For Quick Alerts
ALLOW NOTIFICATIONS  
For Daily Alerts

ಜಗತ್ತಿನ ಅತಿ ಪುರಾತನ ವ್ಯಾಪಾರದಿಂದ ಎಲ್ಲವೂ ಇಂದು ಆನ್ಲೈನ್ !

By ರಂಗಸ್ವಾಮಿ ಮೂಕನಹಳ್ಳಿ
|

ಜಗತ್ತಿನ ಅತ್ಯಂತ ಹಳೆಯ ವ್ಯಾಪಾರಗಳಲ್ಲಿ ಒಂದಾದ 'ವೇಶ್ಯಾವಾಟಿಕೆ 'ಕೂಡ ಕೋವಿಡ್ ನಿಂದ ಮಕಾಡೆ ಮಲಗಿದೆ ಎಂದರೆ ಮತ್ಯಾವ ವ್ಯಾಪಾರ ವೃದ್ಧಿ ಕಾಣುತ್ತಿದೆ. ಯಾವುದೇ ವ್ಯಾಪಾರ ಆದ್ರೂ ಕನಿಷ್ಠ ತನ್ನ ಹಿಂದಿನ ವಹಿವಾಟು ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಮನುಷ್ಯನ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ಹಣ್ಣು ತರಕಾರಿ ಮತ್ತಿತರ ಆಹಾರ ಸಾಮಗ್ರಿ ಬಿಟ್ಟರೆ ಲಾಭದಾಯಕ ಎನ್ನಿಸಿಕೊಂಡಿರುವುದು ಇತ್ತೀಚಿಗೆ ಟೆಕ್ನಾಲಜಿ ಮೇಲೆ ನಿರ್ಮಿಸಿದ ಹೊಸ ವ್ಯಾಪಾರಗಳು.

 

ಜಗತ್ತಿನ ಜನರನ್ನ ಪೂರ್ಣವಾಗಿ ಆನ್ಲೈನ್ ಗೆ ತರಿಸುವುದು ಅದೂ ಇಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು. ಜಗತ್ತಿನ ಜನರ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ. ಜನರನ್ನ ಭಾಷೆ-ಧರ್ಮದ ಹೆಸರಿನಲ್ಲಿ ಬಹಳಷ್ಟು ದಿನ ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುವುದರ ಅರಿವಿರುವ ಈ ಜನ ಕಳೆದ ಒಂದೂವರೆ ದಶಕದಿಂದ ಇಂತಹ ಒಂದು ಹುನ್ನಾರ ನಡೆಸುತ್ತಿದ್ದರೆ? ಎನ್ನುವ ಅನುಮಾನ ಬರುತ್ತದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಬಿಲ್ ಗೇಟ್ಸ್ ಕಳೆದ ಒಂದೂವರೆ ದಶಕದಿಂದ ಹೀಗಾಗಬಹದು ಎನ್ನುವ ಒಂದು ಸಂದೇಶವನ್ನ ತಮ್ಮ ಮಾತುಗಳಲ್ಲಿ ನೀಡುತ್ತಲೆ ಬಂದಿದ್ದರು.

ತಮ್ಮ ಮೂಲ ಕ್ಷೇತ್ರವಾದ ಟೆಕ್ನಾಲಜಿಯಿಂದ ಅವರು ಫಾರ್ಮ ಇಂಡಸ್ಟ್ರಿ ಕಡೆಗೆ ತಿರುಗಿದ್ದಾರೆ. ಇವರು ಫಾರ್ಮ ಕಂಪನಿಯ ಲ್ಯಾಬ್ ಗಳಿಗೆ ಸಾವಿರಾರು ಕೋಟಿ ಹಣವನ್ನ ಹೂಡಿಕೆ ಮಾಡಿದ್ದಾರೆ. ಇದು ಕೇವಲ ಇವರೊಬ್ಬರೇ ಅಥವಾ ಇವತ್ತಿನ ಲಾಭಕ್ಕಾಗಿ ಮಾಡಿದಂತೆ ಕಾಣುತ್ತಿಲ್ಲ. ಇದರ ಹಿಂದೆ ಹತ್ತಾರು ಕಾರಣಗಳಿವೆ. ಜನರ ಮೇಲಿನ ಹಿಡಿತ ಅವುಗಳಲ್ಲಿ ಪ್ರಮುಖವಾಗಿದೆ.

