ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನವೆಂಬರ್ 12 (ಗುರುವಾರ) ಮಧ್ಯಾಹ್ನ 12.30 ಕ್ಕೆ ಪತ್ರಿಕಾಗೋಷ್ಠಿಯಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮಾತನಾಡಲಿದ್ದಾರೆ ಎಂದು ಸಚಿವರ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.
ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲು ಮತ್ತೊಂದು ಸುತ್ತಿನ ಉತ್ತೇಜನ ಕ್ರಮಗಳನ್ನು ದೇಶವು ಎದುರು ನೋಡುತ್ತಿದೆ. ಆದ್ದರಿಂದ ಎಲ್ಲಾ ಕಣ್ಣುಗಳು ಪತ್ರಿಕಾಗೋಷ್ಠಿಯ ಕಡೆಗಿವೆ.
10 ವಲಯಗಳಲ್ಲಿನ ಉತ್ಪಾದಕರಿಗೆ ಐದು ವರ್ಷಗಳಲ್ಲಿ ಸುಮಾರು 27 ಬಿಲಿಯನ್ ಮೌಲ್ಯದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಬುಧವಾರದಂದು ಘೋಷಿಸಲಾಗಿದ್ದು, ಅದರ ಒಂದು ದಿನದ ನಂತರ ಈಗಿನ ಪ್ಯಾಕೇಜ್ ಘೋಷಿಸಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿನ ಪ್ರಮುಖಾಂಶಗಳು ಹೀಗಿವೆ:
Nov 12, 2020 2:34 PM
ಕೊರೊನಾ ಲಸಿಕೆ ಸಂಶೋಧನೆ, ಅಭಿವೃದ್ಧಿಗೆ 900 ಕೋಟಿ
ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೋವಿಡ್ ಮಿಷನ್ ಅಡಿಯಲ್ಲಿ ಬಯೋಟೆಕ್ನಾಲಜಿ ಇಲಾಖೆಗೆ 900 ಕೋಟಿ ರುಪಾಯಿ ನೀಡಲಾಗುತ್ತದೆ. ಕೊರೊನಾ ಲಸಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ ಮೀಸಲು.
Nov 12, 2020 2:33 PM
ಕೈಗಾರಿಕೆ ಉತ್ತೇಜನಕ್ಕೆ 10,200 ಕೋಟಿ
ಕೈಗಾರಿಕೆ ಉತ್ತೇಜನಗಳಿಗೆ ಬಜೆಟ್ ನಲ್ಲಿ ಮೀಸಲಿರಿಸಿದ್ದಕ್ಕಿಂತ 10,200 ಕೋಟಿ ರುಪಾಯಿ ನೀಡಲಾಗುತ್ತದೆ. ಗ್ರೀನ್ ಎನರ್ಜಿ, ದೇಶೀಯ ರಕ್ಷಣೆ ಮತ್ತಿತರ ಕ್ಷೇತ್ರಕ್ಕೆ ಈ ಮೊತ್ತ ಮೀಸಲು
Nov 12, 2020 2:29 PM
ಎಕ್ಸಿಂ ಬ್ಯಾಂಕ್ ಗಳಿಗೆ ಲೈನ್ ಆಫ್ ಕ್ರೆಡಿಟ್ 6000 ಕೋಟಿ ರುಪಾಯಿ
ವಿದೇಶಗಳಲ್ಲಿ ನಡೆಯುವ ಯೋಜನೆಗಳಲ್ಲಿ ಭಾರತೀಯ ಕಂಪೆನಿಗಳು ಭಾಗವಹಿಸಲು ನೆರವಾಗುವುದಕ್ಕೆ ಎಕ್ಸಿಂ ಬ್ಯಾಂಕ್ ಗಳಿಗೆ ಲೈನ್ ಆಫ್ ಕ್ರೆಡಿಟ್ 6000 ಕೋಟಿ ರುಪಾಯಿ ನೀಡಲಾಗುವುದು.
