For Quick Alerts
ALLOW NOTIFICATIONS  
For Daily Alerts

ಫಾಸ್ಟ್‌ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ

|

ಫಾಸ್ಟ್‌ಟ್ಯಾಗ್‌ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಶುಕ್ರವಾರ (ಫೆ. 26) ಸುಮಾರು 104 ಕೋಟಿ ರೂ. ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.

ಫೆಬ್ರವರಿ 16, 2021 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಬಳಕೆದಾರರ ಶುಲ್ಕವನ್ನು ಕಡ್ಡಾಯಗೊಳಿಸಿದ ನಂತರ, ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ.

ಫಾಸ್ಟ್‌ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ

"ಈ ವಾರದಲ್ಲಿ ಟೋಲ್ ಸಂಗ್ರಹವು ಪ್ರತಿದಿನ 100 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. 25.02.2021 ರಂದು, ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್ ಸಂಗ್ರಹವು 64.5 ಲಕ್ಷಕ್ಕೂ ಹೆಚ್ಚು ವಹಿವಾಟುಗಳೊಂದಿಗೆ 103.94 ಕೋಟಿ ರೂ.ಗಳ ಗರಿಷ್ಠ ಮೊತ್ತವನ್ನು ತಲುಪಿದೆ" ಎಂದು ಎನ್ಎಚ್ಎಐ ಹೇಳಿಕೆಯಲ್ಲಿ ತಿಳಿಸಿದೆ.

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಶೇಕಡಾ 20 ರಷ್ಟು ಮತ್ತು ಫಾಸ್ಟ್‌ಟ್ಯಾಗ್‌ ಮೂಲಕ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವ ವಿಷಯದಲ್ಲಿ ಶೇಕಡಾ 27 ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ.

ಕಳೆದ ಎರಡು ವಾರದಲ್ಲಿ 20 ಲಕ್ಷ ಹೊಸ ಫಾಸ್ಟ್‌ಟ್ಯಾಗ್ ಬಳಕೆದಾರರು ಸೇರಿದ್ದು, ಒಟ್ಟಾರೆ ಫಾಸ್ಟ್‌ಟ್ಯಾಗ್ ವಿತರಣೆಯ ಸಂಖ್ಯೆಯು 2.8 ಕೋಟಿ ರೂಪಾಯಿಗೆ ತಲುಪಿದೆ ಎಂದು ಎನ್‌ಎಚ್‌ಎಐ ಹೇಳಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ಅನುಷ್ಠಾನವು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ, ಇದರ ಪರಿಣಾಮವಾಗಿ ಬಳಕೆದಾರರ ಅನುಭವ ಹೆಚ್ಚಾಗುತ್ತದೆ ಎಂದಿದೆ.

English summary

FasTag Toll Collection Touches Record Rs 104 Crore Per Day: NHAI

National Highways Authority of India (NHAI) on Friday said its daily toll collection through FASTag has reached about Rs 104 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X