ಜಗತ್ತಿನ ಅತಿ ಪುರಾತನ ವ್ಯಾಪಾರದಿಂದ ಎಲ್ಲವೂ ಇಂದು ಆನ್ಲೈನ್ !

ಇನ್ನು ಜಗತ್ತಿನಾದ್ಯಂತ ಆನ್ಲೈನ್ ಶಿಕ್ಷಣ ಸಂಸ್ಥೆಗಳು ಅಥವಾ ರಿಮೋಟ್ ಲರ್ನಿಂಗ್ ವಲಯದಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆಗಳು ಸಹ ಇಂದಿನ ಸಮಯದಲ್ಲಿ ಲಾಭವನ್ನ ತಮ್ಮ ಲೆಕ್ಕಕ್ಕೆ ಬರೆದುಕೊಳ್ಳುತ್ತಿವೆ. ಆದರೂ ಮುಂದಿನ ಒಂದೆರೆಡು ವರ್ಷ ಅನಿಶ್ಚಿತತೆಯಂತೂ ಇದರ ಜೊತೆ ಜೊತೆಗೆ ನೆರಳಿನಂತೆ ಹಿಂಬಾಲಿಸಲಿದೆ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದಿರುವ ಸತ್ಯ.ಇದನ್ನ ಅರಿತು ಹೆದರದೆ ಭದ್ರವಾದ ಹೆಜ್ಜೆಯನ್ನ ಇಡಬೇಕಿದೆ.

 

ತಂತ್ರಜ್ಞಾನದ ಬಳಕೆ, ಇಂಟರ್ನೆಟ್ ಸೇವೆ ಮತ್ತು ಟೆಲಿಕಾಂ ವಲಯಗಳು ಇದಕ್ಕೆ ಆನೆ ಬಲವನ್ನ ನೀಡಿವೆ. ಸಹಜವಾಗಿ ಇದರ ಸುತ್ತಮುತ್ತವಿರುವ ವಲಯಗಳಿಗೆ ಕೋವಿಡ್ ಕಾರ್ಮೋಡ ಕವಿದಿಲ್ಲ. ಈ ವರ್ಷದ ಮೊದಲ ತ್ರೈಮಾಸಿಕ ಹಣಕಾಸು ಪತ್ರ ಇಂತಹ ಅನೇಕ ವಲಯಗಳಲ್ಲಿ ಕುಸಿತ ಕಂಡಿಲ್ಲ. ಕೆಲವು ಮೊದಲಿನ ಓಟವನ್ನ ಕಾಯ್ದುಕೊಂಡರೆ ಕೆಲವೊಂದು ಸಂಸ್ಥೆಗಳು ಲಾಭಾಂಶದಲ್ಲಿ ಹೆಚ್ಚಳವನ್ನ ದಾಖಲು ಮಾಡುತ್ತಿವೆ. ಸಮಯ ಮತ್ತು ಸನ್ನಿವೇಶಕ್ಕೆ ಯಾರು ಬೇಗ ಹೊಂದಿಕೊಳ್ಳುತ್ತಾರೆ ಅವರು ಮಾರುಕಟ್ಟೆ ಅಧಿಪತ್ಯ ಸಾಧಿಸುತ್ತಾರೆ ಎನ್ನುವ ಹೊಸ ನಿಯಮವನ್ನ ಸಾರುತ್ತಿದೆ.