Nov 12, 2020 2:28 PM
ಗ್ರಾಮೀಣ ಅಸಂಘಟಿತ ವಲಯಗಳಿಗೆ ಹತ್ತು ಸಾವಿರ ಕೋಟಿ
ಗ್ರಾಮೀಣ ಅಸಂಘಟಿತ ವಲಯಗಳಿಗಾಗಿ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 10,000 ಕೋಟಿ ರುಪಾಯಿ ಬಿಡುಗಡೆ. ಅದನ್ನು ನರೇಗಾ, ಗ್ರಾಮೀಣ್ ಸಡಕ್ ಯೋಜನಾ ಇವುಗಳಿಗೆ ಬಳಸಬಹುದು.
Nov 12, 2020 2:22 PM
ಕೃಷಿ ಉತ್ಪಾದನೆ ಹೆಚ್ಚಾಗಲು ಅನುಕೂಲ
14 ಕೋಟಿ ರೈತರಿಗೆ ಅನುಕೂಲ ಆಗುವಂತೆ 65 ಸಾವಿರ ಕೋಟಿ ಮೀಸಲಾಗಿರಿಸಲಾಗುತ್ತಿದೆ. ಗೊಬ್ಬರ ಪೂರೈಕೆ ಹೆಚ್ಚು ಮಾಡಿ, ಸಬ್ಸಿಡಿ ನೀಡುವ ನಿಟ್ಟಿನಲ್ಲಿ ಇಷ್ಟು ಮೊತ್ತದ ಹಣ ಮೀಸಲು. ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಲು ನೆರವಾಗುತ್ತದೆ.
Nov 12, 2020 2:22 PM
ಎನ್ ಐಎಎಫ್ ಈಕ್ವಿಟಿಗಳಿಗೆ 6000 ಕೋಟಿ ಮೀಸಲು
ದೇಶದಲ್ಲಿ ಮೂಲಸೌಕರ್ಯಯಲ್ಲಿ ಹೂಡಿಕೆ ಮಾಡುವ ಎನ್ ಐಐಎಫ್ ಈಕ್ವಿಟಿಗಳಿಗೆ 6000 ಕೋಟಿ ಮೀಸಲು. ಡೆಟ್ ಫೈನಾನ್ಸಿಂಗ್ ಗಾಗಿ ಈ ಅನುಕೂಲ. ಒಟ್ಟಾರೆ ಒಂದು ಲಕ್ಷದ ಹತ್ತು ಸಾವಿರ ಕೋಟಿ ರುಪಾಯಿ ಹೂಡಿಕೆ ರೂಪದಲ್ಲಿ ಬರುತ್ತದೆ.
Nov 12, 2020 2:14 PM
ಮನೆ ನಿರ್ಮಿಸುವವರಿಗೂ ಖರೀದಿದಾರರಿಗೂ ಅನುಕೂಲ
ಮನೆ ನಿರ್ಮಿಸುವವರಿಗೆ- ಮಾರಾಟಗಾರರಿಗೆ ಆದಾಯ ತೆರಿಗೆ ಅನುಕೂಲ ಘೋಷಣೆ. ಮನೆಗಳ ಖರೀದಿ ಹೆಚ್ಚು ಮಾಡುವ ನಿಟ್ಟಿನಲ್ಲಿ ಅನುಕೂಲಕರ ಘೋಷಣೆ.
Nov 12, 2020 2:14 PM
ಟೆಂಡರ್ ದಾರರಿಗೆ ನಿರಾಳ
ನಿರ್ಮಾಣ ಹಾಗೂ ಮೂಲಸೌಕರ್ಯ ವಲಯದಲ್ಲಿ ಬ್ಯಾಂಕ್ ಗ್ಯಾರಂಟಿ ಕಡಿಮೆ ಬರುತ್ತಿತ್ತು. ಮುಂಚೆ ಹತ್ತು ಪರ್ಸೆಂಟ್ ಇತ್ತು. ಅದನ್ನು ಮೂರು ಪರ್ಸೆಂಟ್ ಗೆ ಇಳಿಸಲಾಗಿದೆ. ಮುಂದಿನ ವರ್ಷದ ಡಿಸೆಂಬರ್ ತನಕ ಟೆಂಡರ್ ಗಳಿಗೆ ಅರ್ನೆಸ್ಟ್ ಮನಿ ಡೆಪಾಸಿಟ್ (ಇಎಂಡಿ) ನೀಡುವ ಅಗತ್ಯ ಇಲ್ಲ. ಬಿಡ್ ಘೋಷಣೆ ನೀಡಿದರೆ ಸಾಕು. ಟೆಂಡರ್ ದಾರರಿಗೆ ಇದರಿಂದ ದೊಡ್ಡ ಮೊತ್ತದ ನಿರಾಳ.
