For Quick Alerts
ALLOW NOTIFICATIONS  
For Daily Alerts

ಡಿಸೆಂಬರ್‌ನಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ಟೋಲ್ ಕಟ್ಟಿ

|

ಹೆದ್ದಾರಿಗಳ ಟೋಲ್‌ಗಳಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಮತ್ತು ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ಫಾಸ್ಟ್‌ಟ್ಯಾಗ್‌ ಅನ್ನು ಡಿಸೆಂಬರ್ 1 ರಿಂದ ಕಡ್ಡಾಯ ಮಾಡಲಾಗುತ್ತಿದ್ದು, ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ಟೋಲ್ ದರ ಪಾವತಿಸಬೇಕಾಗಿದೆ.

 

2019 ಡಿಸೆಂಬರ್ 1 ರಿಂದ ಖಾಸಗಿ ಮತ್ತು ವಾಣಿಜ್ಯ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ ಫಾಸ್ಟ್‌ಟ್ಯಾಗ್‌ಗಳಿಲ್ಲದ ವಾಹನಗಳು ಟೋಲ್ ಗೇಟ್‌ನಲ್ಲಿ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

ಈಗಾಗಲೇ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಟೋಲ್ ಸ್ವೀಕರಿಸಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವಾಹನ ಮಾಲೀಕರು ವಾಹನದ ಮುಂಭಾಗದ ಕನ್ನಡಿಯಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲು ಸೂಚನೆ ನೀಡಿದೆ.

ಫಾಸ್ಟ್‌ಟ್ಯಾಗ್ ಎಂದರೇನು?

ಫಾಸ್ಟ್‌ಟ್ಯಾಗ್ ಎಂದರೇನು?

ಫಾಸ್ಟ್‌ಟ್ಯಾಗ್‌ಗಳು ಟೋಲ್ ಸಂಗ್ರಹಕ್ಕಾಗಿ ಪ್ರಿಪೇಯ್ಡ್ ಮೂಲಕ ರಿಚಾರ್ಜ್ ಮಾಡಬಹುದಾದ ಟ್ಯಾಗ್‌ಗಳಾಗಿವೆ. ನೀವು ಟೋಲ್ ಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದಲ್ಲದೆ ಸ್ವಯಂಚಾಲಿತ ಪಾವತಿ ಕಡಿತವನ್ನು ಇದು ಅನುಮತಿಸುತ್ತದೆ.

ಫಾಸ್ಟ್‌ಟ್ಯಾಗ್ ಸಹಾಯದಿಂದ, ಟೋಲ್ ಶುಲ್ಕ ಪಾವತಿಸಲು ನಿಮ್ಮ ವಾಹನವನ್ನು ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸಬೇಕಾಗಿಲ್ಲ. ವಾಹನವು ಟೋಲ್ ಗೇಟ್‌ ದಾಟಿದ ಬಳಿಕ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾದ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಅಥವಾ ಪ್ರಿಪೇಯ್ಡ್ ವ್ಯಾಲೆಟ್‌ನಿಂದ ಟೋಲ್ ಶುಲ್ಕ ಕಡಿತಗೊಳಿಸಲಾಗುತ್ತದೆ. ಶುಲ್ಕ

ಈ ಫಾಸ್ಟ್‌ಟ್ಯಾಗ್ ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಯಾವುದೇ ಮುಕ್ತಾಯ ದಿನಾಂಕವಿಲ್ಲ. ಅಂದರೆ, ತಾಂತ್ರಿಕವಾಗಿ ಹಾಳಾಗುವವರೆಗೂ ಬಳಸಬಹುದು.

ಫಾಸ್ಟ್‌ಟ್ಯಾಗ್ ಖರೀದಿ ಹೇಗೆ?

ಫಾಸ್ಟ್‌ಟ್ಯಾಗ್ ಖರೀದಿ ಹೇಗೆ?

