For Quick Alerts
ALLOW NOTIFICATIONS  
For Daily Alerts

ದಶಕದಲ್ಲೇ ಮೊದಲ ಬಾರಿಗೆ GDP ದಾಟಿದ ಲಿಸ್ಟೆಡ್ ಕಂಪೆನಿ ಮಾರುಕಟ್ಟೆ ಬಂಡವಾಳ

|

ಭಾರತದ ಎಲ್ಲ ಲಿಸ್ಟೆಡ್ ಕಂಪೆನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಸೇರಿ ದೇಶದ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಅನ್ನು ದಶಕದಲ್ಲೇ ಮೊದಲ ಬಾರಿಗೆ ದಾಟಿದೆ. ಕೊನೆಯ ಬಾರಿಗೆ ಇದು 2007ರಲ್ಲಿ ಆಗಿತ್ತು. ಮಿಡ್ ಕ್ಯಾಪ್ ಟು ಜಿಡಿಪಿ ಪ್ರಮಾಣ 100.7 ಪರ್ಸೆಂಟ್ ಆಗಿತ್ತು.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (BSE) ಮಿಡ್ ಕ್ಯಾಪ್ ಟು ಜಿಡಿಪಿ ರೇಷಿಯೋ ಜನವರಿ 14ನೇ ತಾರೀಕು 197.7 ಲಕ್ಷ ಕೋಟಿ ರುಪಾಯಿ ಮುಟ್ಟಿದೆ. ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಪ್ರಕಾರ, 2020ರ ಡಿಸೆಂಬರ್ ಕೊನೆಗೆ ಭಾರತದ ನಾಮಿನಲ್ ಜಿಡಿಪಿ 190 ಲಕ್ಷ ಕೋಟಿ ರುಪಾಯಿ ಇತ್ತು.

ಪಾಸ್ ವರ್ಡ್ ಮರೆತ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.ಪಾಸ್ ವರ್ಡ್ ಮರೆತ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.

ಆದರೆ, ಈಗಲೂ ರೇಷಿಯೋ ಲೆಕ್ಕಾಚಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 149.4 ಪರ್ಸೆಂಟ್ ಗಿಂತ ಕಡಿಮೆಯೇ ಇದೆ. ಡಿಸೆಂಬರ್ 2007ರಲ್ಲಿ ಆ ಮಟ್ಟದಲ್ಲಿ ಇತ್ತು. 2020ರ ಡಿಸೆಂಬರ್ ನಲ್ಲಿ ರೇಷಿಯೋ 99%, ಕಳೆದ ವರ್ಷ ಮಾರ್ಚ್ ನಲ್ಲಿ 56% ಹಾಗೂ 2019ರ ಡಿಸೆಂಬರ್ ಕೊನೆಗೆ 78% ಇತ್ತು.

ದಶಕದಲ್ಲಿ ಮೊದಲ ಬಾರಿ GDP ದಾಟಿದ ಲಿಸ್ಟೆಡ್ ಕಂಪೆನಿ ಮಾರ್ಕೆಟ್ ಬಂಡವಾಳ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡುವ FY21ರ ಮುಂಚಿತವಾದ ಅಂದಾಜಿನ ಮೇಲೆ ಜಿಡಿಪಿ ಸಂಖ್ಯೆ ಆಧಾರವಾಗಿರುತ್ತದೆ. ಎನ್ ಎಸ್ ಒ ಅಂದಾಜು ಮಾದುವಂತೆ ಪ್ರಸಕ್ತ ವರ್ಷದಲ್ಲಿ ಜಿಡಿಪಿಯ ನಾಮಿನಲ್ ಜಿಡಿಪಿ 195 ಲಕ್ಷ ಕೋಟಿ ರುಪಾಯಿ ಆಗಬಹುದು. ಅದು ಸದ್ಯದ ಬಿಎಸ್ ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳಕ್ಕಿಂತಲೂ ಕಡಿಮೆ ಆಗುತ್ತದೆ.

2020ರ ಮಾರ್ಚ್ ನಿಂದ ಈಚೆಗೆ ಬಿಎಸ್ ಇ ಮಾರುಕಟ್ಟೆ ಬಂಡವಾಳವು ಶೇಕಡಾ 75ರಷ್ಟು ಏರಿಕೆ ಆಗಿದೆ. ಈ ಮಧ್ಯೆ ಜಿಡಿಪಿ ರೇಷಿಯೋ ನೂರು ಪರ್ಸೆಂಟ್ ಗಿಂತ ಹೆಚ್ಚಿರುವ ಅಭಿವೃದ್ಧಿಶೀಲ ಮಾರ್ಕೆಟ್ ಗಳ ಪಟ್ಟಿಯಲ್ಲಿ ಯುಎಸ್, ಯುಕೆ, ಜಪಾನ್, ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ ಇದೆ. ಇನ್ನು ಜರ್ಮನಿ, ಚೀನಾ, ಬ್ರೆಜಿಲ್ ಮತ್ತು ರಷ್ಯಾ ನೂರು ಪರ್ಸೆಂಟ್ ಗಿಂತ ಕಡಿಮೆ ಇದೆ.

ತಜ್ಞರು ಹೇಳುವಂತೆ, ಜಿಡಿಪಿಗೆ 100 ಪರ್ಸೆಂಟ್ ಮತ್ತು ಅದಕ್ಕಿಂತ ಹೆಚ್ಚಿನ ರೇಷಿಯೋ ಈಕ್ವಿಟಿ ಹೂಡಿಕೆದಾರರಿಗೆ ಬಹಳ ಅಪಾಯಕಾರಿ. ಆದ್ದರಿಂದ ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು.

English summary

First Time In Decade Listed Companies Market Capitalisation Crosses India's GDP

First time in decade, on January 14, 2021 market capitalisation of all listed companies crossed India's GDP.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X