For Quick Alerts
ALLOW NOTIFICATIONS  
For Daily Alerts

ಇಂಗ್ಲೆಂಡ್ ನಲ್ಲಿ ಇಂದಿನಿಂದ ಕಠಿಣ ಲಾಕ್ ಡೌನ್; ಮಾರ್ಚ್ ತನಕ ಇದೇ ಸ್ಥಿತಿ !

|

ಇಂಗ್ಲೆಂಡ್ ನಲ್ಲಿ ಮಂಗಳವಾರ (ಜನವರಿ 5, 2021) ಕಠಿಣ ಲಾಕ್ ಡೌನ್ ಹೇರಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರದ ಹಿರಿಯ ಸಚಿವರು ಹೇಳುವಂತೆ, ಮಾರ್ಚ್ ತನಕ ಲಾಕ್ ಡೌನ್ ಆಗಬಹುದು. ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ಸಂಜೆ ಘೋಷಣೆ ಮಾಡಿರುವಂತೆ, ಶಾಲೆಗಳು ಮುಚ್ಚಲಾಗಿದೆ ಮತ್ತು ಅಗತ್ಯಗಳಿಗೆ ಹೊರತುಪಡಿಸಿ ಮನೆಯಿಂದ ಹೊರ ಬಾರದಂತೆ ತಿಳಿಸಲಾಗಿದೆ.

 

ಸಂಪುಟ ಕಚೇರಿಯ ಸಚಿವರಾದ ಮೈಕೇಲ್ ಗೋವ್ ಸ್ಕೈನ್ಯೂಸ್ ಜತೆ ಮಂಗಳವಾರ ಬೆಳಗ್ಗೆ ಮಾತನಾಡಿ, ಆರು ವಾರಗಳ ಕಾಲ ಘೋಷಣೆ ಆಗಿರುವ ಲಾಕ್ ಡೌನ್ ಯಾವಾಗ ತೆರವಾಗಬಹುದು ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಇದು ಬಹಳ, ಬಹಳ ಕಷ್ಟದ ವಾರಗಳು ಎಂದು ಹೇಳಿದ್ದಾರೆ.

ಯು.ಕೆ. ವಿಮಾನಗಳ ತಾತ್ಕಾಲಿಕ ಅಮಾನತು ಜನವರಿ 7ರ ತನಕ ವಿಸ್ತರಣೆ

ಕ್ರಮಗಳನ್ನು ಫೆಬ್ರವರಿ 15ರಿಂದ ಪರಿಶೀಲಿಸಲಾಗುವುದು, ಆದರೆ ಸರ್ಕಾರದಿಂದ ನಿರ್ದಿಷ್ಟವಾಗಿ ಹೀಗೆ ಎಂದು ಮಿರ್ಬಂಧದ ವಿಚಾರದಲ್ಲಿ ಹೇಳಲು ಸಾಧ್ಯವಿಲ್ಲ. "ನಾವು ಮಾರ್ಚ್ ತಿಂಗಳಿಗೆ ಪ್ರವೇಶಿಸಿದ ಮೇಲೆ ಕೆಲವು ನಿರ್ಬಂಧಗಳನ್ನು ತೆರವು ಮಾಡುವುದಕ್ಕೆ ಸಾಧ್ಯವಾಗಬಹುದು, ಆದರೆ ಎಲ್ಲವೂ ಅಲ್ಲ," ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್ ನಲ್ಲಿ ಕಠಿಣ ಲಾಕ್ ಡೌನ್; ಮಾರ್ಚ್ ತನಕ ಇದೇ ಸ್ಥಿತಿ !

ಈ ಕ್ರಮಗಳು ಇಂಗ್ಲೆಂಡ್ ನಲ್ಲಿ ಮಂಗಳವಾರ ಬೆಳಗ್ಗೆಯಿಂದ ಆರಂಭವಾಗಿದೆ. ಬುಧವಾರ ಬೆಳಗ್ಗೆಯಿಂದ ಇವು ಕಾನೂನಾಗಿ ಬಿಡುತ್ತವೆ. ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ನಲ್ಲಿ ಕೂಡ ಶಾಲೆಯನ್ನು ಮುಚ್ಚುವುದು ಸೇರಿದಂತೆ ಕಠಿಣ ಲಾಕ್ ಡೌನ್ ತರಲಾಗಿದೆ.

ಯುನೈಟೆಡ್ ಕಿಂಗ್ ಡಮ್ ನಲ್ಲಿ ಸೋಮವಾರದಂದು ಒಟ್ಟು 58,784 ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಕಳೆದ ಏಳು ದಿನಕ್ಕೆ ಹೋಲಿಸಿದರೆ ಶೇಕಡಾ ಐವತ್ತರಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ ಬ್ರಿಟನ್ ನಲ್ಲಿ 27 ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, 75,431 ಮಂದಿ ಸಾವನ್ನಪ್ಪಿದ್ದಾರೆ.

English summary

England's Strict Lock Down From Today, Could Last Into March, Says Minister

Due to surge in Corona cases strict lock down from today in England. UK minister says, it could last into March.
Story first published: Tuesday, January 5, 2021, 15:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X