For Quick Alerts
ALLOW NOTIFICATIONS  
For Daily Alerts

ಚಿನ್ನದ ದಾಖಲೆ ಬೆಲೆಯಿಂದ 5500 ರುಪಾಯಿ ಕುಸಿತ; ಬೆಳ್ಳಿ ಬೆಲೆಯಲ್ಲೂ ಇಳಿಕೆ

By ಅನಿಲ್ ಆಚಾರ್
|

ಭಾರತದ ಮಾರುಕಟ್ಟೆಯಲ್ಲಿ ಚಿನ್ನ- ಬೆಳ್ಳಿ ದರದಲ್ಲಿ ಮಂಗಳವಾರ ಇಳಿಕೆ ಆಗಿದೆ. ಜಾಗತಿಕ ಮಟ್ಟದ ಬೆಲೆಯನ್ನು ಅನಸರಿಸಿ, ಭಾರತದ ಮಾರ್ಕೆಟ್ ನಲ್ಲೂ ಬೆಲೆ ಕುಸಿದಿದೆ. MCXನಲ್ಲಿ ಡಿಸೆಂಬರ್ ಫ್ಯೂಚರ್ಸ್ ನಲ್ಲಿ 0.2% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,584 ರುಪಾಯಿ ಇದೆ. ಇನ್ನು ಬೆಳ್ಳಿ ದರವು 0.35% ಇಳಿದು, 61,882 ರುಪಾಯಿಯಲ್ಲಿ ವಹಿವಾಟು ನಡೆಸಿದೆ.

ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?

ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರವು 0.24%, ಬೆಳ್ಳಿ 0.6% ಏರಿಕೆ ದಾಖಲಿಸಿತ್ತು. ಯುಎಸ್ ಡಾಲರ್ ಮೌಲ್ಯದಲ್ಲಿ ಚೇತರಿಕೆ ಹಾಗೂ ಯುಎಸ್ ಆರ್ಥಿಕ ಉತ್ತೇಜನ ಮಾತುಕತೆಯಲ್ಲಿನ ಅನಿಶ್ಚಿತತೆ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಕಳೆದ ಎರಡು ತಿಂಗಳಲ್ಲಿ ಚಿನ್ನದ ದರವು ಚಲನೆ ಕಳೆದುಕೊಂಡಿದೆ. ಕಳೆದ ಆಗಸ್ಟ್ ನಲ್ಲಿ ಭಾರತದಲ್ಲಿ ಚಿನ್ನದ ದರದಲ್ಲಿ ದಾಖಲೆಯ 56,200 ರುಪಾಯಿ ತಲುಪಿತ್ತು.

ಯುಎಸ್ ಡಾಲರ್ ಮೌಲ್ಯ ಸ್ಥಿರ
 

ಯುಎಸ್ ಡಾಲರ್ ಮೌಲ್ಯ ಸ್ಥಿರ

ಯುಎಸ್ ಡಾಲರ್ ಮೌಲ್ಯ ಸ್ಥಿರವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ಬೆಲೆ ಇಳಿಕೆ ಆಗಿದೆ. ಸ್ಪಾಟ್ ಗೋಲ್ಡ್ 0.1% ಕುಸಿದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1903.16 ವಹಿವಾಟು ನಡೆಸಿದೆ. ಹೂಡಿಕೆದಾರರಿಗೆ ಯುಎಸ್ ಆರ್ಥಿಕ ಉತ್ತೇಜನ ಮಾತುಕತೆ ಭರವಸೆ ಹಿನ್ನೆಲೆಯಲ್ಲಿ ಚಿನ್ನದ ನಷ್ಟಕ್ಕೆ ಮಿತಿ ಬಿದ್ದಿದೆ. ಇತರ ಬೆಲೆ ಬಾಳುವ ಲೋಹದಲ್ಲಿ ಬೆಳ್ಳಿ ದರವು 0.3% ಕುಸಿದು, ಪ್ರತಿ ಔನ್ಸ್ ಗೆ $ 24.43 ಇದ್ದು, ಪ್ಲಾಟಿನಂ ಮತ್ತು ಪಲಾಡಿಯಂ 0.1% ಏರಿಕೆ ಕಂಡು, $ 856.85ರಲ್ಲಿ ವ್ಯವಹಾರ ನಡೆಸುತ್ತಿದೆ.

ಚಿನ್ನದ ದರದ ದಿಕ್ಕು ಎತ್ತ ಸಾಗುತ್ತದೆ?

