For Quick Alerts
ALLOW NOTIFICATIONS  
For Daily Alerts

2020-21ರಲ್ಲಿ ಚಿನ್ನದ ಇಟಿಎಫ್‌ನಲ್ಲಿ 6,919 ಕೋಟಿ ರೂಪಾಯಿ ಹೂಡಿಕೆ

|

ಕೊರೊನಾವೈರಸ್ ಸಾಂಕ್ರಾಮಿಕ ಹೊರತಾಗಿಯು ಭಾರತದಲ್ಲಿ ಚಿನ್ನದ ಮೇಲಿನ ಆಕರ್ಷಣೆ ಕಡಿಮೆಯಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಚಿನ್ನದ ಇಟಿಎಫ್‌ಗಳ ಮೇಲಿನ ಹೂಡಿಕೆ.

 

2020-21ರಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಹೂಡಿಕೆದಾರರು 6,900 ಕೋಟಿ ರೂಪಾಯಿ ಮಾಡಿದ್ದಾರೆ. ಇದು ಹಿಂದಿನ ಹಣಕಾಸು ವರ್ಷದ ಮೊತ್ತಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 2019-20ರಲ್ಲಿ 1,614 ಕೋಟಿ ರೂಪಾಯಿ ಹೂಡಿಕೆ ಆಗಿತ್ತು, ಈ ಮೂಲಕ ಸತತ ಎರಡನೇ ವರ್ಷದ ಒಳಹರಿವನ್ನು ಸಹ ಸೂಚಿಸುತ್ತದೆ.

2020-21ರಲ್ಲಿ ಚಿನ್ನದ ಇಟಿಎಫ್‌ನಲ್ಲಿ 6,919 ಕೋಟಿ ರೂಪಾಯಿ ಹೂಡಿಕೆ

ಇದಕ್ಕೂ ಮುನ್ನ, ಚಿನ್ನದ ಇಟಿಎಫ್‌ಗಳು 2018-19ರಲ್ಲಿ 412 ಕೋಟಿ ರೂ., 2017-18ರಲ್ಲಿ 835 ಕೋಟಿ ರೂ., 2016-17ರಲ್ಲಿ 775 ಕೋಟಿ ರೂ., 2015-16ರಲ್ಲಿ 903 ಕೋಟಿ ರೂ., 2014-15ರಲ್ಲಿ 1,475 ಕೋಟಿ ರೂ. 2013-14ರಲ್ಲಿ 2,293 ಕೋಟಿ ರೂ., 2012-13ರಲ್ಲಿ 1,414 ಕೋಟಿ ರೂಪಾಯಿ ಹೂಡಿಕೆ ಆಗಿತ್ತು.

ಚಿನ್ನದ ಇಟಿಎಫ್‌ ನಿರ್ವಹಣಾ ಸಂಪತ್ತು ಮೌಲ್ಯವು ಈ ವರ್ಷದ ಮಾರ್ಚ್‌ ಕೊನೆಗೆ ಶೇ. 78ರಷ್ಟು ಹೆಚ್ಚಾಗಿದ್ದು, 14,123 ಕೋಟಿ ರೂಪಾಯಿಗೆ ತಲುಪಿದೆ. 2020ರ ಮಾರ್ಚ್‌ ಅಂತ್ಯದ ವೇಳೆಗೆ ಇದು 7,949 ಕೋಟಿ ರೂಪಾಯಿ ಆಗಿತ್ತು.

English summary

Gold ETF Inflows Up Rs 6,919 Crore In FY21

Investors infused over Rs 6,900 crore in gold exchange-traded funds (ETFs) in 2020-21.
Story first published: Monday, April 12, 2021, 9:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X