For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ವಿದೇಶೀ ಹೂಡಿಕೆದಾರರ ಷೇರಿನ ಪಾಲು ಗರಿಷ್ಠ ಮಟ್ಟಕ್ಕೆ

|

ವಿದೇಶೀ ಹೂಡಿಕೆದಾರರು ಸೆಪ್ಟೆಂಬರ್ 30, 2020ರ ಕೊನೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯಲ್ಲಿ 27.2% ಪಾಲನ್ನು ಹೊಂದಿದ್ದಾರೆ. ಷೇರಿನ ಪಾಲು ದಾಖಲೆ ಪ್ರಮಾಣಕ್ಕೆ ಏರಿಕೆ ಆಗಿದೆ ಎಂದು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಕಂಪೆನಿ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಷೇರು ಪ್ರಮಾಣದ ಬಗ್ಗೆ ಗುರುವಾರ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

 

ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಪೋರ್ಟ್ ಫೋಲಿಯೋ ಹೂಡಿಕೆದಾರರು 165.8 ಕೋಟಿ ಷೇರುಗಳು ಅಥವಾ 25.2 ಪರ್ಸೆಂಟ್ ಷೇರಿನ ಪಾಲು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಜೂನ್ 30ರ ತ್ರೈಮಾಸಿಕದಲ್ಲಿ ವಿದೇಶೀ ಹೂಡಿಕೆದಾರರು 163.07 ಕೋಟಿ ಷೇರು ಅಥವಾ 24.72 ಪರ್ಸೆಂಟ್ ಹೊಂದಿದ್ದರು.

ಜಿಯೋ- ಕ್ವಾಲ್ ಕಾಮ್ ನಿಂದ ಯಶಸ್ವಿ 5G ಪರೀಕ್ಷೆ; 1 Gbps ವೇಗದಲ್ಲಿ ಡೇಟಾ ಟ್ರಾನ್ಸ್ ಫರ್

ಇದನ್ನು ಹೊರತುಪಡಿಸಿ ಸೆಪ್ಟೆಂಬರ್ 30, 2020ಕ್ಕೆ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಬೈಯರ್ಸ್ (QIB) 2.05 ಪರ್ಸೆಂಟ್ ಹೊಂದಿದ್ದಾರೆ. ಆ ಮೂಲಕ ಒಟ್ಟು ಷೇರಿನ ಪಾಲು 27.2% ಮುಟ್ಟಿದೆ. ಜೆಪಿ ಮೋರ್ಗನ್ ಈ ಬಗ್ಗೆ ಹೇಳಿದ್ದು, ರಿಲಯನ್ಸ್ ನಲ್ಲಿ ಎಫ್ ಐಐ ಮಾಲೀಕತ್ವವು ಹೊಸ ಎತ್ತರಕ್ಕೆ ಏರಿದೆ ಮತ್ತು 27.2 ಪರ್ಸೆಂಟ್ ಷೇರಿನ ಪಾಲು ತಲುಪಿದೆ. ಕಳೆದ ತ್ರೈಮಾಸಿಕಕ್ಕಿಂತ ಈ ಸಲ 60 bps ಹೆಚ್ಚಾಗಿದೆ ಎಂದಿದೆ.

ರಿಲಯನ್ಸ್ ಇಂಡಸ್ಟ್ರೀಸ್: ವಿದೇಶೀ ಹೂಡಿಕೆದಾರರ ಷೇರಿನ ಪಾಲು ಗರಿಷ್ಠ

ಭಾರತದ ಎನರ್ಜಿ ವಲಯದ ಕಂಪೆನಿಗಳ ಪೈಕಿ ಕಳೆದ ಕೆಲವು ತ್ರೈಮಾಸಿಕದಿಂದ ಎಫ್ ಐಐ ಪಾಲನ್ನು ಹೆಚ್ಚಳ ಮಾಡುತ್ತಾ ಬಂದಿರುವ ಏಕೈಕ ಕಂಪೆನಿ ರಿಲಯನ್ಸ್. ಇನ್ನು ತೈಲ ಮಾರ್ಕೆಟಿಂಗ್ ಹಾಗೂ ಗ್ಯಾಸ್ ಕಂಪೆನಿಗಳಲ್ಲಿ ಕಡಿಮೆ ಮಾಡುತ್ತಾ ಬಂದಿವೆ. ಇನ್ನು ಪ್ರವರ್ತಕರು ಕೂಡ ರಿಲಯನ್ಸ್ ನಲ್ಲಿ ಷೇರಿನ ಪಾಲನ್ನು 50.37 ಪರ್ಸೆಂಟ್ ನಿಂದ 50.49 ಪರ್ಸೆಂಟ್ ಗೆ ಹೆಚ್ಚಿಸಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರಿನ ಬೆಲೆ 2020ರ ಏಪ್ರಿಲ್ ನಿಂದ ಈಚೆಗೆ ದುಪ್ಪಟ್ಟಾಗಿದೆ.

English summary

FIIs hike stake in Reliance Industries to record 27.2 pc

Foreign Investors (FII) hike holding in Reliance Industries to record high on September 30, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X