For Quick Alerts
ALLOW NOTIFICATIONS  
For Daily Alerts

ಇಪಿಎಫ್‌ಒಗೆ ಹೊಸದಾಗಿ 12.76 ಲಕ್ಷ ವಂತಿಗೆದಾರರು ಸೇರ್ಪಡೆ

|

2021ರ ಜೂನ್ 21ರಂದು ಪ್ರಕಟಿಸಿರುವ ತಾತ್ಕಾಲಿಕ ವೇತನಪಟ್ಟಿ ದತ್ತಾಂಶದ ಪ್ರಕಾರ, 2021ರ ಏಪ್ರಿಲ್ ನಲ್ಲಿ ಸುಮಾರು 12.76 ಲಕ್ಷ ಹೊಸ ವಂತಿಗೆದಾರರು ಇಪಿಎಫ್ ಒಗೆ ಸೇರ್ಪಡೆಯಾಗಿರುವುದು ಪ್ರಮುಖವಾಗಿ ಕಂಡುಬಂದಿದೆ.

 

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ನಡುವೆಯೂ, ಹಿಂದಿನ ತಿಂಗಳಿಗೆ ಹೋಲಿಸಿದರೆ ಒಟ್ಟು ಶೇ.13.73ರಷ್ಟು ವಂತಿಗೆದಾರರ ಹೆಚ್ಚಳ ದಾಖಲಾಗಿದೆ, ಅದರ ಹಿಂದಿನ ತಿಂಗಳಲ್ಲಿ 11.22 ಲಕ್ಷ ವಂತಿಗೆದಾರರು ವೇತನಪಟ್ಟಿಗೆ ಸೇರ್ಪಡೆಯಾಗಿದ್ದರು. ದತ್ತಾಂಶದ ಪ್ರಕಾರ 2021ರ ಏಪ್ರಿಲ್ ನಲ್ಲಿ ನಿರ್ಗಮಿಸುವವರ ಸಂಖ್ಯೆ 87,821ಕ್ಕೆ ಕುಸಿತವಾಗಿದೆ ಮತ್ತು 2021ರ ಮಾರ್ಚ್ ಗೆ ಹೋಲಿಸಿದರೆ 92,864 ವಂತಿಗೆದಾರರು ಹೆಚ್ಚಾಗಿದ್ದಾರೆ.

ತಿಂಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ 12.76 ಲಕ್ಷ ವಂತಿಗೆದಾರರ ಪೈಕಿ, 6.89 ಲಕ್ಷ ವಂತಿಗೆದಾರರು ಇದೇ ಮೊದಲ ಬಾರಿಗೆ ಇಪಿಎಫ್ ಒದ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಸುಮಾರು 5.86 ಲಕ್ಷ ವಂತಿಗೆದಾರರು ನಿರ್ಗಮಿಸಿದ್ದಾರೆ ಮತ್ತು ಅವರು ಉದ್ಯೋಗವನ್ನು ಬದಲಿಸಿ ಇಪಿಎಫ್ ಒ ಇರುವ ವ್ಯಾಪ್ತಿಗೆ ಬಂದು ಮರುಸೇರ್ಪಡೆಯಾಗಿದ್ದಾರೆ ಹಾಗೂ ಅವರು ಅಂತಿಮವಾಗಿ ತಮ್ಮ ಪಾವತಿ ಇತ್ಯರ್ಥ (ಕ್ಲೇಮ್ ಫೈನಲ್ ಸೆಟ್ಲಮೆಂಟ್ ) ಮಾಡಿಕೊಳ್ಳುವ ಬದಲು ತಮ್ಮ ಸದಸ್ಯತ್ವವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಇಪಿಎಫ್‌ಒಗೆ ಹೊಸದಾಗಿ 12.76 ಲಕ್ಷ ವಂತಿಗೆದಾರರು ಸೇರ್ಪಡೆ