ಚಿನ್ನದ ದರದ ದಿಕ್ಕು ಎತ್ತ ಸಾಗುತ್ತದೆ?

ಇಟಿಎಫ್ ಹೂಡಿಕೆದಾರರು ಚಿನ್ನದ ದರದ ದಿಕ್ಕು ಎತ್ತ ಸಾಗುತ್ತದೆ ಎಂಬ ಕಡೆಗೆ ನೋಡುತ್ತಿದ್ದಾರೆ. ಇನ್ನು ವಿಶ್ವದ ಅತಿ ದೊಡ್ಡ ಚಿನ್ನದ ಬೆಂಬಲಿತ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಅಥವಾ ಚಿನ್ನದ ಇಟಿಎಫ್ ಎಸ್ ಪಿಡಿಆರ್ ಟ್ರಸ್ಟ್ ತಿಳಿಸಿರುವ ಪ್ರಕಾರ, ಅದರ ಹೋಲ್ಡಿಂಗ್ 0.02% ಹೆಚ್ಚಳವಾಗಿ, ಶುಕ್ರವಾರ 1272.56 ಟನ್ ಇದ್ದದ್ದು 1272.85 ಟನ್ ಗೆ ಏರಿಕೆಯಾಗಿದೆ. "ಅಧ್ಯಕ್ಷೀಯ ಚುನಾವಣೆಗೂ ಮುನ್ನ ಯುಎಸ್ ನಿಂದ ಹಣಕಾಸು ಉತ್ತೇಜನದ ನಿರೀಕ್ಷೆ ಮತ್ತು ಯುಎಸ್- ಚೀನಾ ಮಧ್ಯೆ ಪರಿಹಾರವಾಗದ ಉದ್ವಿಗ್ನತೆಯಿಂದಾಗಿ ಚಿನ್ನದ ದರಕ್ಕೆ ಬೆಂಬಲ ಸಿಗುತ್ತದೆ. ಆದರೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದು, ಚಿನ್ನದ ಬೇಡಿಕೆ ಕಡಿಮೆ ಆಗುವುದರಿಂದ ಪ್ರಮುಖ ಏರಿಕೆಗೆ ಪೆಟ್ಟು ಬೀಳಬಹುದು," ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

$ 1920 ದರವನ್ನು ದಾಟಬೇಕಾಗುತ್ತದೆ
 

$ 1920 ದರವನ್ನು ದಾಟಬೇಕಾಗುತ್ತದೆ

ಚಿನ್ನಕ್ಕೆ (ಲಂಡನ್ ಸ್ಪಾಟ್) $ 1840ರಲ್ಲಿ ಬೆಂಬಲ ದೊರೆಯಲಿದೆ. ಇನ್ನೂ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಕಾಣಬೇಕು ಎಂದಾದಲ್ಲಿ $ 1920 ದರವನ್ನು ದಾಟಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದದಲ್ಲಿನ ಪ್ರಗತಿ ಬಗ್ಗೆ ಚಿನ್ನದ ವ್ಯವಹಾರಸ್ಥರು ಎದುರು ನೋಡುತ್ತಿದ್ದಾರೆ. ಇದರ ಜತೆಗೆ ಯುಎಸ್ ಅಧ್ಯಕ್ಷೀಯ ಚುನಾವಣೆಯ ಅಂತಿಮ ಸಂವಾದದ ಕಡೆಗೂ ಗಮನ ನೆಟ್ಟಿದೆ. ಬ್ರೆಕ್ಸಿಟ್ ವ್ಯವಹಾರ ಒಪ್ಪಂದ ಮಾತುಕತೆ ಮುಂದಿನ ವಾರ ಮುಂದುವರಿಯುವ ಸಾಧ್ಯತೆ ಇದೆ. ಒಂದು ವೇಳೆ ಯುರೋಪಿಯನ್ ಒಕ್ಕೂಟ ಹಾಗೂ ಯುಕೆ ಮಧ್ಯೆ ಒಪ್ಪಂದ ವಿಫಲ ಆದಲ್ಲಿ ಪರಿಸ್ಥಿತಿ ಬೇರೆ ಆಗಲಿದೆ. ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಮಧ್ಯೆ ಸಂವಾದ ಏನಾಗಬಹುದು ಎಂಬ ನಿರೀಕ್ಷೆಯೂ ಇದೆ.

English summary

Gold Price Fall Today, Down 5500 Rupees From Record High

Gold price fall today and down 5500 rupees from record high. Silver rate also drop.
Company Search
COVID-19