For Quick Alerts
ALLOW NOTIFICATIONS  
For Daily Alerts

7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್

|

ನವೆಂಬರ್ 21ರಂದು ಟೆಸ್ಲಾ ತನ್ನ ಪ್ರಪ್ರಥಮ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಿಡುಗಡೆ ಮಾಡಿತ್ತು. ಹೊಸ ಮಾದರಿ ಸೈಬರ್‌ಟ್ರಕ್ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 1.87 ಲಕ್ಷ ಆರ್ಡರ್ ಆಗಿದೆ ಎಂದು ಸ್ಪೇಸ್ ಎಕ್ಸ್ ಸಹ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದರು. ಇದೀಗ ಈ ನೂತನ ಟ್ರಕ್ ಮಾಡಲು ಸ್ಪೂರ್ತಿ ಏನು ಎಂಬುದನ್ನ ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.

ಟೆಸ್ಲಾ ಸೈಬರ್‌ಟ್ರಕ್ ಖರೀದಿಗೆ ಮುಗಿಬಿದ್ದ ಜನರು, 4 ದಿನದಲ್ಲಿ 1.87 ಲಕ್ಷ ಬುಕ್ಕಿಂಗ್

1989ರಲ್ಲಿ ನ್ಯೂಯಾರ್ಕ್‌ನ ಲಾಂಗ್‌ ಐಲ್ಯಾಂಡ್‌ನ ದಂಪತಿಗಳು ಶೇಖರಣಾ ಘಟಕದ(Storage Unit) ಹರಾಜಿನಲ್ಲಿ ಭಾಗವಹಿಸಿ 100 ಅಮೆರಿಕನ್ ಡಾಲರ್( ಭಾರತದ ರುಪಾಯಿಗಳಲ್ಲಿ 7,128) ನೀಡಿ ಶೇಖರಣಾ ಘಟಕ ಖರೀದಿಸಿದರು. ಆ ಘಟಕದೊಳಗೆ ಏನಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಹರಾಜಿನಲ್ಲಿ ಗೆದ್ದ ಬಳಿಕ ಘಟಕದೊಳಗೆ ಸ್ಪೋರ್ಟ್ಸ ಕಾರೊಂದು ಸಿಕ್ಕಿತು.

1977ರ ಜೇಮ್ಸ್ ಬಾಂಡ್ ಚಿತ್ರದಲ್ಲಿ ಬಳಸಲಾಗಿದ್ದ ಕಾರು
 

1977ರ ಜೇಮ್ಸ್ ಬಾಂಡ್ ಚಿತ್ರದಲ್ಲಿ ಬಳಸಲಾಗಿದ್ದ ಕಾರು

ಈ ಕಾರು 1977ರ ಜೇಮ್ಸ್ ಬಾಂಡ್ ಚಲನಚಿತ್ರ 'The Spy Who Loved Me'ಯಲ್ಲಿ ಬಳಸಲಾಗಿದ್ದ ಕಾರು. ಆ ಚಿತ್ರದಲ್ಲಿ 'ವೆಟ್ ನೆಲ್ಲಿ' ಎಂಬ ಹೆಸರಿನ ಈ ಕಾರನ್ನು ಜಲಾಂತರ್ಗಾಮಿ(Submarine) ನೌಕೆಯಾಗಿ ರೂಪಾಂತರಗೊಳ್ಳುವಂತೆ ಮತ್ತು ನೀರಿನ ಒಳಗಿದ್ದಾಗ ಕ್ಷಿಪಣಿಗಳನ್ನು ಹಾರಿಸುವಂತೆ ಬಿತ್ತರಿಸಲಾಗಿತ್ತು.

ಆದರೆ, ಶೇಖರಣಾ ಘಟಕ ಖರೀದಿಸಿದ್ದ ದಂಪತಿಗೆ ಈ ಕಾರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅವರು ಎಂದಿಗೂ ಬಾಂಡ್ ಚಿತ್ರಗಳನ್ನು ನೋಡಿರಲಿಲ್ಲ. ಆ ಕಾರನ್ನು ಸ್ವಲ್ಪ ರೆಡಿಮಾಡಿಸಿದ ಬಳಿಕ 2 ದಶಕದವರೆಗೂ ಆ ಕಾರನ್ನು ಸಾಂದರ್ಬಿಕ ಪ್ರದರ್ಶನಗಳಲ್ಲಿ ಮಾತ್ರ ಪ್ರದರ್ಶಿಸಿದ್ದರು.

2013ರಲ್ಲಿ 7 ಕೋಟಿ ರುಪಾಯಿಗೆ ಕಾರು ಹರಾಜು

2013ರಲ್ಲಿ 7 ಕೋಟಿ ರುಪಾಯಿಗೆ ಕಾರು ಹರಾಜು

ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರಿನ ಮಾಲೀಕರು ಅದನ್ನು 2013ರಲ್ಲಿ ಹರಾಜಿಗೆ ಇಟ್ಟರು. ಸಿಎನ್‌ಬಿಸಿ ವರದಿ ಪ್ರಕಾರ ರಹಸ್ಯ ಖರೀದಿದಾರರೊಬ್ಬರು ಆ ಕಾರಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 7 ಕೋಟಿ 12 ಲಕ್ಷದ 67 ಸಾವಿರ) ಕೊಟ್ಟು ಖರೀದಿಸಿದ್ದರು.

