For Quick Alerts
ALLOW NOTIFICATIONS  
For Daily Alerts

ಮೊದಲ 5 ಲಕ್ಷ ಜನರಿಗೆ ಉಚಿತ ಪ್ರವಾಸಿ ವೀಸಾಗಳು: ಪ್ರವಾಸೋದ್ಯಮಕ್ಕೆ ನಿರ್ಮಲಾ ಪ್ಯಾಕೇಜ್

|

ಕೋವಿಡ್-19 ಸಾಂಕ್ರಾಮಿಕ ಪೀಡಿತ ವಿವಿಧ ಕ್ಷೇತ್ರಗಳಿಗೆ 8 ಆರ್ಥಿಕ ಪರಿಹಾರ ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ. ಅವುಗಳಲ್ಲಿ ನಾಲ್ಕು ಹೊಸ ಯೋಜನೆಗಳಿವೆ.

 

ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ: 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆ

ಕೋವಿಡ್-19 ಎರಡನೇ ಅಲೆಯಿಂದಾಗಿರುವ ಪರಿಣಾಮಗಳನ್ನು ಅಂದಾಜಿಸಿ ಮೋದಿ ಸರ್ಕಾರವು ಈ ಹಣಕಾಸಿನ ಪರಿಹಾರ ಪ್ಯಾಕೇಜ್‌ ಗೋಷನೆ ಮಾಡಿದೆ. ಇದರಲ್ಲಿ ಕೊರೊನಾದಿಂದ ಹಾನಿಗೊಳಗಾದ ಕ್ಷೇತ್ರಗಳಿಗೆ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆಯನ್ನು ಘೋಷಿಸಲಾಗಿದೆ. ಆತ್ಮನಿರ್ಭರ ಭಾರತ್ ಕಾರ್ಯಕ್ರಮದ ಅಂಗವಾಗಿ ತುರ್ತು ಸಾಲ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ. ನೀಡಲಾಗಿದೆ.

ಮೊದಲ 5 ಲಕ್ಷ ಜನರಿಗೆ ಉಚಿತ ಪ್ರವಾಸಿ ವೀಸಾಗಳು: ನಿರ್ಮಲಾ ಸೀತಾರಾಮನ್

ಸಾಲ ಖಾತರಿ ಯೋಜನೆಯ ಮೂಲಕ 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸೀತಾರಾಮನ್ ಹೇಳಿದರು. ಕೆಲವು ಮಿತಿಗಳಲ್ಲಿ 100 ಪ್ರತಿಶತ ಗ್ಯಾರಂಟಿ ಅಡಿಯಲ್ಲಿ ಸಾಲ ನೀಡಲಾಗುವುದು

ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವ ಚಾಲನೆಯ ಭಾಗವಾಗಿ ಅಂತರಾಷ್ಟ್ರೀಯ ಪ್ರಯಾಣ ಆರಂಭಗೊಂಡ ಬಳಿಕ ಮೊದಲ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ನೀಡಲಾಗುವುದು.
ಈ ಉಚಿತ ವೀಸಾದ ಒಟ್ಟು ಪ್ಯಾಕೇಜ್ 100 ಕೋಟಿ ರೂ. ಆಗಿದೆ.

English summary

Free Visa For First 5 Lakh Tourists: FM Nirmala Sitharaman

Once visa issuance is restarted, first 5 lakh tourists visas will be issued free of charge, announced the finance minister.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X