For Quick Alerts
ALLOW NOTIFICATIONS  
For Daily Alerts

ಕಚ್ಚಾ ತೈಲ ಕೇಳೋರಿಲ್ಲ; ಭಾರತದಲ್ಲೇಕೆ ಪೆಟ್ರೋಲ್- ಡೀಸೆಲ್ ರೇಟ್ ಇಳಿದಿಲ್ಲ?

|

ಪೆಟ್ರೋಲ್- ಡೀಸೆಲ್ ಬೆಲೆ ಲೀಟರ್ ಗೆ ಇಷ್ಟು ಎಂದು ನಿರ್ಧಾರ ಆಗೋದು ಅತಿ ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎಷ್ಟಿದೆ ಎಂಬುದರ ಲೆಕ್ಕಾಚಾರದಲ್ಲಿ. ಇದರ ಜತೆಗೆ ಇಂಟರ್ ನ್ಯಾಷನಲ್ ಮಾರ್ಕೆಟ್ ನಲ್ಲಿ ತೈಲ ಖರೀದಿಗೆ ಹಣ ಪಾವತಿ ಮಾಡುವುದು ಡಾಲರ್ ನಲ್ಲಿ. ಆದ್ದರಿಂದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಎಷ್ಟಿದೆ ಎಂದು ಗಮನಿಸಲಾಗುತ್ತದೆ.

ಇದರ ಮೇಲೆ ಸರ್ಕಾರದ ಅಬಕಾರಿ ಸುಂಕ, ಆಯಾ ರಾಜ್ಯ ಸರ್ಕಾರಗಳ ವ್ಯಾಟ್, ಮಾರಾಟಗಾರರ ಕಮಿಷನ್, ಸೆಸ್ ಹಾಕಲಾಗುತ್ತದೆ. ಇನ್ನು ಕಚ್ಚಾ ತೈಲ ದರದ ಕಳೆದ ಹದಿನೈದು ದಿನಗಳ ಸರಾಸರಿ ಬೆಲೆ ಎಷ್ಟಿದೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸೊನ್ನೆಗಿಂತ ಕೆಳಗೆ ಇಳಿದಿದೆ. ಮಾರುವುದಕ್ಕೆ ಮಾರಾಟಗಾರರು ಸಿದ್ಧರಿದ್ದರೂ ಕೊಳ್ಳುವುದಕ್ಕೆ ಖರೀದಿದಾರರಿಲ್ಲ.

ಬೆಲೆ ನಿಗದಿಯಲ್ಲಿ ಕಚ್ಚಾ ತೈಲ ದರದ ಪಾಲು 40ರಷ್ಟು ಮಾತ್ರ
 

ಬೆಲೆ ನಿಗದಿಯಲ್ಲಿ ಕಚ್ಚಾ ತೈಲ ದರದ ಪಾಲು 40ರಷ್ಟು ಮಾತ್ರ

ಕಾರಣ ಏನೆಂದರೆ, ಕೊರೊನಾ ವ್ಯಾಪಿಸಿರುವುದರಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್ ಡೌನ್ ಘೋಷಣೆ ಆಗಿದೆ. ಜನ ಬಳಕೆ ವಾಹನ ಸಂಚಾರ ವಿರಳವಾಗಿದೆ. ಬಸ್ಸು, ಲಾರಿ (ಅಗತ್ಯಕ್ಕೆ ಹೊರತುಪಡಿಸಿ), ವಿಮಾನ ಸಂಚಾರ ಸಹ ಇಲ್ಲ. ಆ ಕಾರಣಕ್ಕೆ ಪೆಟ್ರೋಲ್- ಡೀಸೆಲ್ ಗೆ ಬೇಡಿಕೆ ಇಲ್ಲ. ಖರೀದಿ ಮಾಡಿದ ನಂತರ ಸಂಗ್ರಹ ಮಾಡುವುದು ಎಲ್ಲಿ ಎಂಬುದು ತಲೆನೋವಾಗಿದೆ. ಹಾಗಿದ್ದರೂ ಭಾರತದಲ್ಲಿ ಪೆಟ್ರೋಲ್ ದರ ಲೀಟರ್ ಗೆ 70ರ ಆಸುಪಾಸಿನಲ್ಲಿ ಹಾಗೂ ಡೀಸೆಲ್ 62ರ ಸಮೀಪ ಇದೆ. ದೇಶದಲ್ಲಿ ಪೆಟ್ರೋಲ್- ಡೀಸೆಲ್ ಯಾಕಿಷ್ಟು ಬೆಲೆ ಅಂತ ನಿಮ್ಮ ಪ್ರಶ್ನೆಯಾದರೆ, ಭಾರತದಲ್ಲಿ ಒಟ್ಟಾರೆ ಪೆಟ್ರೋಲ್- ಡೀಸೆಲ್ ದರ ನಿಗದಿ ಮಾಡುವುದರಲ್ಲಿ ಕಚ್ಚಾ ತೈಲ ದರದ ಪಾಲು ಶೇಕಡಾ 40ರಷ್ಟು ಮಾತ್ರ ಎಂಬುದನ್ನು ತಿಳಿದುಕೊಳ್ಳಿ.

