ಲಿ 16 ಬಿಲಿಯನ್ ಅಮೆರಿಕನ್ ಡಾಲರ್ ಕರಗಿಹೋಯಿತು. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 1,19,941 ಕೋಟಿ.

 

ಈ ಮೊತ್ತದ ಬಗ್ಗೆ ಹೇಳಬೇಕೆಂದರೆ, ಭಾರತದಲ್ಲಿ ಟೈಟಾನ್, ಎಚ್ ಡಿಎಫ್ ಸಿ ಲೈಫ್ ಹಾಗೂ ಅಲ್ಟ್ರಾ ಟೆಕ್ ಸಿಮೆಂಟ್ ನಂಥ ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಕೂಡ ಇದಕ್ಕಿಂತ ಕಡಿಮೆ. ಭಾರತದಲ್ಲಿ 21 ಕಂಪೆನಿಗಳ ಮಾರುಕಟ್ಟೆ ಮೌಲ್ಯ ಮಾತ್ರ ಮಸ್ಕ್ ಕಳೆದುಕೊಂಡ ಒಂದು ದಿನದ ಆಸ್ತಿಗಿಂತ ಹೆಚ್ಚಿದೆ.

ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದ ಬೆಜೋಸ್, ನಷ್ಟದಲ್ಲಿ ಟ್ರಂಪ್

ಬ್ಲೂಮ್ ಬರ್ಗ್ ಶತಕೋಟ್ಯಧಿಪತಿಗಳ ಸೂಚ್ಯಂಕದ ಪಟ್ಟಿಯಲ್ಲಿ ಎಲಾನ್ ಮಸ್ಕ್ ಜಾರಿದರು. ಯು.ಎಸ್. ನಾಸ್ಡಾಕ್ ನಲ್ಲಿ ಟೆಸ್ಲಾ ಕಂಪೆನಿ ಷೇರು ಮಂಗಳವಾರದಂದು 21% ಇಳಿಕೆ ಕಂಡಿತು. ಎಸ್ ಅಂಡ್ ಪಿ 500 ಸೂಚ್ಯಂಕಕ್ಕೆ ಟೆಸ್ಲಾ ಕಂಪೆನಿಯನ್ನು ಸೇರ್ಪಡೆ ಮಾಡದಿರುವುದಕ್ಕೆ ಸಮಿತಿ ನಿರ್ಧಾರ ಕೈಗೊಂಡ ಏಕೈಕ ಕಾರಣಕ್ಕೆ ಒಂದೇ ದಿನದಲ್ಲಿ ಆ ಕಂಪೆನಿಯ ಇತಿಹಾಸದಲ್ಲೇ ಅತಿ ದೊಡ್ಡ ಒಂದು ದಿನದ ಇಳಿಕೆಯನ್ನು ಕಾಣಬೇಕಾಯಿತು.

ಒಂದೇ ದಿನದಲ್ಲಿ ಮಸ್ಕ್ ಆಸ್ತಿ 16.3 ಬಿಲಿಯನ್ USD ಕುಸಿಯಿತು

ಒಂದೇ ದಿನದಲ್ಲಿ ಮಸ್ಕ್ ಆಸ್ತಿ 16.3 ಬಿಲಿಯನ್ USD ಕುಸಿಯಿತು

ಕಂಪೆನಿಯ ಮಾರುಕಟ್ಟೆ ಮೌಲ್ಯ 8200 ಕೋಟಿ ಅಮೆರಿಕನ್ ಡಾಲರ್ ಕರಗಿಹೋಯಿತು. ಇನ್ನು ಈ ಕಂಪೆನಿಯಲ್ಲಿ 21% ಷೇರಿನ ಪಾಲು ಹೊಂದಿರುವ ಎಲಾನ್ ಮಸ್ಕ್ ಆಸ್ತಿ ಮೌಲ್ಯದಲ್ಲಿ 16.3 ಬಿಲಿಯನ್ ಡಾಲರ್ ಕುಸಿಯಿತು. ಇಷ್ಟು ಪ್ರಮಾಣದ ಕುಸಿತ ಕಂಡರೂ ಎಲಾನ್ ಮಸ್ಕ್ ಆಸ್ತಿ ಮೌಲ್ಯ 8220 ಕೋಟಿ ಅಮೆರಿಕನ್ ಡಾಲರ್ ಇದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಬೆಜೋಸ್ ಆಸ್ತಿ ಈ ವರ್ಷ 7110 ಕೋಟಿ ಡಾಲರ್ ಹೆಚ್ಚು

