For Quick Alerts
ALLOW NOTIFICATIONS  
For Daily Alerts

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021: ಅಕ್ಟೋಬರ್ 7ರಿಂದ ಪ್ರಾರಂಭ

|

ವರ್ಷಕ್ಕೊಮ್ಮೆ ಭರ್ಜರಿ ಆಫರ್‌ಗಳೊಂದಿಗೆ ಲಗ್ಗೆಯಿಡುವ ಇ-ಕಾಮರ್ಸ್ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌ 2021 ದಿನಾಂಕ ಘೋಷಣೆಯಾಗಿದೆ. ಸತತ 8ನೇ ವರ್ಷ ನಡೆಯಲಿರುವ ಈ ಬಾರಿಯ ಬಿಗ್ ಬಿಲಿಯನ್ ಡೇಸ್‌ ಅಕ್ಟೋಬರ್ 7ರಿಂದ ಅಕ್ಟೋಬರ್ 12ರವರೆಗೆ ನಡೆಯಲಿದೆ.

 

ಒಟ್ಟು ಆರು ದಿನಗಳ ಕಾಲ ನಡೆಯಲಿರುವ ಈ ವಿಶೇಷ ರಿಯಾಯಿತಿ ಮಾರಾಟ ಅವಧಿಯಲ್ಲಿ ಮಿಲಿಯನ್‌ಗಟ್ಟಲೆ ಗ್ರಾಹಕರು, ಮಾರಾಟಗಾರರು, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಪಾಲುದಾರರು ಭಾಗವಹಿಸಲಿದ್ದಾರೆ.

ಆಕ್ಸಿಸ್ ಬ್ಯಾಂಕ್ & ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಿಗೆ ಶೇ. 10ರಷ್ಟು ರಿಯಾಯಿತಿ

ಆಕ್ಸಿಸ್ ಬ್ಯಾಂಕ್ & ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಿಗೆ ಶೇ. 10ರಷ್ಟು ರಿಯಾಯಿತಿ

ಹೌದು, ಆಕ್ಸಿಸ್ ಬ್ಯಾಂಕ್ ಗ್ರಾಹಕರು ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಈ ಬಿಗ್ ಬಿಲಿಯನ್ ಡೇಸ್‌ನಲ್ಲಿ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಈ ಎರಡು ಬ್ಯಾಂಕ್‌ಗಳ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಶೇ. 10ರಷ್ಟು ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಪೇಟಿಎಂ ಮೂಲಕ ವಾಲೆಟ್ ಮತ್ತು ಯುಪಿಐ ವ್ಯಹಹಾರಗಳ ಮೂಲಕ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಸ್ವದೇಶಿ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ಅವಕಾಶ

ಸ್ವದೇಶಿ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ಅವಕಾಶ

ಬಿಬಿಡಿಯಲ್ಲಿ ಈ ಬಾರಿ ವಿದೇಶಿ ಉತ್ಪನ್ನಗಳ ಜೊತೆಗೆ ಸ್ವದೇಶಿ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ಮಾರಾಟದ ಅವಕಾಶವನ್ನ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಎರಡು ಮತ್ತು ನಂತರದ ಶ್ರೇಣಿಯ ನಗರದ ಮಾರಾಟಗಾರರು ಕೂಡ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ಈ ಬಿಗ್‌ ಸೇಲ್‌ನಲ್ಲಿ ಭಾಗಿಯಾಗಬಹುದು.

ಹಿದೆಂದಿಗಿಂತಲೂ ಉತ್ತಮ ಆಯ್ಕೆಗಳು
 

ಹಿದೆಂದಿಗಿಂತಲೂ ಉತ್ತಮ ಆಯ್ಕೆಗಳು

ಪ್ರತಿ ಬಾರಿ ಬಿಬಿಡಿ ಸೇಲ್ ಬಂದಾಗ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗುವುದು. ಈ ಬಾರಿಯು ಮೊಬೈಲ್, ಟಿವಿ, ಹೋಮ್ ಅಪ್ಲೈಯನ್ಸಸ್, ಫ್ಯಾಶನ್, ಕಿಚನ್ , ಫರ್ನೀಚರ್, ಗ್ರಾಸರಿ ಸೇರಿದಂತೆ ಹಲವು ವಿಭಾಗಗಳಲ್ಲಿ ಖರೀದಿಗೆ ಅಧಿಕ ಆಯ್ಕೆಗಳು ಗ್ರಾಹಕರಿಗೆ ಸಿಗಲಿದೆ.

ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳಾದ ಬಿಗ್‌ಬಿ ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ಮಟ್ಟಿನ ಸೆಲೆಬ್ರೆಟಿಗಳು ಬಿಬಿಡಿಯನ್ನ ಪ್ರಚಾರ ಮಾಡಲಿದ್ದಾರೆ.

70,000 ರೂಪಾಯಿವರೆಗೆ ಸಾಲ

70,000 ರೂಪಾಯಿವರೆಗೆ ಸಾಲ

ಫ್ಲಿಪ್‌ಕಾರ್ಟ್ ಗ್ರಾಹಕರು ಯಾವುದೇ ಇಎಂಐ ವೆಚ್ಚವಿಲ್ಲದೆ 'ಫ್ಲಿಪ್‌ಕಾರ್ಟ್ ಪೇ ಲೇಟರ್' ಅಡಿಯಲ್ಲಿ 70,000 ರೂಪಾಯಿವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇದಕ್ಕಾಗಿ 18 ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಡಿಸೆಂಬರ್ ವೇಳೆಗೆ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿ

ಡಿಸೆಂಬರ್ ವೇಳೆಗೆ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿ

ಇದೇ ವರ್ಷದ ಕೊನೆಯ ವೇಳೆಗೆ ತನ್ನ ವೇದಿಕೆಯಲ್ಲಿ ಫ್ಲಿಪ್‌ಕಾರ್ಟ್‌ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ತನ್ನ ಮಾರಾಟ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಇಟ್ಟುಕೊಂಡಿದೆ. ಈಗಾಗಲೇ ಫ್ಲಿಪ್‌ಕಾರ್ಟ್ ಕಳೆದ ಕೆಲವು ತಿಂಗಳುಗಳಲ್ಲಿ 75,000 ಹೊಸ ಮಾರಾಟಗಾರರನ್ನು ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಸೇರಿಸಿಕೊಂಡಿದೆ.

ಗೂಗಲ್ ಪಿಕ್ಸೆಲ್ 4 ಎ

ಗೂಗಲ್ ಪಿಕ್ಸೆಲ್ 4 ಎ

ಗೂಗಲ್ ಪಿಕ್ಸೆಲ್ 4 ಎ, ಇದನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021 ಮಾರಾಟದಲ್ಲಿ ಮಾರಾಟ ಮಾಡಲಾಗುವುದು. ಗೂಗಲ್ ಪಿಕ್ಸೆಲ್ 4 ಎ ಬೆಲೆ ಪ್ರಸ್ತುತ ರೂ 31,999 ರಿಂದ ಪ್ರಾರಂಭವಾಗುತ್ತದೆ. ಈ ಫೋನ್ 20,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನದಕ್ಕೆ ಲಭ್ಯವಿರುತ್ತದೆ ಎಂದು ಫ್ಲಿಪ್‌ಕಾರ್ಟ್ ಹೇಳುತ್ತದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಮೊಟೊರೊಲಾ ಎಡ್ಜ್ 20 ಫ್ಯೂಷನ್

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಮೊಟೊರೊಲಾ ಎಡ್ಜ್ 20 ಫ್ಯೂಷನ್

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2021 ರಲ್ಲಿ ಮೊಟೊರೊಲಾ ಎಡ್ಜ್ 20 ಫ್ಯೂಷನ್ ಕೂಡ ಭಾರೀ ಕಡಿತವನ್ನು ಪಡೆಯಲಿದೆ. ಮೊಟೊರೊಲಾ ಎಡ್ಜ್ 20 ಫ್ಯೂಷನ್ ಒಂದು ಉತ್ತಮ ಕ್ಯಾಮೆರಾ ಮೊಬೈಲ್ ಫೋನ್ ಆಗಿದ್ದು ಅದನ್ನು ಈಗ ಫ್ಲಿಪ್‌ಕಾರ್ಟ್ ಮೂಲಕ ರಿಯಾಯಿತಿಯಲ್ಲಿ ಖರೀದಿಸಬಹುದು.

English summary

Flipkart Big Billion Days 2021 Offers from 7th to 12th October 2021

Dates out for Flipkart's Big Billion Day sale. The 8th edition of BBD is scheduled from October 7 to 12, 2021. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X