ಲೀಟರ್ ಗೆ ರು. 27.96ಕ್ಕೆ ದೊರೆಯುತ್ತದೆ

ಲೀಟರ್ ಗೆ ರು. 27.96ಕ್ಕೆ ದೊರೆಯುತ್ತದೆ

ಭಾರತವು ಖರೀದಿ ಮಾಡುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬುಧವಾರದಂದು ಬ್ಯಾರೆಲ್ ಗೆ $ 16.54ರಂತೆ ವಹಿವಾಟು ನಡೆಸುತ್ತಿದೆ. ಮಂಗಳವಾರದಂದು ಪ್ರತಿ ಬ್ಯಾರೆಲ್ ಗೆ $ 24 ರಂತೆ ವಹಿವಾಟು ನಡೆಸುತ್ತಿತ್ತು. ಈಗ ಪೆಟ್ರೋಲ್ ಚಿಲ್ಲರೆ ಮಾರಾಟ ಬೆಲೆ ಲೀಟರ್ ಗೆ ರು. 69.59 ಅಂತಾದರೆ, ಕಚ್ಚಾ ತೈಲ ಲೀಟರ್ ಗೆ ರು. 27.96ಕ್ಕೆ ದೊರೆಯುತ್ತದೆ. ಉಳಿದ ಮೊತ್ತವು ಸರ್ಕಾರ ವಿಧಿಸುವ ತೆರಿಗೆ, ಸುಂಕ, ವ್ಯಾಟ್, ಮಾರಾಟಗಾರರ ಕಮಿಷನ್. ಈ ಮಾಹಿತಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತೆರೆದಿಡುತ್ತದೆ. ಈಗ ನೆಲಕಚ್ಚಿರುವ ಬೆಲೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಪೆಟ್ರೋಲ್- ಡೀಸೆಲ್ ದರವನ್ನು ನಿಗದಿ ಮಾಡಿಲ್ಲ. ಅದರಲ್ಲೂ ಲಾಕ್ ಡೌನ್ ಅವಧಿಯಲ್ಲಿ ಬಳಕೆ ಪ್ರಮಾಣವೇ ಕುಸಿದುಹೋಗಿದೆ. ಇದರಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ಹೊಡೆತ ಬೀಳುತ್ತದೆ. ಅದೇ ಕಾರಣದಿಂದ ಬೆಲೆ ಕುಸಿತದ ಅನುಕೂಲ ಪಡೆದಿರುವ ಸರ್ಕಾರ ತೈಲದ ಮೇಲೆ ಹೆಚ್ಚು ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಆ ಮೂಲಕ ಸಂಗ್ರಹವಾದ ಮೊತ್ತವನ್ನು ನಷ್ಟ ಸರಿತೂಗಿಸಲು ಬಳಸಲಾಗುತ್ತದೆ ಎನ್ನುತ್ತಾರೆ ತಜ್ಞರು.

ಎಷ್ಟೆಲ್ಲ ತೆರಿಗೆ, ಸುಂಕ ಹಾಕಲಾಗಿದೆ?
 

ಎಷ್ಟೆಲ್ಲ ತೆರಿಗೆ, ಸುಂಕ ಹಾಕಲಾಗಿದೆ?

