For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಸರ್ಜಾಪುರದಲ್ಲಿ 15 ಎಕರೆ ಜಾಗ ಖರೀದಿಸಿದ ಗೋದ್ರೆಜ್ ಪ್ರಾಪರ್ಟೀಸ್

|

ಹೌಸಿಂಗ್ ಪ್ರಾಜೆಕ್ಟ್ ಅಭಿವೃದ್ಧಿ ಪಡಿಸುವ ಸಲುವಾಗಿ ಬೆಂಗಳೂರಿನಲ್ಲಿ 15 ಎಕರೆ ಜಾಗ ಖರೀದಿ ಮಾಡಿರುವುದಾಗಿ ಮಂಗಳವಾರ ಗೋದ್ರೆಜ್ ಪ್ರಾಪರ್ಟೀಸ್ ತಿಳಿಸಿದೆ. ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಈ ಬಗ್ಗೆ ಕಂಪೆನಿ ತಿಳಿಸಿದ್ದು, ಬೆಂಗಳೂರಿನ ಸರ್ಜಾಪುರದಲ್ಲಿ ಅತ್ಯುತ್ತಮ ಸ್ಥಳವೊಂದರಲ್ಲಿ ಔಟ್ ರೈಟ್ ವ್ಯವಹಾರವೊಂದನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

27 ಎಕರೆ ಜಾಗ 1,359 ಕೋಟಿಗೆ ಬಿಕರಿ: ಖರೀದಿಸಿದ್ದು ಯಾರು, ಎಲ್ಲಿ?

ಗೋದ್ರೆಜ್ ಸಮೂಹದಲ್ಲಿ ವ್ಯವಹಾರದ ಒಂದು ಭಾಗ ಗೋದ್ರೆಜ್ ಪ್ರಾಪರ್ಟೀಸ್. ಈ ಭೂಮಿ ಖರೀದಿಗಾಗಿ ಎಷ್ಟು ಮೊತ್ತ ನೀಡಲಾಗಿದೆ ಹಾಗೂ ಮಾರಾಟ ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ಬಹಿರಂಗ ಮಾಡಿಲ್ಲ. 15 ಎಕರೆಯಷ್ಟು ವಿಶಾಲವಾಗಿ ಈ ಜಾಗ ದೊರೆಯಲಿದೆ. 16 ಲಕ್ಷ ಚದರಡಿಯಷ್ಟು ಮಾರಾಟ ಮಾಡಬಹುದಾದ ಸ್ಥಳ ಸಿಗಲಿದೆ. ಅಲ್ಲಿ ವಿವಿಧ ಅಳತೆಯ ವಸತಿ ಅಪಾರ್ಟ್ ಮೆಂಟ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಸರ್ಜಾಪುರದಲ್ಲಿ 15 ಎಕರೆ ಜಾಗ ಖರೀದಿಸಿದ ಗೋದ್ರೆಜ್ ಪ್ರಾಪರ್ಟೀಸ್

 

ಗೋದ್ರೆಜ್ ಪ್ರಾಪರ್ಟೀಸ್ ನ ಕಾರ್ಯ ನಿರ್ವಾಹಕ ಅಧ್ಯಕ್ಷ ಪಿರೋಜ್ ಶಾ ಗೋದ್ರೆಜ್ ಮಾತನಾಡಿ, ನಮ್ಮ ಪಾಲಿಗೆ ಬೆಂಗಳೂರು ಪ್ರಮುಖವಾದ ಮಾರ್ಕೆಟ್. ದೇಶದ ಪ್ರಮುಖ ರಿಯಲ್ ಎಸ್ಟೇಟ್ ಮಾರ್ಕೆಟ್ ನಲ್ಲಿ ನಮ್ಮ ಅಸ್ತಿತ್ವವನ್ನು ಇನ್ನಷ್ಟು ಗಾಢವಾಗಿ ಇರುವಂತೆ ಮಾಡಬೇಕು ಎಂಬ ನಮ್ಮ ವ್ಯೂಹಕ್ಕೆ ಈ ಪ್ರಾಜೆಕ್ಟ್ ಸೇರ್ಪಡೆಯಿಂದ ಅನುಕೂಲ ಆಗಲಿದೆ ಎಂದಿದ್ದಾರೆ.

English summary

Godrej Properties Purchased Around 15 Acre Land In Bengaluru's Sarjapur

Godrej Properties Tuesday said that, it has purchased around 15 acre land in Bengaluru's Sarjapur to construct residential apartments.
Company Search
COVID-19