Nov 12, 2020 2:14 PM
ಪ್ರಧಾನಮಂತ್ರಿ ನಗರ ಆವಾಸ ಯೋಜನೆಗೆ 18000 ಸಾವಿರ ಕೋಟಿ ಹೆಚ್ಚು ಹಣ
ಪ್ರಧಾನಮಂತ್ರಿ ನಗರ ಆವಾಸ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ 18000 ಸಾವಿರ ಕೋಟಿ ಹೆಚ್ಚು ನೀಡಲಾಗಿದೆ. ಇದರಿಂದ 12 ಲಕ್ಷ ಮನೆಗಳ ಆರಂಭ, 18 ಲಕ್ಷ ಪೂರ್ಣ, ಸಿಮೆಂಟ್, ಕಬ್ಬಿಣ ಖರೀದಿ, ಉದ್ಯೋಗ ಸೃಷ್ಟಿ ಆಗಲಿದೆ.
Nov 12, 2020 2:14 PM
ಪಿಎಲ್ ಐಗೆ 1.46 ಲಕ್ಷ ಕೋಟಿ ರುಪಾಯಿ
ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಗೆ ಮುಂದಿನ ಐದು ವರ್ಷಗಳ ಅವಧಿಗೆ 1.46 ಲಕ್ಷ ಕೋಟಿ ರುಪಾಯಿ ನೀಡಲಾಗುವುದು.
Nov 12, 2020 1:57 PM
ಐದು ವರ್ಷದ ಸಾಲ ಮರುಪಾವತಿ
ಒತ್ತಡದ ವಲಯಗಳನ್ನು ಗುರುತಿಸಿದ್ದು, ಇಸಿಎಲ್ ಜಿಎಸ್ ಬೆಂಬಲ ನೀಡಲಾಗುವುದು. ಒಂದು ವರ್ಷ ಸಾಲ ಮರುಪಾವತಿ ವಿನಾಯಿತಿ ಹಾಗೂ ನಾಲ್ಕು ವರ್ಷ ಮರುಪಾವತಿ ಸೇರಿ ಒಟ್ಟು ಐದು ವರ್ಷ ಸಮಯ ಸಿಗುತ್ತದೆ. ಈ ಹಿಂದೆ ಇದು ನಾಲ್ಕು ವರ್ಷ ಇತ್ತು.
Nov 12, 2020 1:47 PM
ಎಂಎಸ್ ಎಂಇ ತುರ್ತು ಸಾಲ ಅವಧಿ ವಿಸ್ತರಣೆ
ಎಂಎಸ್ ಎಂಇಗಳಿಗೆ ತುರ್ತು ಸಾಲದ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ.
Nov 12, 2020 1:46 PM
ಎರಡು ವರ್ಷ ಲಾಭ
15000ಕ್ಕಿಂತ ಕಡಿಮೆ ಸಂಬಳ ಇರುವವರಿಗೆ ಇದು ಅನ್ವಯ ಆಗುತ್ತದೆ. ಮುಂದಿನ ಎರಡು ವರ್ಷಗಳ ಕಾಲ ಅನುಕೂಲ ದೊರೆಯುತ್ತದೆ. ಒಂದು ಸಾವಿರದೊಳಗೆ ಕೆಲಸಗಾರರು ಇರುವ ಕಡೆ ಉದ್ಯೋಗದಾತರ ಹನ್ನೆರಡು, ಉದ್ಯೋಗಿಗಳ ಹನ್ನೆರಡು ಪರ್ಸೆಂಟ್ ಕೊಡುಗೆ ಇಪಿಎಫ್ ಸರ್ಕಾರ ನೀಡುತ್ತದೆ. ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಕಡೆ ಉದ್ಯೋಗಿಗಳ ಹನ್ನೆರಡು ಪರ್ಸೆಂಟ್ ಮಾತ್ರ ನೀಡುತ್ತದೆ. ಆದರೆ ಇಪಿಎಫ್ ಒ ಜತೆಗೆ ಆಧಾರ್ ಜೋಡಣೆ ಆಗುತ್ತದೆ. ಸಂಘಟಿತ ವಲಯದ ಅರವತ್ತೈದು ಪರ್ಸೆಂಟ್ ಜನರು ಇದರ ಲಾಭ ಪಡೆಯಲಿದ್ದಾರೆ.