ಕಳೆದ ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಲೀಟರ್ ಗೆ ತಲಾ 3 ರುಪಾಯಿ ಅಬಕಾರಿ ಸುಂಕ ಹಾಕಲಾಯಿತು. ಜತೆಗೆ ವಿಶೇಷ ಅಬಕಾರಿ ಸುಂಕವನ್ನು ಪೆಟ್ರೋಲ್ ಮೇಲೆ 2ರಿಂದ 8 ರುಪಾಯಿಗೆ ಹಾಗೂ ಡೀಸೆಲ್ 4 ರುಪಾಯಿ ಏರಿಸಲಾಯಿತು. ಹೆಚ್ಚುವರಿಯಾಗಿ ರಸ್ತೆ ಸೆಸ್ ಪೆಟ್ರೋಲ್- ಡೀಸೆಲ್ ಮೇಲೆ ತಲಾ 1 ರುಪಾಯಿ ಹೆಚ್ಚಿಸಿ, 10 ರುಪಾಯಿ ಮಾಡಲಾಯಿತು. ಕಚ್ಚಾ ತೈಲ ಬೆಲೆ ಇಳಿಕೆ ಲಾಭ ಪಡೆಯುವುದಕ್ಕೆ ಸರ್ಕಾರ ಅದೆಷ್ಟೇ ಪ್ರಯತ್ನಿಸುತ್ತಿದ್ದರೂ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಆಗುತ್ತಿಲ್ಲ. 2020-21ಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಮೀಸಲಿಟ್ಟಿರುವ ಸಬ್ಸಿಡಿ ಮೊತ್ತ 41,000 ಕೋಟಿ ಅಂದಾಜು ಮಾಡಿದೆ. ಪ್ರಮುಖ ಸಬ್ಸಿಡಿಯ ಸಣ್ಣ ಭಾಗ ಇದು. ಆದ್ದರಿಂದ ಇದರಲ್ಲಿ ಯಾವುದೇ ಉಳಿತಾಯ ಆದರೂ ತೆರಿಗೆ ಆದಾಯದಲ್ಲಿ ನಷ್ಟವನ್ನು ತಂದೊಡ್ಡುತ್ತದೆ.

ತೈಲ ಮಾರ್ಕೆಟಿಂಗ್ ಕಂಪೆನಿಗಳು ಹೀಗೆ

ತೈಲ ಮಾರ್ಕೆಟಿಂಗ್ ಕಂಪೆನಿಗಳು ಹೀಗೆ

ದೇಶದಲ್ಲಿ ಕಠಿಣ ಲಾಕ್ ಡೌನ್ ಇರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಈ ಕಾರಣಕ್ಕೆ ಪೆಟ್ರೋಲ್- ಡೀಸೆಲ್ ಬೇಡಿಕೆ ನೆಲ ಕಚ್ಚಿದೆ. ಇದರಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ವಿಪರೀತ ನಷ್ಟವಾಗಿದೆ. ಆ ನಷ್ಟವನ್ನು ತುಂಬಿಕೊಳ್ಳಬೇಕು ಅನ್ನೋ ಕಾರಣಕ್ಕೆ ತೈಲ ಬೆಲೆ ಇಳಿಕೆಯ ಅನುಕೂಲವನ್ನು ಚಿಲ್ಲರೆ ಮಾರಾಟಗಾರರಿಗೆ ದೊರಕಿಸುತ್ತಿಲ್ಲ. ಕಚ್ಚಾ ತೈಲ ಬೆಲೆ ಇಳಿಕೆಯ ಲಾಭವನ್ನು ತಾವು ತೆಗೆದುಕೊಳ್ಳಲು ಕಂಪೆನಿಗಳು ತೀರ್ಮಾನ ಮಾಡಿವೆ. ಮೊದಲೇ ಹೇಳಿದಂತೆ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಎಷ್ಟಿದೆ ಎಂಬುದು ಸೇರಿದಂತೆ ವಿವಿಧ ಅಂಶಗಳು ಒಳಗೊಂಡಿವೆ. ಅವು ಸಹ ಪೆಟ್ರೋಲ್- ಡೀಸೆಲ್ ಚಿಲ್ಲರೆ ಮಾರಾಟದ ದರದ ಮೇಲೆ ಪರಿಣಾಮ ಬೀರುತ್ತವೆ.

English summary

Even Crude Oil Price Crash, Why Petrol, Diesel Price Not Falling?

After crude oil price crashed below $ 0, why petrol and diesel price not falling?
Story first published: Wednesday, April 22, 2020, 17:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more