For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 16ರಿಂದ 21ರ ತನಕ

By ಅನಿಲ್ ಆಚಾರ್
|

ವಾಲ್ ಮಾರ್ಟ್ ಮಾಲೀಕತ್ವದ ಫ್ಲಿಪ್ ಕಾರ್ಟ್ ನಿಂದ ಅಕ್ಟೋಬರ್ 16ರಿಂದ 21ನೇ ತಾರೀಕಿನ ತನಕ ವಾರ್ಷಿಕ 'ಬಿಗ್ ಬಿಲಿಯನ್ ಡೇಸ್' ಮಾರಾಟ ನಡೆಯಲಿದೆ. ಆರು ದಿನಗಳ ಕಾಲ ನಡೆಯುವ ಈ ಮಾರಾಟದಲ್ಲಿ ಅಪಾರ ಪ್ರಮಾಣದ ಉತ್ಪನ್ನಗಳು ಇರಲಿದ್ದು, ಹೊಸ ಹಾಗೂ ಹಳೇ ಗ್ರಾಹಕರಿಗೆ ಹಣಕ್ಕೆ ಅತ್ಯುತ್ತಮ ಮೌಲ್ಯ ಸಿಗಲಿದೆ. ಇದರ ಜತೆಗೆ ದೇಶಾದ್ಯಂತ ಇರುವ ಎಂಎಸ್ ಎಂಇಗಳಿಗೆ ಬೆಳವಣಿಗೆಗೆ ಕೂಡ ಅವಕಾಶ ದೊರೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫ್ಲಿಪ್ ಕಾರ್ಟ್ ನಿಂದ 70 ಸಾವಿರ ಮಂದಿ ಹೊಸದಾಗಿ ನೇಮಕ

ಫ್ಲಿಪ್ ಕಾರ್ಟ್ ನ ಪ್ರತಿಸ್ಪರ್ಧಿಯಾದ ಅಮೆಜಾನ್.ಕಾಮ್ ನಿಂದ ಮುಂದಿನ ವಾರ ಮಾರಾಟ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಇನ್ನು ಇದೇ ಮೊದಲ ಬಾರಿಗೆ ಸ್ನ್ಯಾಪ್ ಡೀಲ್ ನಿಂದ ಅಕ್ಟೋಬರ್ ಮಧ್ಯ ಭಾಗದಲ್ಲಿ ಮಾರಾಟ ಆಯೋಜಿಸಲಿದೆ. ಇದರ ಮತ್ತೆರಡು ಮಾರಾಟ ಅಕ್ಟೋಬರ್ ಕೊನೆಗೆ ಹಾಗೂ ನವೆಂಬರ್ ಆರಂಭದಲ್ಲಿ ನಡೆಯಲಿದೆ.

ಎಲೆಕ್ಟ್ರಾನಿಕ್ಸ್, ಫ್ಯಾಷನ್, ಹೋಮ್ ಫರ್ನಿಷಿಂಗ್ ಇತರ ವಸ್ತು
 

ಎಲೆಕ್ಟ್ರಾನಿಕ್ಸ್, ಫ್ಯಾಷನ್, ಹೋಮ್ ಫರ್ನಿಷಿಂಗ್ ಇತರ ವಸ್ತು

ಈ ಹಬ್ಬದ ಸೀಸನ್ ನಲ್ಲಿ ಎಲೆಕ್ಟ್ರಾನಿಕ್ಸ್, ಫ್ಯಾಷನ್, ಹೋಮ್ ಫರ್ನಿಷಿಂಗ್ ಸೇರಿ ವಿವಿಧ ಕ್ಯಾಟಗರಿ ಅಡಿಯಲ್ಲಿ ಬರುವ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇರುತ್ತದೆ. ಕಳೆದ ವರ್ಷ ಈ ಅವಧಿಯಲ್ಲಿ 3.8 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಗ್ರಾಸ್ ಮರ್ಚಂಡೈಸ್ ಮೌಲ್ಯದ ವಸ್ತುಗಳು ಮಾರಾಟ ಆಗಿದ್ದವು. ಈ ಸಲ ಅದು 7 ಬಿಲಿಯನ್ ಯುಎಸ್ ಡಿ ಆಗುವ ನಿರೀಕ್ಷೆ ಇದೆ.

ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ನೋ ಕಾಸ್ಟ್ ಇಎಂಐ

ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ನೋ ಕಾಸ್ಟ್ ಇಎಂಐ

ಫ್ಲಿಪ್ ಕಾರ್ಟ್ ನಿಂದ ಹೊಸ ಹಾಗೂ ಅನುಕೂಲಕರ ರೀತಿಯ ಪಾವತಿಗೆ ಅವಕಾಶ ಮಾಡಿಕೊಡಲಾಗುವುದು. ಬಜಾಜ್ ಫೈನಾನ್ಸ್ ಸರ್ವೀಸಸ್ ಇಎಂಐ ಕಾರ್ಡ್ ಗಳಿಗೆ ಹಾಗೂ ಇತರ ಬ್ಯಾಂಕ್ ಗಳ ಡೆಬಿಟ್. ಕ್ರೆಡಿಟ್ ಕಾರ್ಡ್ ಗಳಿಗೆ ನೋ ಕಾಸ್ಟ್ ಇಎಂಐ ದೊರೆಯಲಿದೆ. ಫ್ಲಿಪ್ ಕಾರ್ಟ್ ನಿಂದ ಪೇಟಿಎಂ ಜತೆಗೆ ಸಹಭಾಗಿತ್ವ ವಹಿಸಿದ್ದು, ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ದೊರೆಯಲಿದೆ.

ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ

ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಗಾಗಿ ಸೆಲೆಬ್ರಿಟಿಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣ್ಬೀರ್ ಕಪೂರ್, ಸುದೀಪ್ ಮತ್ತು ಮಹೇಶ್ ಬಾಬು ಇವರೆಲ್ಲ ಬಿಗ್ ಬಿಲಿಯನ್ ಡೇ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಎಪ್ಪತ್ತು ಸಾವಿರದಿಂದ ಒಂದು ಲಕ್ಷ ಪರೋಕ್ಷ ಸೀಸನಲ್ ಉದ್ಯೋಗ ಸೃಷ್ಟಿ ಆಗಲಿದೆ.

English summary

Flipkart Big Billion Days Sale to Start October 16, Will Run for 6 Days

Walmart's owned Flipkart host big billion days from October 16, 2020. This is 6 days sale with various offers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X