ಬೆಜೋಸ್ ಆಸ್ತಿ ಈ ವರ್ಷ 7110 ಕೋಟಿ ಡಾಲರ್ ಹೆಚ್ಚು

ಇದೊಂದೇ ವರ್ಷದಲ್ಲಿ ಮಸ್ಕ್ ಆಸ್ತಿ 5470 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಅವರಿಗಿಂತ ಮುಂದೆ ಇರುವವರು ಜೆಫ್ ಬೆಜೋಸ್. ಹೆಚ್ಚಾಗಿರುವ ಆಸ್ತಿ ಮೌಲ್ಯ 7110 ಕೋಟಿ ಅಮೆರಿಕನ್ ಡಾಲರ್ ಗಿಂತ ಸ್ವಲ್ಪ ಕಡಿಮೆ. ಮಂಗಳವಾರದಂದು ಅಮೆರಿಕದಲ್ಲಿ ತಂತ್ರಜ್ಞಾನ ಷೇರುಗಳಿಗೆ ಬಿದ್ದ ಹೊಡೆತದಲ್ಲಿ ಬೆಜೋಸ್ ಗೆ 7.94 ಬಿಲಿಯನ್ ಅಮೆರಿಕನ್ ಡಾಲರ್, ಮಾರ್ಕ್ ಝುಕರ್ ಬರ್ಗ್ ಆಸ್ತಿ 4.26 ಬಿಲಿಯನ್ ಅಮೆರಿಕನ್ ನಷ್ಟವಾಗಿದೆ.

ಮುಕೇಶ್ ಅಂಬಾನಿ ವಿಶ್ವದ ಏಳನೇ ಶ್ರೀಮಂತ
 

ಮುಕೇಶ್ ಅಂಬಾನಿ ವಿಶ್ವದ ಏಳನೇ ಶ್ರೀಮಂತ

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಆಸ್ತಿ ಮೌಲ್ಯ 8040 ಕೋಟಿ ಅಮೆರಿಕನ್ ಡಾಲರ್ ಇದ್ದು, ಬ್ಲೂಮ್ ಬರ್ಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಇದ್ದಾರೆ. ಈ ವರ್ಷದಲ್ಲಿ ಇಲ್ಲಿತ ತನಕ ಅಂಬಾನಿ ಆಸ್ತಿ 2170 ಕೋಟಿ ಡಾಲರ್ ಹೆಚ್ಚಳವಾಗಿದೆ. ಈ ವರ್ಷ ಅತಿ ದೊಡ್ಡ ನಷ್ಟ ಅನುಭವಿಸಿದ ಶ್ರೀಮಂತ ಬರ್ನಾರ್ಡ್ ಅರ್ನಾಲ್ಟ್. ಆತನ ಆಸ್ತಿ 1980 ಕೋಟಿ ಡಾಲರ್ ಕಡಿಮೆ ಆಗಿದೆ. ಆದರೂ ಆತ ಈಗಲೂ ವಿಶ್ವದ ನಾಲ್ಕನೇ ಶ್ರೀಮಂತ.

English summary

Elon Musk Lost 1.19 Lakh Crore Wealth In 6 Hours

Tesla founder and CEO Elon Musk lost 1.19 lakh crore wealth in 6 hours on Tuesday, September 8, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X