Nov 12, 2020 1:42 PM
ಇಬ್ಬರು- ಐವರನ್ನು ನೇಮಿಸಿಕೊಳ್ಳಬೇಕು
ಐವತ್ತಕ್ಕಿಂತ ಕಡಿಮೆ ಇರುವ ಸಂಸ್ಥೆಗಳಲ್ಲಿ ಇಬ್ಬರನ್ನು ಮತ್ತು ಐವತ್ತಕ್ಕಿಂತ ಹೆಚ್ಚು ಮಂದಿ ಇರುವ ಸಂಸ್ಥೆಗಳಲ್ಲಿ ಐವರನ್ನು ನೇಮಿಸಿಕೊಳ್ಳಬೇಕು.
Nov 12, 2020 1:40 PM
ಆತ್ಮನಿರ್ಭರ್ ಭಾರತ್ ರೋಜ್ ಗಾರ್ ಯೋಜನೆ
ಪ್ರತಿ ನೋಂದಾಯಿತ ಇಪಿಎಫ್ ಒ ಸಂಸ್ಥೆಗಳು ಹೊಸ ಉದ್ಯೋಗಿಯನ್ನು ತೆಗೆದುಕೊಂಡರೆ, ಮಾರ್ಚ್ ನಿಂದ - ಸೆಪ್ಟೆಂಬರ್ ಮಧ್ಯೆ ಕೆಲಸ ಹೋಗಿರುತ್ತದೆ ಹಾಗೂ ಯಾರಿಗೆ ಹೊಸ ಸಂಖ್ಯೆ ಬರುತ್ತದೋ ಅಥವಾ ಕೆಲಸ ಕಳೆದುಕೊಳ್ಳುತ್ತಾರೋ ಅಂಥವರಿಗೆ ಅನುಕೂಲ ದೊರೆಯುತ್ತದೆ. ಇದು ಅಕ್ಟೋಬರ್ ಒಂದರಿಂದ ಅನ್ವಯ ಆಗುತ್ತದೆ. ಅಕ್ಟೋಬರ್ ಒಂದರಿಂದ ನೇಮಿಸಿಕೊಂಡರೆ ಎರಡು ವರ್ಷ ಅನುಕೂಲ ಆಗುತ್ತದೆ.
Nov 12, 2020 1:32 PM
1,32,800 ಕೋಟಿ ರು. ಮರುಪಾವತಿ
ತೆರಿಗೆ ಪಾವತಿದಾರರಿಗೆ 1,32,800 ಕೋಟಿ ರುಪಾಯಿಯನ್ನು ಮರುಪಾವತಿ ಮಾಡಲಾಗಿದೆ: ನಿರ್ಮಲಾ
Nov 12, 2020 1:16 PM
ಆತ್ಮನಿರ್ಭರ್ ಭಾರತ್ 1.0 ಲೆಕ್ಕಾಚಾರ ಮುಂದಿಟ್ಟ ಸಚಿವೆ
ಆತ್ಮನಿರ್ಭರ್ ಭಾರತ್ 1.0 ಅಡಿಯಲ್ಲಿ ತೆಗೆದುಕೊಂಡ ಕ್ರಮಗಳಲ್ಲಿ ಆಗಿರುವ ಬೆಳವಣಿಗೆಗಳ ಲೆಕ್ಕಾಚಾರ ಮುಂದಿಟ್ಟ ಸಚಿವೆ
Nov 12, 2020 1:13 PM
ಆತ್ಮನಿರ್ಭರ್ ಭಾರತ್ 3.0
ಆತ್ಮನಿರ್ಭರ್ ಭಾರತ್ 3.0 ಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ ನಿರ್ಮಲಾ ಸೀತಾರಾಮನ್
Nov 12, 2020 1:03 PM
ಅಕ್ಟೋಬರ್ ನಲ್ಲಿ ಪ್ರಬಲ ಚೇತರಿಕೆ
ಆರ್ಥಿಕತೆಯಲ್ಲಿ ಅಕ್ಟೋಬರ್ ನಲ್ಲಿ ಪ್ರಬಲ ಚೇತರಿಕೆ ಕಾಣಿಸಿಕೊಂಡಿದೆ. ವಿದ್ಯುತ್ ಬಳಕೆಯನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಏರಿಕೆ ಆಗಿದೆ.