ವಿಡಿಯೋ ಕಾನ್ಫರೆನ್ಸಿಂಗ್, ವಿಡಿಯೋ ಗೇಮಿಂಗ್ ಮತ್ತು ಎಂಟರ್‌ಟೈನ್‌ಮೆಂಟ್ ಜೊತೆಗೆ ರಿಮೋಟ್ ಲರ್ನಿಂಗ್ ನಂತಹ ಹಲವಾರು ಕ್ಷೇತ್ರಗಳು ಉತ್ತಮ ಬೇಡಿಕೆಯನ್ನ ವೃದ್ಧಿಸಿಕೊಂಡಿವೆ. ಕೊರೋನ ಸೃಷ್ಟಿಯಾಗುವುದಕ್ಕೆ ಮುಂಚೆಯೇ ಅಸ್ತಿತ್ವದಲ್ಲಿದ್ದ ವಿಡಿಯೋ ಕಾನ್ಫರೆನ್ಸಿಂಗ್, ವಿಡಿಯೋ ಗೇಮಿಂಗ್ ನಂತಹ ಉದ್ದಿಮೆಗಳು ಈ ಸಮಯದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಕೋವಿಡ್ ನಂತರ ಮೈಕ್ರೋಸಾಫ್ಟ್ ಬಳಕೆ 40 ಪ್ರತಿಶತ ಹೆಚ್ಚಾಗಿದೆ. ವಿಡಿಯೋ ಕಾಲ್ ಮಾಡುವುದಕ್ಕೆ ಫೇಸ್‌ಬುಕ್ ಮೆಸೆಂಜೆರ್ ಅಥವಾ ವಾಟ್ಸಪ್ ಬಳಸುವುದು ದುಪ್ಪಟ್ಟಾಗಿದೆ ಎನ್ನುತ್ತದೆ ಅಂಕಿ-ಅಂಶ. ಆಪಲ್ ಸಂಸ್ಥೆ ಕೂಡ ಈ ಓಟದಲ್ಲಿ ಹಿಂದೆ ಬಿದ್ದಿಲ್ಲ.

ಈ ವೈರಸ್ ಬಂದು ಬದಲಾಯಿಸಿತು ಎನ್ನುವುದಕ್ಕಿಂತ, ಆಗಲೇ ಮಗ್ಗುಲು ಬದಲಾಯಿಸಲು ತಯಾರಿ ನಡೆಸಿದ್ದ ಈ ಕ್ಷೇತ್ರಕ್ಕೆ ಕೋವಿಡ್ ಪರಿಸ್ಥಿತಿ ಹೆಚ್ಚಿನ ವೇಗವನ್ನ ಒದಗಿಸಿತು ಎನ್ನಬಹುದು. ಸಿನಿಮಾ ಎನ್ನುವುದು ಸೀಮಿತ ಕ್ಯಾನ್ವಾಸ್ ಎನ್ನುವುದನ್ನ ಮನಗಂಡು ಅನೇಕರು ಆಗಲೇ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದರು. ಕೊರೋನ ಇಂತಹ ಬದಲಾವಣೆಗೆ ವೇಗ ಮತ್ತು ಸರಿಯಾದ ದಿಕ್ಕನ್ನ ಕೊಟ್ಟಿದೆ. ವೆಬ್ ಸಿರೀಸ್ ಗಳಿಗೆ ಈಗ ನಲವತ್ತು, ಐವತ್ತು ಕೋಟಿ ಬಂಡವಾಳ ಸುರಿಯುತ್ತಾರೆ ಎಂದರೆ ಬದಲಾವಣೆ ಯಾವ ಮಟ್ಟಿಗೆ ಆಗಿರಬಹುದು ಎನ್ನುವ ಅಂದಾಜು ಸಿಕ್ಕೀತು. ಇದರ ಜೊತೆಗೆ ಸಿನಿಮಾವನ್ನ ಕೂಡ ಈಗ ಮಾಲ್ ನ ಮಲ್ಟಿಪ್ಲೆಕ್ಸ್ ನಲ್ಲಿ ಅಥವಾ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡದೆ ನೇರವಾಗಿ ಒಟಿಟಿ ಮೂಲಕ ಪರದೆಯ ಮೇಲೆ ಬಿಡುಗಡೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಇಂದಿಗೆ ಜಾಗತಿಕ ಮಟ್ಟದಲ್ಲಿ ಶಿಕ್ಷಣದಿಂದ ಹಿಡಿದು ಕ್ಯಾಸಿನೊವರೆಗೆ ಎಲ್ಲವೂ ಆನ್ಲೈನ್ ಎನ್ನುವ ಮಟ್ಟಕ್ಕೆ ಬಂದಿದೆ.ಸದ್ದಿಲ್ಲದೇ ಜಗತ್ತು ಮಗ್ಗುಲು ಬದಲಾಯಿಸಿದೆ.

English summary

Everything from the world's oldest business today is online

Everything from the world's oldest business today is online. Know more.
Story first published: Tuesday, September 14, 2021, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X