ಪೇರೋಲ್ ದತ್ತಾಂಶದ ಪ್ರಕಾರ ವಯೋಮಾನವಾರು ಹೋಲಿಸಿದರೆ, 22ರಿಂದ 25 ವರ್ಷ ವಯೋಮಾನದವರು ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಅಂದರೆ ಸುಮಾರು 3.27 ಲಕ್ಷ ಮಂದಿ 2021ರ ಏಪ್ರಿಲ್ ನಲ್ಲಿ ಸೇರ್ಪಡೆಯಾಗಿದ್ದಾರೆ. ಆನಂತರ 29ವರ್ಷದಿಂದ 35 ವರ್ಷದೊಳಗಿನ 2.72 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 18ರಿಂದ 25 ವರ್ಷದ ವಯೋಮಾನದವರು ಸಾಮಾನ್ಯವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಮೊದಲ ಸಾರಿ ಬಂದಿವವರು, 2021ರ ಏಪ್ರಿಲ್ ನಲ್ಲಿ ಒಟ್ಟು ವಂತಿಗೆದಾರರ ಸೇರ್ಪಡೆಯಲ್ಲಿ ಅವರ ಪಾಲು ಶೇ.43.35ರಷ್ಟಿದೆ.

ರಾಜ್ಯವಾರು ಪೇ ರೋಲ್ ದತ್ತಾಂಶವನ್ನು ಹೋಲಿಸಿದರೆ, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಉದ್ದಿಮೆಗಳು ನೋಂದಣಿಯಾಗಿರುವುದು ಕಂಡು ಬಂದಿದೆ ಮತ್ತು ಸುಮಾರು ಅಂದಾಜು 7.58 ಲಕ್ಷ ಹೊಸ ವಂತಿಗೆದಾರರು ಈ ತಿಂಗಳಲ್ಲಿ ಸೇರ್ಪಡೆಯಾಗಿದ್ದಾರೆ, ಇದು ಒಟ್ಟು ವೇತನ ಪಟ್ಟಿಗೆ ಸೇರ್ಪಡೆಯಾಗಿರುವವರಲ್ಲಿ ಎಲ್ಲ ವಯೋಮಾನದವರ ಶೇ.59.41ರಷ್ಟು ಇದ್ದಾರೆ. ಈಶಾನ್ಯ ರಾಜ್ಯಗಳಲ್ಲಿ (ಎನ್ ಇ) ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಒಟ್ಟು ವಂತಿಗೆದಾರರ ಸೇರ್ಪಡೆ ಸರಾಸರಿಗಿಂತ ಹೆಚ್ಚಾಗಿದೆ.

 

ದತ್ತಾಂಶವನ್ನು ಲಿಂಗವಾರು ವಿಶ್ಲೇಷಿಸುವುದಾದರೆ, ತಿಂಗಳಲ್ಲಿ ಒಟ್ಟು ಸೇರ್ಪಡೆಯಾಗಿರುವ ವಂತಿಗೆದಾರರದಲ್ಲಿ ಮಹಿಳೆಯರ ನೋಂದಣಿ ಅಂದಾಜು ಶೇ.22 ರಷ್ಟಿದೆ. ತಿಂಗಳಿನಿಂದ ತಿಂಗಳಿಗೆ ವಿಶ್ಲೇಷಿಸಿದರೆ, ಮಾರ್ಚ್ 2021ರಲ್ಲಿ 2.42 ಲಕ್ಷ ಇದ್ದ ಮಹಿಳಾ ವಂತಿಗೆದಾರರ ಪ್ರಮಾಣ 2021ರ ಏಪ್ರಿಲ್ ನಲ್ಲಿ 2.81ಕ್ಕೆ ಹೆಚ್ಚಳವಾಗಿದ್ದು, ಏರಿಕೆ ಪ್ರವೃತ್ತಿ ಮುಂದುವರಿದಿದೆ. ಇದಲ್ಲದೆ, ಇದೇ ಮೊದಲ ಬಾರಿಗೆ ಇಪಿಎಫ್ ಒ ವ್ಯಾಪ್ತಿಗೆ ಸೇರ್ಪಡೆಯಾಗಿರುವವ ಮಹಿಳಾ ವಂತಿಗೆದಾರರ ಸಂಖ್ಯೆ 2021ರ ಮಾರ್ಚ್ ನಲ್ಲಿ 1.84 ಲಕ್ಷ ಒತ್ತು, 2021ರ ಏಪ್ರಿಲ್ ನಲ್ಲಿ 1.90 ಲಕ್ಷಕ್ಕೆ ಹೆಚ್ಚಳವಾಗಿದೆ.