Nov 12, 2020 1:02 PM
ಆರ್ಥಿಕ ಉತ್ತೇಜನ ಘೋಷಣೆ : ವಿತ್ತ ಸಚಿವೆ
ಆರ್ಥಿಕ ಉತ್ತೇಜನ ಘೋಷಣೆ ಮಾಡುವುದಾಗಿ ಹೇಳಿದ ವಿತ್ತ ಸಚಿವೆ.
Nov 12, 2020 12:50 PM
ನಷ್ಟದ ವಹಿವಾಟು ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ
ಷೇರು ಪೇಟೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭದಲ್ಲಿ, ಮಾರುಕಟ್ಟೆ ಸೂಚ್ಯಂಕಗಳು ನಷ್ಟದೊಂದಿಗೆ ವಹಿವಾಟು ಮುಂದುವರಿಸುತ್ತಿವೆ. ನಿಫ್ಟಿ 50 ಸೂಚ್ಯಂಕವು 0.6% ಕುಸಿದು 12,674ರಲ್ಲಿ ಮತ್ತು ಸೆನ್ಸೆಕ್ಸ್ 0.7% ಇಳಿದು 43,292ಕ್ಕೆ ತಲುಪಿದೆ.
Nov 12, 2020 12:08 PM
ಒತ್ತಡದಲ್ಲಿರುವ ಕ್ಷೇತ್ರಕ್ಕೆ ಉತ್ತೇಜನ
ಸರ್ಕಾರಿ ಅಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿರುವ ಪ್ರಕಾರ, ಉತ್ತೇಜನ ಕ್ರಮಗಳು ಬಿಲಿಯನ್ ನಲ್ಲಿ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ಮತ್ತು ಇತರ ಉನ್ನತ ಅಧಿಕಾರಿಗಳು ಗುರುವಾರ ಯೋಜನೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಅದು ಹೇಳಿದೆ. ಪ್ಯಾಕೇಜ್ನ ವಿವರಗಳನ್ನು ನೀಡದೆ, ಉದ್ಯೋಗ ಸೃಷ್ಟಿಸುವತ್ತ ಗಮನಹರಿಸಿ ಒತ್ತಡದಲ್ಲಿ ಇರುವ ಕ್ಷೇತ್ರಗಳತ್ತ ಈಗಿನ ಕ್ರಮವನ್ನು ಗುರಿಯಾಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
Nov 12, 2020 12:08 PM
ಹತ್ತು ವಲಯಗಳು ಬರುತ್ತವೆ
ಕೇಂದ್ರ ಸಂಪುಟವು ಬುಧವಾರದಂದು (ನವೆಂಬರ್ 11, 2020) ಹತ್ತು ವಲಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಅಥವಾ ಪಿಎಲ್ ಐ ಯೋಜನೆಗೆ ಅನುಮತಿ ನೀಡಿದೆ. ಅಡ್ವಾನ್ಸ್ ಸೆಲ್ ಕೆಮಿಸ್ಟ್ರಿ ಬ್ಯಾಟರಿ, ಫಾರ್ಮಾಸ್ಯುಟಿಕಲ್ಸ್, ಆಹಾರ ಪದಾರ್ಥಗಳು ಮತ್ತು ವೈಟ್ ಗೂಡ್ಸ್ ಗಳು ಬರುತ್ತವೆ.