For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ

|

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜುಲೈ ಮಧ್ಯಭಾಗದಲ್ಲಿ ಕೇಂದ್ರ ಸರ್ಕಾರ ವಿತ್ತೀಯ ಕೊರತೆಯು 3.2 ಲಕ್ಷ ಕೋಟಿ ರೂಪಾಯಿನಷ್ಟಿದೆ ಎಂದು ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.

 

ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇಂದ್ರದ ಸಗಟು ತೆರಿಗೆ ಆದಾಯವು 6.9 ಲಕ್ಷ ಕೋಟಿ ರೂಪಾಯಿ (ನಿವ್ವಳ 5.29 ಲಕ್ಷ ಕೋಟಿ ರೂ.) ಉತ್ತಮ ಆದಾಯ ತೆರಿಗೆ ಹಾಗೂ ಜಿಎಸ್​ಟಿ ಸಂಗ್ರಹದಿಂದ ಬಂದಿದೆ.

ಸರ್ಕಾರದ ಮಾಹಿತಿಯ ಪ್ರಕಾರ, 2021-22ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಂದರೆ ಏಪ್ರಿಲ್-ಜುಲೈನಲ್ಲಿ ಭಾರತದ ಹಣಕಾಸಿನ ಕೊರತೆಯು ರೂ 3.21 ಲಕ್ಷ ಕೋಟಿಯಷ್ಟಿತ್ತು ($ 43.98 ಬಿಲಿಯನ್). ಅಂದರೆ ಇಡೀ ವರ್ಷದ ಬಜೆಟ್ ಕೊರತೆಯ ಗುರಿಯು ಶೇಕಡಾ 21.3 ರಷ್ಟಿದೆ. ನಿವ್ವಳ ತೆರಿಗೆ ರಶೀದಿಗಳು (ತೆರಿಗೆ ಸಂಗ್ರಹ) ರೂ 5.21 ಲಕ್ಷ ಕೋಟಿಯಷ್ಟಿದ್ದು, ಒಟ್ಟು ವೆಚ್ಚವು ರೂ. 10.04 ಲಕ್ಷ ಕೋಟಿಯಷ್ಟಿದೆ ಎಂದು ಡೇಟಾ ತೋರಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 6.8 ರಷ್ಟು ವಿತ್ತೀಯ ಕೊರತೆಯನ್ನು ಸರ್ಕಾರ ಅಂದಾಜಿಸಿದೆ.

2020-21ರಲ್ಲಿ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡಾ 9.3 ರಷ್ಟಿತ್ತು, ಇದು ಹಣಕಾಸು ಸಚಿವಾಲಯದ ಪರಿಷ್ಕೃತ ಬಜೆಟ್ ಅಂದಾಜುಗಳಿಗಿಂತ (ಶೇ 9.5) ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ವಿತ್ತೀಯ ಕೊರತೆಯನ್ನು 15.07 ಲಕ್ಷ ಕೋಟಿ ರೂಪಾಯಿಗಳಷ್ಟು ಅಂದಾಜಿಸಲಾಗಿದೆ.

ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ

ಏಪ್ರಿಲ್-ಜುಲೈ ಅವಧಿಯಲ್ಲಿ ಸರ್ಕಾರದ ಒಟ್ಟು ಸ್ವೀಕೃತಿಗಳು 6,83,297 ಕೋಟಿಗಳಷ್ಟಿದ್ದು, ಇದು 2021-22 ರ ಶೇಕಡಾ 34.6 ರಷ್ಟಿದೆ. ಇದರಲ್ಲಿ 5,29,189 ಕೋಟಿ ತೆರಿಗೆ ಆದಾಯ, 1,39,960 ಕೋಟಿ ತೆರಿಗೆ ರಹಿತ ಆದಾಯ ಮತ್ತು 14,148 ಕೋಟಿ ಸಾಲ ರಹಿತ ಬಂಡವಾಳ ಸ್ವೀಕೃತಿಗಳು ಸೇರಿವೆ. ಸಾಲ ರಹಿತ ಬಂಡವಾಳದ ರಸೀದಿಗಳಲ್ಲಿ 5,777 ಕೋಟಿ ರೂಪಾಯಿಗಳ ಸಾಲ ಮರುಪಾವತಿ ಮತ್ತು 8,371 ಕೋಟಿ ಬಂಡವಾಳ ಹೂಡಿಕೆಯ ಆದಾಯ ಸೇರಿವೆ.

ಜುಲೈ 2021 ರವರೆಗೆ ಸುಮಾರು 1,65,064 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಗಳಿಗೆ ತೆರಿಗೆ ವರ್ಗಾವಣೆಯಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಸರ್ಕಾರದ ಒಟ್ಟು ಖರ್ಚು ರೂ. 10,04,440 ಕೋಟಿ (ಬಿಇ 2021-22 ರ, ಶೇಕಡಾ 28.8), ಅದರಲ್ಲಿ 8,76,012 ಕೋಟಿ ರೂಪಾಯಿ ಆದಾಯದ ಖಾತೆಯಲ್ಲಿ ಮತ್ತು 1,28,428 ಕೋಟಿ ರೂಪಾಯಿ ಬಂಡವಾಳ ಖಾತೆಯಲ್ಲಿತ್ತು.

 

ಅದೇ ಸಮಯದಲ್ಲಿ, ಒಟ್ಟು ಆದಾಯ ವೆಚ್ಚದಲ್ಲಿ, 2,25,817 ಕೋಟಿ ರೂಪಾಯಿಗಳನ್ನು ಬಡ್ಡಿ ಪಾವತಿಗೆ ಮತ್ತು 1,20,069 ಕೋಟಿಗಳನ್ನು ಪ್ರಮುಖ ಸಬ್ಸಿಡಿಗಳಿಗೆ ಖರ್ಚು ಮಾಡಲಾಗಿದೆ. ಇತ್ತೀಚೆಗೆ, ಸಂಸತ್ತಿನಲ್ಲಿ ಮಾಹಿತಿ ನೀಡುವಾಗ, ಕಳೆದ ಸಾಲಿನಲ್ಲಿ ಶೇಕಡಾ 60.5 (ತಾತ್ಕಾಲಿಕ) ದಿಂದ 2021-22 ರಲ್ಲಿ ಒಟ್ಟು ಸಾಲವು ಜಿಡಿಪಿಯ ಶೇಕಡಾವಾರು 61.7 ಪ್ರತಿಶತಕ್ಕೆ (ತಾತ್ಕಾಲಿಕ) ಹೆಚ್ಚಾಗುವ ಸಾಧ್ಯತೆಯನ್ನು ಸರ್ಕಾರ ವ್ಯಕ್ತಪಡಿಸಿತ್ತು. ಅದೇ ಸಮಯದಲ್ಲಿ, ಸಾರ್ವಜನಿಕ ಸಾಲವು ಪ್ರಸಕ್ತ ಹಣಕಾಸು ವರ್ಷದಲ್ಲಿ 54.2 ಪ್ರತಿಶತಕ್ಕೆ ಏರಿಕೆಯಾಗಲಿದೆ, ಇದು 2020-21ರಲ್ಲಿ 52 ಪ್ರತಿಶತವಾಗಿತ್ತು.

English summary

Fiscal Deficit For April To July Period Reaches 21.3 Percent

India's economy on the recovery path coupled with expenditure compression resulted in the Centre's Fiscal deficit narrowing to 21.3 per cent of the (BE) in the first four months of the current financial year.
Story first published: Tuesday, August 31, 2021, 22:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X