For Quick Alerts
ALLOW NOTIFICATIONS  
For Daily Alerts

ಚಿನ್ನದ ದರ ಭಾರತದಲ್ಲಿ 70 ಸಾವಿರ ಮುಟ್ಟಬಹುದು: ICICI ಡೈರೆಕ್ಟ್

|

ಭಾರತದಲ್ಲಿ ಹತ್ತು ಗ್ರಾಮ್ ಚಿನ್ನದ ಬೆಲೆ 70 ಸಾವಿರ ರುಪಾಯಿ ಮುಟ್ಟಬಹುದು ಎಂದು ಐಸಿಐಸಿಐ ಡೈರೆಕ್ಟ್ ಈಚೆಗೆ ತನ್ನ ವರದಿಯಲ್ಲಿ ತಿಳಿಸಿದೆ. ದೀರ್ಘಾವಧಿ ಹೂಡಿಕೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಚಿನ್ನವನ್ನು ಖರೀದಿ ಮಾಡಬಹುದು. ಆ ರೀತಿಯ ಹೂಡಿಕೆದಾರರಿಗೆ ಒಳ್ಳೆ ರಿಟರ್ನ್ಸ್ ನೀಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇವತ್ತಿನ ಚಿನ್ನದ ದರದ ಲೆಕ್ಕಾಚಾರದಲ್ಲಿ ಹೇಳಬೇಕು ಅಂದರೆ, 35ರಿಂದ 40% ರಿಟರ್ನ್ಸ್ ಆಗುತ್ತದೆ.

ಈಗಲೇ ಹತ್ತು ಗ್ರಾಮ್ ಚಿನ್ನದ ದರ 50 ಸಾವಿರ ದಾಟಿದೆ. ಇನ್ನೂ ಮೇಲಕ್ಕೆ ಹೋಗುತ್ತಾ ಅನ್ನೋದು ಕೆಲವರು ಪ್ರಶ್ನೆ. ಕಳೆದ ಎರಡು ವರ್ಷದಲ್ಲೇ ಚಿನ್ನದ ದರ 75% ತನಕ ಹೆಚ್ಚಳವಾಗಿ ಹೊಸ ದಾಖಲೆ ಬರೆದಿದೆ. ಅಷ್ಟೇ ಯಾಕೆ, 2020ನೇ ಇಸವಿಯಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 30% ಬೆಲೆ ಏರಿಕೆ ಆಗಿದೆ. ಇದಕ್ಕೆ ಕಾರಣ ಆಗಿರುವುದು ಕೊರೊನಾ. ಉಳಿದ ಹೂಡಿಕೆ ಏನಾಗಬಹುದೋ ಎಂಬ ಆತಂಕದಲ್ಲಿ ಚಿನ್ನದ ಮೇಲೆ ಬಂಡವಾಳ ಹಾಕುವವರು ಹೆಚ್ಚಾಗಿದ್ದರಿಂದ ದರ ಹೆಚ್ಚಾಗಿದೆ.

ಅಮೆರಿಕ- ಚೀನಾ ಮಧ್ಯೆ ವಾಣಿಜ್ಯ ಸಮರ
 

ಅಮೆರಿಕ- ಚೀನಾ ಮಧ್ಯೆ ವಾಣಿಜ್ಯ ಸಮರ

ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಯಾದ ಅಮೆರಿಕ ಮತ್ತು ಚೀನಾದ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರದ ಕಾರಣಕ್ಕೆ 2018ರ ಅಕ್ಟೋಬರ್ ನಿಂದಲೂ ಚಿನ್ನದ ದರ ಏರುತ್ತಲೇ ಸಾಗಿದೆ. ಈ ವರ್ಷ ಅದು ಮತ್ತೂ ಹೆಚ್ಚಾಯಿತು. ಅಂದುಕೊಂಡಂಥ ವೇಗದಲ್ಲಿ ಜಾಗತಿಕ ಆರ್ಥಿಕತೆ ಸುಧಾರಿಸುವ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೆ ಹೂಡಿಕೆದಾರರು ಚಿನ್ನದ ಕಡೆಗೆ ಚಿತ್ತ ಹರಿಸಿದ್ದಾರೆ.

ಕನಿಷ್ಠ ಮೂರರಿಂದ ನಾಲ್ಕು ವರ್ಷ ಬೆಲೆ ಹೆಚ್ಚಳ

ಕನಿಷ್ಠ ಮೂರರಿಂದ ನಾಲ್ಕು ವರ್ಷ ಬೆಲೆ ಹೆಚ್ಚಳ

ಈ ಹಿಂದಿನ ಐದು ದಶಕದ ಐತಿಹಾಸಿಕ ಚಿನ್ನದ ಏರಿಕೆಗಳ ಕಡೆಗೆ ಕಣ್ಣು ಹಾಯಿಸಿದರೆ, ಚಿನ್ನದ ಮೇಲ್ಮುಖ ಪಯಣ ಕನಿಷ್ಠ ಮೂರರಿಂದ ನಾಲ್ಕು ವರ್ಷಕ್ಕೆ ಕಡಿಮೆ ನಿಂತಿಲ್ಲ. ಈಗಿನ ಲೆಕ್ಕದಲ್ಲಿ ಹೇಳಬೇಕು ಅಂದರೆ ಇನ್ನೂ ಎರಡನೇ ವರ್ಷ. ಆದ್ದರಿಂದ ಮೇಲ್ಮುಖವಾಗಿ ಇನ್ನೂ ಕೆಲ ವರ್ಷಗಳ ಕಾಲ ಚಿನ್ನದ ಬೆಲೆ ಸಾಗಬಹುದು.

5ರಿಂದ 15 ಪರ್ಸೆಂಟ್ ನಷ್ಟನ್ನು ಹೂಡಿಕೆ ಮಾಡಬಹುದು

5ರಿಂದ 15 ಪರ್ಸೆಂಟ್ ನಷ್ಟನ್ನು ಹೂಡಿಕೆ ಮಾಡಬಹುದು

ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಉತ್ತೇಜನ ಘೋಷಣೆಗಳನ್ನು ಪ್ರಮುಖವಾದ ಕೇಂದ್ರ ಬ್ಯಾಂಕ್ ಗಳು ಮಾಡಿವೆ. ಬಡ್ಡಿ ದರ ಬಹಳ ಕಡಿಮೆ ಇದೆ. ಖರೀದಿಯಲ್ಲಿ ಆಸಕ್ತಿ ಕೂಡ ಕೇಂದ್ರ ಬ್ಯಾಂಕ್ ಗಳಿಗೆ ಜಾಸ್ತಿ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೀಗೇ ಇರುತ್ತದೆ ಎಂದು ಐಸಿಐಸಿಐ ಡೈರೆಕ್ಟ್ ವರದಿಯಲ್ಲಿ ಹೇಳಲಾಗಿದೆ. ಭಾರತೀಯ ಹೂಡಿಕೆದಾರರು ತಮ್ಮ ಒಟ್ಟಾರೆ ಪೋರ್ಟ್ ಫೋಲಿಯೋದಲ್ಲಿ 5ರಿಂದ 15 ಪರ್ಸೆಂಟ್ ನಷ್ಟನ್ನು ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಎಂದು ಸಲಹೆ ಕೂಡ ಮಾಡಲಾಗಿದೆ.

English summary

Gold Price In India Could Touch 70000: ICICI Direct

According to ICICI direct report, gold rate in India could touch 70,000 for 10 gm.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X