ಚಕ್ರಗಳು ಇಲ್ಲದ ಕಾರನ್ನು ಖರೀದಿಸಿದ್ದ ಎಲಾನ್ ಮಸ್ಕ್

ಚಕ್ರಗಳು ಇಲ್ಲದ ಕಾರನ್ನು ಖರೀದಿಸಿದ್ದ ಎಲಾನ್ ಮಸ್ಕ್

ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರಿಗೆ ಯಾವುದೇ ಚಕ್ರಗಳಿರಲಿಲ್ಲ. ನೆಲದ ಮೇಲೆ ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ರೆಕ್ಕೆಗಳನ್ನು ಹೊಂದಿದ್ದ ಆ ವಿಭಿನ್ನ ಕಾರನ್ನು 7 ಕೋಟಿ ರುಪಾಯಿಗೂ ಅಧಿಕ ಹಣ ಕೊಟ್ಟು ಖರೀದಿಸಿದವರು ಮತ್ಯಾರು ಅಲ್ಲ ಸ್ಪೇಸ್ ಎಕ್ಸ್‌ ಸಹ ಸಂಸ್ಥಾಪಕ ಎಲಾನ್ ಮಸ್ಕ್.

'' ನಾನು ಚಿಕ್ಕವನಾಗಿದ್ದಾಗ ಬಾಂಡ್ ಚಿತ್ರಗಳನ್ನು ನೋಡಲು ಆಸಕ್ತಿ ಹೊಂದಿದ್ದೆ, 'The Spy Who Loved Me' ಚಿತ್ರದಲ್ಲಿ ತೋರಿಸಿದ್ದ ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರಿನಲ್ಲಿ ಒಂದು ಬಟನ್ ಒತ್ತಿ ಕಾರನ್ನು ನೀರಿನಲ್ಲಿ ಜಲಾಂತರ್ಗಾಮಿ ನೌಕೆಯನ್ನಾಗಿ ಪರಿವರ್ತಿಸುವುದನ್ನು ನೋಡಿ ಸಾಕಷ್ಟು ಉತ್ಸುಕನಾಗಿದ್ದೆ'' ಎಂದು ಎಲಾನ್ ಮಸ್ಕ್ ಕಾರು ಖರೀದಿಸಿದ ಬಳಿಕ ಆಟೋ ಬ್ಲಾಗ್‌ವೊಂದಕ್ಕೆ ತಿಳಿಸಿದ್ದರು.

ಕಾರಿನ ವಾಸ್ತವ ತಿಳಿದು ನಿರಾಸೆಗೊಂಡಿದ್ದ ಎಲಾನ್ ಮಸ್ಕ್
 

ಕಾರಿನ ವಾಸ್ತವ ತಿಳಿದು ನಿರಾಸೆಗೊಂಡಿದ್ದ ಎಲಾನ್ ಮಸ್ಕ್

ಬಾಂಡ್ ಚಿತ್ರದಲ್ಲಿ ಬಳಸಲಾಗಿದ್ದ ಕಾರನ್ನು ಜಲಾಂತರ್ಗಾಮಿ ನೌಕೆಯಾಗಿ ಬದಲಾಯಿಸಬಹುದು ಎಂದುಕೊಂಡಿದ್ದ ಎಲಾನ್ ಮಸ್ಕ್ ಕಾರಿನ ವಾಸ್ತವತೆ ತಿಳಿದು ಭಾರೀ ನಿರಾಸೆಗೊಂಡರು. ಕಾರಣ ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರು ಚಿತ್ರದಲ್ಲಿ ತೋರಿಸಿರುವಂತೆ ಜಲಾಂತರ್ಗಾಮಿ ನೌಕೆಯನ್ನಾಗಿ ರೂಪಾಂತರಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿದುಬಂತು.

ಸೈಬರ್‌ಟ್ರಕ್ ರೆಡಿಮಾಡಲು ಇದೇ ಸ್ಫೂರ್ತಿ

ಸೈಬರ್‌ಟ್ರಕ್ ರೆಡಿಮಾಡಲು ಇದೇ ಸ್ಫೂರ್ತಿ

1977ರ ಲೋಟಸ್ ಎಸ್ಪ್ರೀಟ್ ಸ್ಪೋರ್ಟ್ಸ್ ಕಾರನ್ನು ಬಾಂಡ್ ಚಲನಚಿತ್ರದಂತೆ ಜಲಾಂತರ್ಗಾಮಿ ನೌಕೆಯನ್ನಾಗಿ ಬದಲಿಸಲು ಸಾಧ್ಯವಾಗಲಿಲ್ಲ. ಆದರೆ ಈ ಕಾರು ನನಗೆ ಸೈಬರ್‌ಟ್ರಕ್ ಮಾಡಲು ಸ್ಫೂರ್ತಿ ನೀಡಿತು ಎಂದಿದ್ದಾರೆ ಎಲಾನ್ ಮಸ್ಕ್. ಅಲ್ಲದೆ ಭವಿಷ್ಯದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಅಪ್‌ಗ್ರೇಡ್ ಮಾಡಲು ಮತ್ತು ಸಿನಿಮಾದಲ್ಲಿ ತೋರಿಸಿರುವಂತೆ ನೈಜವಾಗಿ ಕಾರನ್ನು ಪರಿವರ್ತಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

English summary

Elon Musk Pays 1 Million Dollar For 100 Dollar Car

Tesla recently launched cybertruck and created record . Now tesla chief has revealed what is influenced the design of Cybertruck.
Story first published: Saturday, December 7, 2019, 12:10 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more