For Quick Alerts
ALLOW NOTIFICATIONS  
For Daily Alerts

2022-23ರಲ್ಲಿ ನಿವ್ವಳ ದೇಶೀಯ ಉತ್ಪನ್ನದ ಶೇಕಡಾ 6.4 ರಷ್ಟು ವಿತ್ತೀಯ ಕೊರತೆ

|

ನವದೆಹಲಿ, ಫೆಬ್ರವರಿ 1: 2022-23 ರಲ್ಲಿನ ವಿತ್ತೀಯ ಕೊರತೆಯು ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ)ದ ಶೇಕಡಾ 6.4 ರಷ್ಟಿದೆ ಎಂದು ಅಂದಾಜಿಸಲಾಗಿದೆ. 2025-26ರ ವೇಳೆಗೆ ವಿತ್ತೀಯ ಕೊರತೆಯ ಮಟ್ಟವನ್ನು ಶೇಕಡಾ 4.5 ಕ್ಕಿಂತ ಕಡಿಮೆಗೆ ತೆಗೆದುಕೊಂಡು ಹೋಗುವ ಅಪಾಯವಿತ್ತು. ಆದರೆ ಕಳೆದ ವರ್ಷ ಘೋಷಿಸಿದ ವಿತ್ತೀಯ ಬಲವರ್ಧನೆಯ ವಿಶಾಲ ಮಾರ್ಗದೊಂದಿಗೆ ಸ್ಥಿರವಾಗಿದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

 

ಸಂಸತ್ತಿನಲ್ಲಿ ಮಂಗಳವಾರ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವಾಗ ಈ ಕುರಿತು ಘೋಷಿಸಿದರು. ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ವಿತ್ತೀಯ ಕೊರತೆಯು ಬಜೆಟ್ ಅಂದಾಜುಗಳಲ್ಲಿ ಯೋಜಿತವಾಗಿರುವ ಶೇಕಡಾ 6.8ರ ಬದಲು ಜಿಡಿಪಿಯ ಶೇಕಡಾ 6.9ರಷ್ಟಿದೆ ಎಂದು ಅಂದಾಜಿಸಲಾಗಿದೆ.

ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ನಿರ್ಮಲಾ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ಇದಾಗಿದೆ.

2022-23ರಲ್ಲಿ ಜಿಡಿಪಿಯ ಶೇಕಡಾ 6.4 ರಷ್ಟು ವಿತ್ತೀಯ ಕೊರತೆಯ ಅಂದಾಜು

ವಿತ್ತೀಯ ಕೊರತೆ:

2022-23ರಲ್ಲಿ ವಿತ್ತೀಯ ಕೊರತೆಯ ಮಟ್ಟವನ್ನು ನಿಗದಿಪಡಿಸುವಾಗ, ಸಾರ್ವಜನಿಕ ಹೂಡಿಕೆಯ ಮೂಲಕ ಬೆಳವಣಿಗೆಯನ್ನು ಪೋಷಿಸುವ ಅಗತ್ಯತೆಯ ಬಗ್ಗೆ ಅವರು ಜಾಗೃತರಾಗಿದ್ದರು ಎಂದು ಹಣಕಾಸು ಸಚಿವರು ಹೇಳಿದರು. 2022-23ರ ಸರ್ಕಾರದ ವಿತ್ತೀಯ ಕೊರತೆಯು 16, 61,196 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. 2021-22ರ ಪರಿಷ್ಕೃತ ಅಂದಾಜುಗಳು ವಿತ್ತೀಯ ಕೊರತೆ 15, 91,089 ಕೋಟಿ ರೂಪಾಯಿ ಎಂದು ತೋರಿಸಿದ್ದು ಬಜೆಟ್ ಅಂದಾಜು 15, 06,812 ಕೋಟಿ ರೂಪಾಯಿ ಆಗಿತ್ತು.

