For Quick Alerts
ALLOW NOTIFICATIONS  
For Daily Alerts

ಜನರಲ್ ಅಟ್ಲಾಂಟಿಕ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 3,675 ಕೋಟಿ ಹೂಡಿಕೆ

|

ಜನರಲ್ ಅಟ್ಲಾಂಟಿಕ್ ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 3,675 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಆರ್ ಆರ್ ವಿಎಲ್ ನಿಂದ ಬುಧವಾರ ಘೋಷಣೆ ಮಾಡಲಾಗಿದೆ. ಈ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯಮಾಪನವನ್ನು 4.285 ಲಕ್ಷ ಕೋಟಿಗೆ ಮಾಡಿದೆ.

ರಿಲಯನ್ಸ್ ರೀಟೇಲ್ ನಲ್ಲಿ ಕೆಕೆಆರ್ ನಿಂದ 5500 ಕೋಟಿ ರುಪಾಯಿ ಹೂಡಿಕೆ

ಜನರಲ್ ಅಟ್ಲಾಂಟಿಲ್ ಹೂಡಿಕೆ ಮೊತ್ತಕ್ಕೆ ಪೂರ್ತಿಯಾಗಿ ಡೈಲ್ಯೂಟೆಡ್ ಆಧಾರದಲ್ಲಿ ಆರ್ ಆರ್ ವಿಎಲ್ ನಲ್ಲಿ 0.84% ಪಾಲು ದೊರೆಯುವಂತೆ ಮಾಡುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲೇ ಜನರಲ್ ಅಟ್ಲಾಂಟಿಕ್ ಮಾಡುತ್ತಿರುವ ಎರಡನೇ ಹೂಡಿಕೆ ಇದು. ಈ ವರ್ಷದ ಆರಂಭದಲ್ಲಿ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 6,598.38 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು.

ಜನರಲ್ ಅಟ್ಲಾಂಟಿಕ್ ನಿಂದ RRVLನಲ್ಲಿ 3,675 ಕೋಟಿ ಹೂಡಿಕೆ

 

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಜನರಲ್ ಅಟ್ಲಾಂಟಿಕ್ ಜತೆಗಿನ ನಮ್ಮ ಬಾಂಧವ್ಯ ಇನ್ನಷ್ಟು ವಿಸ್ತರಣೆ ಆಗುತ್ತಿರುವುದು ಸಂತೋಷ ತಂದಿದೆ. ಗ್ರಾಹಕರು ಹಾಗೂ ವರ್ತಕರು ಎರಡೂ ವಲಯ ಗಟ್ಟಿಗೊಳಿಸಲು ಕೆಲಸ ಮಾಡುತ್ತೇವೆ. ಭಾರತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಹೂಡಿಕೆ ಮಾಡುತ್ತಿರುವ ಅನುಭವ ಜನರಲ್ ಅಟ್ಲಾಂಟಿಕ್ ಗೆ ಇದೆ. ಅವರ ಸಾಮರ್ಥ್ಯವೂ ಸೇರಿ ಅತಿ ದೊಡ್ಡ ಬದಲಾವಣೆ ಸಾಧ್ಯವಾಗಲಿದೆ ಎಂದಿದ್ದಾರೆ.

English summary

General Atlantic Will Invest 3675 Crore In Reliance Retail Ventures Limited

Reliance Industries Wednesday announced that, General Atlantic will invest 3675 crore in Reliance Retail Ventures Limited.
Company Search
COVID-19