ಕೈಗಾರಿಕಾವಾರು ವೇತನಪಟ್ಟಿ ದತ್ತಾಂಶ ವಿಶ್ಲೇಷಿಸಿದರೆ, ಏಪ್ರಿಲ್ ತಿಂಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಒಟ್ಟು ವಂತಿಗೆದಾರರ ಪೈಕಿ 'ಏಕ್ಸಪರ್ಟ್ ಸರ್ವೀಸಸ್' ವಿಭಾಗ ( ಮಾನವ ಸಂಪನ್ಮೂಲ ಸಂಸ್ಥೆಗಳು, ಖಾಸಗಿ ಭದ್ರತಾ ಸಂಸ್ಥೆಗಳು ಮತ್ತು ಸಣ್ಣ ಗುತ್ತಿಗೆದಾರರು ಇತ್ಯಾದಿ) ಗಳ ಪಾಲು ಶೇ.45ರಷ್ಟಿದೆ. ಇದಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕೈಗಾರಿಕೆಗಳು, ಬೀಡಿ, ಶಾಲೆ, ಬ್ಯಾಂಕ್ ಮತ್ತು ಉಕ್ಕು ಹಾಗೂ ಕಬ್ಬಿಣ ವಲಯಕ್ಕೆ ಸಂಬಂಧಿಸಿದ ಉದ್ದಿಮೆಗಳಲ್ಲಿ 2021ರ ಮಾರ್ಚ್ ತಿಂಗಳಿಗೆ ಹೋಲಿಸಿದರೆ 2021ರ ಏಪ್ರಿಲ್ ನಲ್ಲಿ ಹೆಚ್ಚಿನ ವಂತಿಗೆದಾರರು ಸೇರ್ಪಡೆಯಾಗಿರುವ ಬೆಳವಣಿಗೆ ಕಂಡು ಬಂದಿದೆ.

ಉದ್ಯೋಗಿಗಳ ಮಾಹಿತಿಯ ಕ್ರೂಢೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ, ಹಾಗಾಗಿ ವೇತನ ಪಟ್ಟಿ ದತ್ತಾಂಶ ತಾತ್ಕಾಲಿಕವಾಗಿರುತ್ತದೆ. ಹಿಂದಿನ ತಿಂಗಳ ದತ್ತಾಂಶ ಕೂಡ ಪರಿಷ್ಕರಣೆಗೊಳ್ಳುತ್ತದೆ. 2018ರ ಏಪ್ರಿಲ್ ನಿಂದೀಚೆಗೆ ಇಪಿಎಫ್ ಒ, 2017ರ ಸೆಪ್ಟಂಬರ್ ನಂತರದ ವ್ಯಾಪ್ತಿಯ ಪೇ ರೋಲ್ ದತ್ತಾಂಶವನ್ನು ಬಿಡುಗಡೆ ಮಾಡುತ್ತಿದೆ.

English summary

EPFO payroll data: 12.76 lakh net subscribers added during April, 2021

The provisional payroll data of EPFO published on 20th June, 2021 highlights that EPFO has added around 12.76 lakh net subscribers during April, 2021.
Story first published: Monday, June 21, 2021, 8:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X