2022-23ರಲ್ಲಿ ಜಿಡಿಪಿಯ ಶೇಕಡಾ 6.4 ರಷ್ಟು ವಿತ್ತೀಯ ಕೊರತೆಯ ಅಂದಾಜು

ಬಂಡವಾಳ ವೆಚ್ಚ:

ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ವೆಚ್ಚವನ್ನು ಪ್ರಸಕ್ತ ವರ್ಷದಲ್ಲಿ 5.54 ಲಕ್ಷ ಕೋಟಿ ರೂಪಾಯಿಗಳಿಂದ 2022-23ರಲ್ಲಿ 7.50 ಲಕ್ಷ ಕೋಟಿ ರೂಪಾಯಿಗಳಿಗೆ ಮತ್ತೊಮ್ಮೆ ಶೇಕಡಾ 35.4ರಷ್ಟು ತೀವ್ರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. 2019-20ರ ವೆಚ್ಚಕ್ಕಿಂತ 2.2 ಪಟ್ಟು ಹೆಚ್ಚಾಗಿದೆ. 2022-23ರಲ್ಲಿ ಈ ವೆಚ್ಚವು ಜಿಡಿಪಿಯ ಶೇಕಡಾ 2.9 ಆಗಿರುತ್ತದೆ.

 

ಬಂಡವಾಳ ವೆಚ್ಚವನ್ನು ಒಟ್ಟುಗೂಡಿಸಿ ರಾಜ್ಯಗಳಿಗೆ ಅನುದಾನದ ಮೂಲಕ ಬಂಡವಾಳ ಸ್ವತ್ತುಗಳ ರಚನೆಗೆ ಮಾಡಲಾದ ನಿಬಂಧನೆಯೊಂದಿಗೆ ಕೇಂದ್ರ ಸರ್ಕಾರದ 'ಪರಿಣಾಮಕಾರಿ ಬಂಡವಾಳ ವೆಚ್ಚ' 2022-23 ರಲ್ಲಿ 10.68 ಲಕ್ಷ ಕೋಟಿ ರೂಪಾಯಿಯಾಗಿದ್ದು, ಇದು ಜಿಡಿಪಿಯ ಶೇ. 4.1ರಷ್ಟು ಆಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

2022-23ರಲ್ಲಿ ಒಟ್ಟು ವೆಚ್ಚ 39.45 ಲಕ್ಷ ಕೋಟಿ ರೂಪಾಯಿ ಆಗಿದ್ದು, ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 22.84 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2021-22ರ ಬಜೆಟ್ ಅಂದಾಜುಗಳಲ್ಲಿ ಯೋಜಿತವಾದ ವೆಚ್ಚವು 34.83 ಲಕ್ಷ ಕೋಟಿ ರೂಪಾಯಿಗಳಾಗಿತ್ತು, ಪರಿಷ್ಕೃತ ಅಂದಾಜು 37.70 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ತಿಳಿಸಿದರು.

2022-23ರಲ್ಲಿ ಜಿಡಿಪಿಯ ಶೇಕಡಾ 6.4 ರಷ್ಟು ವಿತ್ತೀಯ ಕೊರತೆಯ ಅಂದಾಜು

ಮಾರುಕಟ್ಟೆ ಸಾಲ:

2022-23ರಲ್ಲಿ ಸರ್ಕಾರದ ಒಟ್ಟು ಮಾರುಕಟ್ಟೆ ಸಾಲ 11,58,719 ಕೋಟಿ ರೂಪಾಯಿ ಆಗಿದ್ದು. 2021-22 ರ ಪರಿಷ್ಕೃತ ಅಂದಾಜು 8,75,771 ಕೋಟಿ ರೂಪಾಯಿಗಳಾಗಿದ್ದು ಬಜೆಟ್ ಅಂದಾಜು 9,67,708 ಕೋಟಿ ರೂಪಾಯಿ ಆಗಿದೆ.

English summary

Fiscal Deficit Is Estimated to Be 6.4 Percent of Gross Domestic Product in 2022-23

Union Budget 2022: Fiscal deficit is estimated to be 6.4 percent of Gross Domestic Product in 2022-23.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X