For Quick Alerts
ALLOW NOTIFICATIONS  
For Daily Alerts

ಸತತ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತ

|

ಚಿನ್ನದ ಬೆಲೆ ಸತತ ಎರಡನೇ ದಿನ ಕುಸಿತವಾಗಿದೆ. ಅಕ್ಟೋಬರ್ 29ರಂದು ಆರಂಭಿಕ ಅವಧಿಯಲ್ಲಿ 54 ರು ಕಳೆದುಕೊಂಡು ಮುಂಬೈನ ರೀಟೇಲ್ ಮಾರುಕಟ್ಟೆಯಲ್ಲಿ 10 ಗ್ರಾಂಗೆ 50, 989 ರು ನಷ್ಟಿತ್ತು.

ಎಂಸಿಎಕ್ಸ್ ನಲ್ಲಿ ಬೆಳಿಗ್ಗೆ 10.30 ಕ್ಕೆ 50 ರೂ (0.10 ಶೇಕಡಾ) ನಿಂದ 50,452 ರೂ.ಗೆ ವಹಿವಾಟು ನಡೆಸಿದೆ. ಒಂದು ಹಂತದಲ್ಲಿ ಅದು 50,405 ರೂ.ಗಳ ಕನಿಷ್ಠ ಮಟ್ಟವನ್ನು ಮುಟ್ಟಿತು.

ಭಾರತದಲ್ಲಿ ಒಟ್ಟಾರೆ ಚಿನ್ನದ ಬೆಲೆಯಲ್ಲಿ ಮಧ್ಯಾಹ್ನದ ವಹಿವಾಟಿನಲ್ಲಿ 35 ರು ಕಳೆದುಕೊಂಡು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47, 380 ರು ಹಾಗೂ 24 ಕ್ಯಾರೆಟ್ ಬೆಲೆ 51, 690 ರು ನಷ್ಟಿದೆ

ಸತತ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತ

 

ಮುಂದಿನ ವಾರದ ಯುಎಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡಾಲರ್ ಸ್ಥಿರತೆ ಪಡೆದುಕೊಂಡಿದೆ. ಜಾಗತಿಕ ವಿದ್ಯಮಾನಗಳ ನಡುವೆ ಇನ್ನೊಂದು ವಾರಗಳ ಕಾಲ ಚಿನ್ನದ ಬೆಲೆ ಕುಸಿತದ ನಿರೀಕ್ಷೆಯಿದೆ. ರಷ್ಯಾ, ಫ್ರಾನ್ಸ್ ಮುಂತಾದ ರಾಷ್ಟ್ರಗಳಲ್ಲಿ ಕೊವಿಡ್ 19 ಮತ್ತೊಮ್ಮೆ ಆರ್ಭಟ ಶುರು ಮಾಡಿರುವುದರಿಂದ ಆರ್ಥಿಕ ಹೊಡೆತ ಬಿದ್ದಿದೆ.

ಜುಲೈ -ಸೆಪ್ಟೆಂಬರ್ ಅವಧಿಯಲ್ಲಿ ಚೀನಾದಲ್ಲಿ ಚಿನ್ನದ ಬೇಡಿಕೆ ಶೇ 28.7ರ್ಷ್ಟು ಏರಿಕೆ ಕಂಡಿದೆ ಎಂದು ಚೀನಾದ ಚಿನ್ನದ ಅಸೋಸಿಯೇಷನ್ಸ್ ವರದಿ ಮಾಡಿದೆ. ಸ್ಪಾಟ್ ಚಿನ್ನ 29.37 ಡಾಲರ್ ಕುಸಿತ ಕಂಡು 1,878.70 ಡಾಲರ್ ಪ್ರತಿ ಔನ್ಸ್ ನಂತೆ ವಹಿವಾಟು ನಡೆಸಿತ್ತು ಎಂದು ಲಂಡನ್ ಟ್ರೆಡಿಂಗ್ ಹೇಳಿದೆ.

ಭಾರತದಲ್ಲಿ ಚಿನ್ನಾಭರಣ ಮಾರಾಟ ನಿಧಾನಗತಿಯಲ್ಲಿ ಪ್ರಗತಿ ಕಾಣುತ್ತಿದೆ. ದಕ್ಷಿಣ ಭಾರತದಲ್ಲಿ ಕೊವಿಡ್ 19 ಸ್ಥಿರತೆ ಪಡೆದುಕೊಳ್ಳುತ್ತಿದ್ದು, ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಾಗಲಿದೆ. ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ವಹಿವಾಟು ಆಶಾದಾಯಕವಾಗಿಲ್ಲ. ಶೇ 45 ರಿಂದ 50% ಬೇಡಿಕೆ ಕುಸಿತವಾಗಿದೆ, ದೀಪಾವಳಿ ವೇಳೆಗೆ ಹೆಚ್ಚಿನ ವಹಿವಾಟಿನ ನಿರೀಕ್ಷೆಯಿದೆ ಎಂದು ಭಾರತೀಯ ಚಿನಿವಾರ ಪೇಟೆ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

English summary

Gold prices Fall for second day silver rates also slip

Gold prices Fall for second day at Rs 50,989/10 gm Silver prices dropped Rs 561 to Rs 61,430 per kg from its closing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X