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳು ಮತ್ತು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಪಾಯಿಂಟ್ ಆಫ್ ಸೇಲ್ (POS) ನಂತಹ ವಿವಿಧ ಚಾನೆಲ್ ಮೂಲಕ 22 ಪ್ರಮಾಣೀಕೃತ ಬ್ಯಾಂಕುಗಳು ಫಾಸ್ಟ್‌ಟ್ಯಾಗ್‌ ನೀಡುತ್ತವೆ. ಅಮೆಜಾನ್‌ನಂತಹ ಇ-ಕಾಮರ್ಸ್ ವಿಭಾಗದಲ್ಲಿಯು ಅವು ಲಭ್ಯವಿದೆ. ಫಾಸ್ಟ್‌ಟ್ಯಾಗ್ ಖರೀದಿಸಿದ ನಂತರ, ಅದನ್ನು ಸಕ್ರಿಯವಾಗಿಸಲು ನೀವು ಟೋಲ್ ಪ್ಲಾಜಾದಲ್ಲಿ ಕ್ರಿಯಾತ್ಮಕಗೊಳಿಸಬೇಕಿದೆ.

ಫಾಸ್ಟ್‌ಟ್ಯಾಗ್ ಬಳಕೆ ಹೇಗೆ?
 

ಫಾಸ್ಟ್‌ಟ್ಯಾಗ್ ಬಳಕೆ ಹೇಗೆ?

ಫಾಸ್ಟ್‌ ಟ್ಯಾಗ್ ಸಕ್ರಿಯಗೊಳಿಸಲು ಎರಡು ವಿಧಾನಗಳಿವೆ ಒಂದು ಸ್ವಯಂ ಸಕ್ರಿಯಗೊಳಿಸಬಹುದು. ಮತ್ತೊಂದು ಪ್ರಮಾಣೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವುದರ ಮೂಲಕ. ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಮೈ ಫಾಸ್ಟ್‌ಟ್ಯಾಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಆ್ಯಪಲ್ ಮೊಬೈಲ್ ಆಗಿದ್ದರೆ ಆ್ಯಪಲ್ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿ. ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಫಾಸ್ಟ್‌ಟ್ಯಾಗ್‌ ಮೊಬೈಲ್ ಆ್ಯಪ್‌ಗೆ ಲಿಂಕ್ ಮಾಡಿ. ಆ ಮೂಲಕ ಹಣ ಪಾವತಿಸಬಹುದು.

ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತ ಪ್ರಿಪೇಯ್ಡ್ ಸೌಲಭ್ಯವು, ಈ ಫಾಸ್ಟ್‌ಟ್ಯಾಗ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಅಲ್ಲಿ ನೀವು ಹಣವನ್ನು ಅಪ್‌ಲೋಡ್‌ ಮಾಡುವ ಮೂಲಕ ಟೋಲ್‌ಗಳಲ್ಲಿ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸುವ ಬದಲು ಪ್ರಿಪೇಯ್ಡ್ ವ್ಯಾಲೆಟ್‌ನಿಂದ ಕಡಿತಗೊಳಿಸಬಹುದು.

ಪ್ರಮಾಣೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವ ಮೂಲಕ ಸಕ್ರಿಯಗೊಳಿಸಬಹುದು

ಪ್ರಮಾಣೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವ ಮೂಲಕ ಸಕ್ರಿಯಗೊಳಿಸಬಹುದು

ನೀವು ನಿಮ್ಮ ಹತ್ತಿರದ ಪ್ರಮಾಣೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವ ಮೂಲಕವೂ ಫಾಸ್ಟ್‌ಟ್ಯಾಗ್ ಖರೀದಿಸಬಹುದು. ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯೊಂದಿಗೆ ಫಾಸ್ಟ್‌ಟ್ಯಾಗ್ ಲಿಂಕ್ ಮಾಡಬಹುದು.

English summary

Fastag Mandatory For All Vehicles From Dec 1

Road Transport and Highways Minister Nitin Gadkari has announced that FASTags will become mandatory for all vehicles, private and commercial, from December 1, 2019.
Story first published: Wednesday, November 20, 2019, 19:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X