For Quick Alerts
ALLOW NOTIFICATIONS  
For Daily Alerts

ಕೋವಿಡ್- 19 ಮಾತ್ರೆ FabiFlu ದರವನ್ನು 27% ಇಳಿಕೆ ಮಾಡಿದ ಗ್ಲೆನ್ ಮಾರ್ಕ್

|

ಕೋವಿಡ್- 19 ಮಾತ್ರೆ FabiFlu (ಫ್ಯಾಬ್ ಫ್ಲೂ) ಬೆಲೆಯನ್ನು 27% ಇಳಿಕೆ ಮಾಡಿ, ಪ್ರತಿ ಮಾತ್ರೆ ದರವನ್ನು 75 ರುಪಾಯಿಗೆ ತರಲಾಗಿದೆ. ಈ ಹಿಂದೆ ಮಾತ್ರೆಯನ್ನು ತಲಾ 103 ರುಪಾಯಿಗೆ ಮಾರಲಾಗುತ್ತಿತ್ತು. ಬೆಲೆ ಇಳಿಕೆ ಮೂಲಕ ಹೆಚ್ಚಿನ ಮಾರಾಟ ಮತ್ತು ಪ್ರಮಾಣದ ಅನುಕೂಲವನ್ನು ಕಂಪೆನಿಯು ಗ್ರಾಹಕರಿಗೆ ವರ್ಗಾಯಿಸಿದೆ ಎಂದು ತಿಳಿಸಲಾಗಿದೆ.

ಗ್ಲೆನ್ ಮಾರ್ಕ್ ನಿಂದ ಕೊರೊನಾಗೆ ಮಾತ್ರೆ; ಒಂದಕ್ಕೆ 103 ರುಪಾಯಿ ಬೆಲೆ ನಿಗದಿ

ಈ ಔಷಧಿಗೆ ಬಳಕೆಯಾಗುವ ಪದಾರ್ಥಗಳು ಮತ್ತು ಫಾರ್ಮುಲೇಷನ್ ಗಳು ಭಾರತದಲ್ಲೇ ಇರುವ ಗ್ಲೆನ್ ಮಾರ್ಕ್ ಕಾರ್ಖಾನೆಯಲ್ಲಿ ತಯಾರು ಮಾಡಲಾಗುತ್ತದೆ. ಉಳಿದ ದೇಶಗಳಲ್ಲಿ ಅನುಮತಿ ಸಿಕ್ಕಿರುವ Favipiravirಗಿಂತಲೂ ಭಾರತದಲ್ಲಿ ಬೆಲೆ ಕಡಿಮೆ ಇದೆ. ಈಗ ಬೆಲೆ ಮತ್ತೂ ಕಡಿಮೆ ಮಾಡಿರುವುದರಿಂದ ಕೊರೊನಾ ಪೀಡಿತರಿಗೆ ಇನ್ನೂ ಕೈಗೆಟುಕುವಂತಾಗುತ್ತದೆ ಎಂದು ಕಂಪೆನಿಯ ಹಿರಿಯ ಉಪಾಧ್ಯಕ್ಷ ಅಲೋಕ್ ಮಲಿಕ್ ತಿಳಿಸಿದ್ದಾರೆ.

ಕೋವಿಡ್- 19 ಮಾತ್ರೆ FabiFlu ದರ 27% ಇಳಿಕೆ ಮಾಡಿದ ಗ್ಲೆನ್ ಮಾರ್ಕ್

 

ಫ್ಯಾಬಿಫ್ಲೂ ಮಾತ್ರೆ ಬೆಲೆ ರಷ್ಯಾದಲ್ಲಿ ಒಂದಕ್ಕೆ 600 ರುಪಾಯಿ ಇದ್ದರೆ, ಜಪಾನ್ ನಲ್ಲಿ 378, ಬಾಂಗ್ಲಾದೇಶ್ ನಲ್ಲಿ 350 ಹಾಗೂ ಚೀನಾದಲ್ಲಿ 215 ರುಪಾಯಿ ಇದೆ. ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ದರ ವಿಪರೀತ ಕಡಿಮೆ ಇದೆ ಎಂದು ಕಂಪೆನಿ ಹೇಳಿದೆ. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಕಳೆದ ತಿಂಗಳು ಗ್ಲೆನ್ ಮಾರ್ಕ್ ನ ಜೆನರಿಕ್ ಬ್ರ್ಯಾಂಡ್ Favipiravirಗೆ ಅನುಮತಿ ನೀಡಿದೆ. ಅದಕ್ಕೂ ಮುನ್ನ ನೂರೈವತ್ತು ರೋಗಿಗಳ ಮೇಲೆ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲಾಗಿದೆ.

English summary

Glenmark Slashed Covid- 19 Tablet Price By 27 Percent

Glenmark pharmaceuticals recently released Covid- 19 tablet FabFlu price slashed by 27%. Now price fixed 75 rupees per tablet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more