For Quick Alerts
ALLOW NOTIFICATIONS  
For Daily Alerts

ದರ್ಶನ್ ಸಿನಿಮಾ ಸಂಗೊಳ್ಳಿ ರಾಯಣ್ಣ ನಿರ್ಮಾಪಕರ ಆಸ್ತಿ ವಶಕ್ಕೆ ಪಡೆದ ಇ.ಡಿ.

By ಅನಿಲ್ ಆಚಾರ್
|

ಆನಂದ ಅಪ್ಪುಗೋಳ ಅವರಿಗೆ ಸೇರಿದ 31.35 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ವಶಕ್ಕೆ ಪಡೆದಿದೆ ಎಂದು ಗುರುವಾರ ತಿಳಿಸಿದೆ. ಅಂದಹಾಗೆ ಈ ಆನಂದ ಅಪ್ಪುಗೋಳ ಯಾರು ಗೊತ್ತೆ? ದರ್ಶನ ನಾಯಕರಾಗಿ ಅಭಿನಯಿಸಿದ್ದ ಸಂಗೊಳ್ಳಿ ರಾಯಣ್ಣ ಸಿನಿಮಾದ ನಿರ್ಮಾಪಕ ಹಾಗೂ ಬೆಳಗಾವಿಯಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ.

 

ಆನಂದ ಅಪ್ಪುಗಳ ಅವರಿಗೆ ಸೇರಿದ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯ ಜಾಗ, ಬಿ.ಕೆ. ಬಾಳೇಕುಂದ್ರಿಯಲ್ಲಿ ಇರುವ ಮನೆ, ನೆಹರೂ ನಗರದಲ್ಲಿ ಇರುವ ಮನೆ, ಅಪ್ಪುಗೋಳ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ 2002 (PMLA) ಅಡಿಯಲ್ಲಿ ಆಸ್ತಿ ವಶಕ್ಕೆ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯವು ಟ್ವೀಟ್ ಮಾಡಿದೆ.

ದರ್ಶನ್ ಸಿನಿಮಾ ಸಂಗೊಳ್ಳಿ ರಾಯಣ್ಣ ನಿರ್ಮಾಪಕರ ಆಸ್ತಿ ವಶಕ್ಕೆ ಪಡೆದ ED

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ ತಿಂಗಳಿನಲ್ಲೇ ಬೆಳಗಾವಿಗೆ ಬಂದು ರಾಯಣ್ಣ ಸೊಸೈಟಿಗೆ ಸೇರಿದ ನಿವೇಶನ, ಆಸ್ತಿ ಮೊದಲಾದವುಗಳನ್ನು ಪರಿಶೀಲಿಸಿದ್ದರು. ಅಂದ ಹಾಗೆ, ಗ್ರಾಹಕರಿಂದ ಕೋಟ್ಯಂತರ ರುಪಾಯಿ ಹಣ ಠೇವಣಿಯಾಗಿ ಸಂಗ್ರಹಿಸಿ, ವಂಚಿಸಿರುವ ಆರೋಪ ಇದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಜಾರಿ ನಿರ್ದೇಶನಾಲಯವು ನಡೆಸುತ್ತಾ ಇದೆ.

English summary

Film Producer Anand Appugol Property, Bank Balance Attached By ED In Fraud Allegation Case

ED attaches under PMLA, immovable assets and balances in bank accounts totaling to Rs. 31.35 crores of Anand Balakrishna Appugol, Chairman of Krantiveer Sangolli Rayanna Co-operative Society, Belagavi and others in Co-operative Society fraud case.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X