For Quick Alerts
ALLOW NOTIFICATIONS  
For Daily Alerts

FPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆ

|

ನವೆಂಬರ್ ತಿಂಗಳಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಭಾರತದ ಮಾರುಕಟ್ಟೆಗೆ 62,591 ಕೋಟಿ ರುಪಾಯಿಗಳ ಭಾರೀ ಬಂಡವಾಳವನ್ನೇ ಹರಿಸಿದ್ದಾರೆ. ಆ ಮೂಲಕ ಸತತವಾಗಿ ಎರಡನೇ ತಿಂಗಳು ನಿವ್ವಳ ಖರೀದಿದಾರರಾಗಿದ್ದಾರೆ. ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ ನಲ್ಲಿ (NSDL) FPI ಬಗ್ಗೆ ಮಾಹಿತಿ ಸಿಗಲು ಆರಂಭವಾದ ನಂತರ ಈಕ್ವಿಟಿ ಸೆಗ್ಮೆಂಟ್ ಗೆ ಹರಿದುಬಂದಿರುವ ಅತಿ ದೊಡ್ಡ ಹೂಡಿಕೆ ಮೊತ್ತ ಇದು.

ಡೆಪಾಸಿಟರಿ ದತ್ತಾಂಶದ ಪ್ರಕಾರ, FPIಗಳು ಈಕ್ವಿಟಿ ಸೆಗ್ಮೆಂಟ್ ನಲ್ಲಿ ನಿವ್ವಳ (ಒಟ್ಟಾರೆ ಖರೀದಿಯಲ್ಲಿ ಮಾರಾಟ ಪ್ರಮಾಣವನ್ನು ಕಳೆದ ಮೇಲೆ ಉಳಿದದ್ದು) ಹೂಡಿಕೆ 60,358 ಕೋಟಿ ರುಪಾಯಿಯಾದರೆ, ಡೆಟ್ ಸೆಗ್ಮೆಂಟ್ ನಲ್ಲಿ 2593 ಕೋಟಿ ರುಪಾಯಿ ಹಣ ಹೂಡಿದ್ದಾರೆ. ಅಲ್ಲಿಗೆ ನವೆಂಬರ್ 3ರಿಂದ 27ರ ಮಧ್ಯೆ 62,951 ಕೋಟಿ ರುಪಾಯಿ ನಿವ್ವಳ ಹೂಡಿಕೆ ಬಂದಿದೆ.

 

ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ US

ಅಕ್ಟೋಬರ್ ನಲ್ಲಿ FPI ನಿವ್ವಳ ಖರೀದಿ 22,033 ಕೋಟಿ ರುಪಾಯಿ ಇತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಹಾಗೂ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಸಕಾರಾತ್ಮಕ ಬೆಳವಣಿಗೆ ಕಂಡುಬಂದ ಮೇಲೆ ಅನಿಶ್ಚಿತತೆ ದೂರಾಗಿದೆ. ಇನ್ನು ಅಭಿವೃದ್ಧಿ ಹೊಂದಿದ ಮಾರ್ಕೆಟ್ ಗಿಂತ ಬೆಳವಣಿಗೆ ಕಾಣುತ್ತಿರುವ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

FPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆ

ನವೆಂಬರ್ ನಲ್ಲಿ ಯುಎಸ್ ಡಾಲರ್ ನಲ್ಲಿನ ದೌರ್ಬಲ್ಯ ಹಾಗೂ ಪ್ರಮುಖ ಕೇಂದ್ರ ಬ್ಯಾಂಕ್ ಗಳಲ್ಲಿನ ಹಣಕಾಸು ನೀತಿಯಲ್ಲಿನ ನಿಲುವಿನ ಕಾರಣಕ್ಕೆ ಹಲವು ಷೇರು ಮಾರುಕಟ್ಟೆಯಲ್ಲಿ ಖರೀದಿಗೆ ಬೆಂಬಲ ಸಿಕ್ಕಿದೆ.

English summary

FPI Investments In November All Time Record Of Rs 62591 Crore

Foreign Portfolio Investment (FPI) in to Indian markets in November all time record of 62591 crore rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X