For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ 7 ವರ್ಷಗಳಲ್ಲೇ ಅತಿ ಎತ್ತರಕ್ಕೆ ಜಿಗಿತ

|

ಜಗತ್ತಿನಾದ್ಯಂತ ಕೊರೊನಾವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕಳೆದ ಏಳು ವರ್ಷಗಳಲ್ಲೇ ಅತ್ಯಂತ ಎತ್ತರಕ್ಕೆ ಜಿಗಿದಿದೆ.

 

ವಿಶ್ವದ ಆರ್ಥಿಕತೆಯು ಕೊರೊನಾವೈರಸ್ ಹರಡುವಿಕೆಯಿಂದ ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದು, ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ. ಹೀಗಾಗಿ ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲೆ ಹೂಡಿಕೆದಾರರು ಒಲವು ತೋರುತ್ತಿದ್ದಾರೆ.

ಚಿನ್ನದ ಬೆಲೆ ಕಳೆದ 7 ವರ್ಷಗಳಲ್ಲೇ ಅತಿ ಎತ್ತರಕ್ಕೆ ಜಿಗಿತ

ಅಮೆರಿಕಾದಲ್ಲಿ ಎದುರಾಗಿರುವ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಯುಎಸ್ ಫೆಡರಲ್ ರಿಸರ್ವ್‌ ಬ್ಯಾಂಕ್ ವ್ಯಾಪಕ ನಿರ್ಧಾರಗಳನ್ನು ತೆಗದುಕೊಂಡಿದೆ. ಹೀಗಾಗಿ ಚಿನ್ನವು ಕಳೆದ ಏಳು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ಯುಎಸ್ ಫೆಡರಲ್ 2.3 ಟ್ರಿಲಿಯನ್ ಡಾಲರ್ ಅನ್ನು ಹೆಚ್ಚುವರಿ ಸಹಾಯವಾಗಿ ಗುರುವಾರ ಘೋಷಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚುತ್ತಿದ್ದು, ಸತತ 3ನೇ ವಾರವು ನಿರುದ್ಯೋಗದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಷೇರುಪೇಟೆ ಏರಿದರೂ ಆರ್ಥಿಕತೆ ಮತ್ತಷ್ಟು ನಿಧಾನಗೊಳ್ಳುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಮುಂದಾದರು.

ನ್ಯೂಯಾರ್ಕ್ ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆಯು 4.1 ಪರ್ಸೆಂಟ್ ಏರಿಕೆಯಾಗಿ 1,752.80 ಡಾಲರ್‌ಗೆ ತಲುಪಿದೆ. ಇದು 2012ರ ಅಕ್ಟೋಬರ್‌ ನಂತರದ ಗರಿಷ್ಟ ಚಿನ್ನದ ದರವಾಗಿದೆ.

English summary

Gold Prices Jump To 7 Year High

Gold reached a seven-year high as massive U.S. filings for jobless benefits and sweeping steps by the Federal Reserve
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X