For Quick Alerts
ALLOW NOTIFICATIONS  
For Daily Alerts

ಚೆನ್ನೈ ಸ್ಟಾರ್ ಹೋಟೆಲ್‌ನಲ್ಲಿ ಕುಳಿತು, ಹೋಟೆಲನ್ನೇ ಮಾರಾಟ ಮಾಡಲು ಯತ್ನಿಸಿದ ವಂಚಕರು ಅರೆಸ್ಟ್

|

ಹೋಟೆಲ್ ಮಾಲೀಕರಂತೆ ನಟಿಸಿ ಕೇರಳ ಮೂಲದ ಸಂಸ್ಥೆಗೆ 165 ಕೋಟಿಗೆ 3 ಸ್ಟಾರ್ ಲಕ್ಸುರಿ ಹೋಟೆಲ್ ಮಾರಾಟ ಮಾಡಲು ಯತ್ನಿಸಿದ ಮೂವರು ವಂಚಕರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

 

ಚೆನ್ನೈನಲ್ಲಿರುವ 3 ಸ್ಟಾರ್ ಹೋಟೆಲ್ ಅಂಬಿಕಾ ಎಂಪೈರ್ ನಮ್ಮದೇ ಎಂದು ಮಾಲೀಕರಂತೆ ನಟಿಸಿದ್ದ ವಂಚಕರ ತಂಡವೊಂದು ಹೋಟೆಲ್‌ನ ಲಾಬಿಯಲ್ಲಿ ಮಾರಾಟದ ಮಾತುಕತೆ ನಡೆಸಿದೆ. ಈ ಮಾತುಕತೆ ಅದೇಗೋ ಹೋಟೆಲ್ ಸಿಬ್ಬಂದಿಗೆ ಗೊತ್ತಾಗಿ ಮ್ಯಾನೇಜರ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ನಿಜವಾದ ಮಾಲೀಕರೊಂದಿಗೆ ಪರಿಶೀಲಿಸಿದ ನಂತರ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಕರೆ ಮಾಡಿದ್ದಾರೆ.

ಚೆನ್ನೈ ಸ್ಟಾರ್ ಹೋಟೆಲ್ ಮಾರಾಟಕ್ಕೆ ಯತ್ನಿಸಿದ 3 ವಂಚಕರು ಅರೆಸ್ಟ್

ಹೋಟೆಲ್ ಮಾಲೀಕರಂತೆ ನಟಿಸಿ ಕೇರಳ ಮೂಲದ ಗುಂಪಿಗೆ 165 ಕೋಟಿ ರುಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದಕ್ಕಾಗಿ ಮೂವರು ವಂಚಕರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಅಂಬಿಕಾ ಚೆನ್ನೈನ ಸ್ಟಾರ್ ಹೋಟೆಲ್‌ಗಳಲ್ಲಿ ಒಂದಾಗಿದ್ದು, ಹೋಟೆಲ್ ತಮ್ಮದೇ ಎಂದು ವಂಚಿಸಲು ಈ ಗುಂಪು ಪ್ಲಾನ್ ಮಾಡಿಕೊಡಿದೆ. ಹೆಚ್ಚಿನ ತನಿಖೆಯಲ್ಲಿ ಅವರಲ್ಲಿ ಮೂವರು ಚೆನ್ನೈ ಮೂಲದವರು ಮತ್ತು ಇನ್ನಿಬ್ಬರು ಕೇರಳ ಮೂಲದವರು ಎಂದು ತಿಳಿದುಬಂದಿದೆ. ಸತತ ವಿಚಾರಣೆಯಲ್ಲಿ ಕರುಣಂಕರನ್, (70), ಪರಮಾನಂದಂ, (55) ಮತ್ತು ಚೆನ್ನೈನ ದಕ್ಷಿಣಮೂರ್ತಿ (60) ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಈ ವಂಚಕರು ಕೇರಳದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿಯಾಗಿ ಚೆನ್ನೈನಲ್ಲಿರುವ ಅಂಬಿಕಾ ಎಂಪೈರ್ ಹೋಟೆಲ್‌ನ ಮೂಲ ಮಾಲೀಕರಂತೆ ನಟಿಸಿದ್ದಾರೆ. ನಂತರ ಹೋಟೆಲ್ ಅನ್ನು 165 ಕೋಟಿಗೆ ಮಾರಾಟ ಮಾಡಲು ಮುಂದಾದರು. ಈ ಆಫರ್‌ಗೆ ಆಕರ್ಷಿತರಾದ ಕೇರಳ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಚೆನ್ನೈ ತಲುಪಿದರು ಮತ್ತು ಮೂವರ ಸಲಹೆಯಂತೆ ಎರಡು ದಿನಗಳ ಕಾಲ ಅದೇ ಹೋಟೆಲ್‌ನಲ್ಲಿ ತಂಗಿದ್ದರು.

ಹೋಟೆಲ್‌ ಖರೀದಿಗೂ ಮುನ್ನ ಒಟ್ಟು ಮಾರಾಟ ಮೌಲ್ಯದಲ್ಲಿ 10 ಪರ್ಸೆಂಟ್‌ನಷ್ಟು ಅಡ್ವಾನ್ಸ್ ಆಗಿ ಹಣ ನೀಡಬೇಕೆಂದು ಕೂಡ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು ಅವರಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಲ್ಪ ಯಾಮಾರಿದ್ರೂ ಯಾರದ್ದೋ ಹೋಟೆಲ್‌ ಅನ್ನು ಅವರದ್ದೇ ಹೋಟೆಲ್‌ನಲ್ಲಿ ಕುಳಿತು ಮಾರಾಟ ಮಾಡುತ್ತಿದ್ದರು.

English summary

Fraudsters Try To Sell Star Hotel For 165 Crore In Chennai

Three men were arrested by the Chennai Police for pretending to be the owners of a hotel and attempting to sell star hotel
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X